ಪಾಕಿಸ್ತಾನಕ್ಕೆ ಬಿನ್ ಲ್ಯಾಡನ್ ಎಲ್ಲಿದ್ದಾನೆ ಎಂಬುದು ಗೊತ್ತಿರಲಿಲ್ಲ: ಬರಾಕ್ ಒಬಾಮ

ಬರಾಕ್ ಒಬಾಮ
ಬರಾಕ್ ಒಬಾಮ
ಹಿಂದೂಸ್ತಾನ್ ಲೀಡರ್ಶಿಪ್ ಶೃಂಗಸಭೆಯಲ್ಲಿ ಭಾಗವಹಿಸಿ ಮಾತನಾಡಿರುವ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ, ಪಾಕಿಸ್ತಾನದ ಬಗ್ಗೆಯೂ ಮಾತನಾಡಿದ್ದು, ಅಲ್ ಖೈದಾ ಉಗ್ರ  ಬಿನ್ ಲ್ಯಾಡನ್ ಎಲ್ಲಿದ್ದ ಎಂಬುದು ಪಾಕಿಸ್ತಾನಕ್ಕೆ ಗೊತ್ತಿರಲಿಲ್ಲ ಎಂದಿದ್ದಾರೆ. 
ಲ್ಯಾಡನ್ ಎಲ್ಲಿದ್ದ ಎಂಬುದು ಪಾಕಿಸ್ತಾನಕ್ಕೆ ಗೊತ್ತಿತ್ತಾ? ಎಂಬ ಪ್ರಶ್ನೆಗೆ ಉತ್ತರಿಸಿರುವ ಬರಾಕ್ ಒಬಾಮ, ಲ್ಯಾಡನ್ ನ ವಿಳಾಸದ ಬಗ್ಗೆ ಪಾಕಿಸ್ತಾನಕ್ಕೆ ಮಾಹಿತಿ ಇತ್ತು ಎಂಬುದನ್ನು ಖಾತ್ರಿ ಪಡಿಸುವ ಸಾಕ್ಷ್ಯ ನಮ್ಮ ಬಳಿ ಇರಲಿಲ್ಲ ಎಂದು ಹೇಳಿದ್ದಾರೆ. 
ಪಾಕಿಸ್ತಾನದ ವಿಷಯದಲ್ಲಿ ಅಮೆರಿಕ ನಿರಂತರ ಅಡ್ಡಿ ಎದುರಿಸಿತ್ತು, ಆದರೆ ನಿರ್ದಿಷ್ಟ ಭಯೋತ್ಪಾದಕ ಸಂಘಟನೆಗಳಾ ವಿರುದ್ಧ ಹೋರಾಡುವಲ್ಲಿ ಅಮೆರಿಕಾಗೆ ಸಹಕಾರವನ್ನೂ ನೀಡುತ್ತಿತ್ತು, ಆದರೆ ಇನ್ನೂ ಕೆಲವೊಮ್ಮೆ ಉತ್ತಮ ಸಹಕಾರ ನೀಡದೇ ಇರುವ ಅಂಶಗಳೂ ಇವೆ ಎಂದು ಒಬಾಮ ಹೇಳಿದ್ದಾರೆ. 
ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳು ಹಾಗೂ ಅಧಿಕೃತ ಸಂಸ್ಥೆಗಳ ನಡುವೆ ಇರುವ ಸಂಪರ್ಕ ಹತಾಶೆಯ ಮೂಲವಾಗಿದೆ ಎಂದು ಬರಾಕ್ ಒಬಾಮ ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ ಭಯೋತ್ಪಾದನೆ ವಿಷಯದಲ್ಲಿ ವಾಷಿಂಗ್ ಟನ್ ಗೆ ಮುಳುವಾಗಿರುವ ಉಗ್ರ ಸಂಘಟನೆಗಳು ಹಾಗೂ ಭಾರತಕ್ಕೆ ಮುಳುವಾಗಿರುವ ಉಗ್ರ ಸಂಘಟನೆಗಳ ಬಗ್ಗೆ ತಾರತಮ್ಯ ಅನುಸರಿಸಿಲ್ಲ ಎಂದು ಒಬಾಮ ಸ್ಪಷ್ಟಪಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com