ಒಬಿಸಿ ಮೀಸಲಾತಿ ವಿಚಾರ: ವಿಶೇಷ ಆಯೋಗ ರಚನೆಗೆ ರಾಷ್ಟ್ರಪತಿ ಕೋವಿಂದ್ ಅನುಮತಿ

ಗುಜರಾತಿನ ವಿಧಾನಸಭೆ ಚುನಾವಣೆ ಇನ್ನೇನು ಕೆಲವು ತಿಂಗಳು ಇದೆ ಎನ್ನುವಾಗ ಪಾಟೀದರ್ ಸಮುದಾಯವು ವಿಶೇಷ ಮೀಸಲಾತಿಗಾಗಿ ಹೋರಾಟವನ್ನು ತೀವ್ರಗೊಳಿಸಿದೆ.
ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್
ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್
Updated on
ನವದೆಹಲಿ: ಗುಜರಾತಿನ ವಿಧಾನಸಭೆ ಚುನಾವಣೆ ಇನ್ನೇನು ಕೆಲವು ತಿಂಗಳು ಇದೆ ಎನ್ನುವಾಗ ಪಾಟೀದರ್ ಸಮುದಾಯವು ವಿಶೇಷ ಮೀಸಲಾತಿಗಾಗಿ ಹೋರಾಟವನ್ನು ತೀವ್ರಗೊಳಿಸಿದೆ.ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಮೀಸಲಾತಿ ವಿಚಾರ ಪುನರ್ ಪರಿಶೀಲನೆಗಾಗಿ ಸಮಿತಿಯೊಂದನ್ನು ರಚಿಸಲು ಚಿಂತನೆ ನಡೆಸಿದೆ.
ಸೋಮವಾರ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಸಂವಿಧಾನದ 340ನೇ ಅನುಚ್ಚೇದದ ಅಡಿಯಲ್ಲಿ ಆಯೋಗದ ರಚನೆಗೆ ಅನುಮತಿ ನೀಡಿದರು. "ಒಬಿಸಿ ಸಮುದಾಯಗಳಲ್ಲಿ ಹಿಂದುಳಿದವರು ಮೀಸಲಾತಿಯ ಹೆಚ್ಚು  ಪ್ರಯೋಜನಗಳನ್ನು ಪಡೆಯಲು ಇದರಿಂದ ಸಾಧ್ಯವಾಗುತ್ತದೆ. ಸಾಮಾಜಿಕ ನ್ಯಾಯಕ್ಕಾಗಿನ ಸರ್ಕಾರದ ಪ್ರಯತ್ನ ಇದರಿಂದಾಗಿ ಇನ್ನಷ್ಟು ಬಲಗೊಳ್ಳುತ್ತದೆ. ಒಬಿಸಿ ಉಪ ವರ್ಗೀಕರಣದಿಂದ ಎಲ್ಲರಿಗೂ ಅನುಕೂಲವಾಗಲಿದೆ"ಎಂದು ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.
ನಿವೃತ್ತ ನ್ಯಾಯಮೂರ್ತಿ ಜಿ ರೋಹಿಣಿ ನೇತೃತ್ವದಲ್ಲಿ ಆಯೋಗವನ್ನುರಚನೆ ಮಾಡಲಾಗುತ್ತ್ದೆ. ಡಾ ಜೆ ಕೆ ಬಜಾಜ್ ಆಯೋಗದ ಸದಸ್ಯರಾಗಲಿದ್ದಾರೆ, ಅಲ್ಲದೆ ಹೆಚ್ಚುವರಿಯಾಗಿ, ನಿರ್ದೇಶಕ, ಮಾನವಶಾಸ್ತ್ರ ವಿಭಾಗದ ಸರ್ವೇ ಆಫ್ ಇಂಡಿಯಾ, ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಕಮಿಷನರ್, ಆಯೋಗದಲ್ಲಿರಲಿದ್ದಾರೆ ಎಂದು ರಾಷ್ಟ್ರಪತಿ ಭವನ  ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ..
"ಇತರ ಹಿಂದುಳಿದ ವರ್ಗಗಳಲ್ಲಿ ಉಪ-ವರ್ಗೀಕರಣಕ್ಕೆ ವೈಜ್ಞಾನಿಕ ಮಾನದಂಡವನ್ನು ಅಳವಡಿಸಿಕೊಂಡು ಕೆಲಸ ಮಾಡಲಾಗುತ್ತದೆ. ಜತೆಗೆ, ಒಬಿಸಿ ಪಟ್ಟಿಗೆ ಸೇರಿಸಲಾದ ಜಾತಿಗಳು ಮತ್ತು ಸಮುದಾಯಗಳ ನಡುವೆ ಮೀಸಲಾತಿಗಳ ವಿವರಣೆ ಮತ್ತು ವ್ಯಾಪ್ತಿಯನ್ನು ಆಯೋಗವು ಪರಿಶೀಲಿಸುತ್ತದೆ" ಈ ಸಮಿತಿಯು ತನ್ನ ವರದಿಯನ್ನು 12 ವಾರಗಳೊಳಗೆ ಅಧ್ಯಕ್ಷರಿಗೆ ಸಲ್ಲಿಸಬೇಕೆಂದು ಗಡುವು ನಿಗದಿಪಡಿಸಲಾಗಿದೆ..
ವರದಿಯನ್ನು ಪಡೆದ ನಂತರ ಕೇಂದ್ರ ಸರ್ಕಾರ ಉದ್ಯೋಗಗಳಲ್ಲಿ ಮೀಸಲಾತಿ ಮತ್ತು ಸಮಾನ ಹಿಂದುಳಿದ ವರ್ಗಗಳ ಎಲ್ಲಾ ಕೇಂದ್ರಗಳಲ್ಲಿ ಕೇಂದ್ರ ಸರಕಾರದ ಸಂಸ್ಥೆಗಳಲ್ಲಿ ಪ್ರವೇಶಕ್ಕಾಗಿ ಸಮರ್ಪಕ ಕಾನೂನು ಕ್ರಮಗಳನ್ನು ಕೇಂದ್ರವು ರೂಪಿಸುತ್ತದೆ. 
ಉಪ ವರ್ಗೀಕರಣದ ಬಗ್ಗೆ ಆದೇಶ ನೀಡಬಹುದಾದ ಓಬಿಸಿ ಸಮಿತಿಗೆ ಸಂವಿಧಾನಾತ್ಮಕ ಸ್ಥಾನಮಾನ ನೀಡುವ ಸರ್ಕಾರದ ಪ್ರಸ್ತಾವನೆ ರಾಜ್ಯಸಭೆಯಲ್ಲಿ ಇದಾಗಲೇ ಮಂದನೆ ಆಗಿತ್ತು.. ಶಾಸಕಾಂಗ ಕೆಲ ಪ್ರಸ್ತಾಪವನ್ನು ವಿರೋಧ ಪಕ್ಷಗಳು ಒಪ್ಪಿಕೊಂಡಿರಲಿಲ್ಲ, 
ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗ 2011ರಲ್ಲಿ ಒಬಿಸಿ ಪಟ್ಟಿಯಲ್ಲಿ ಉಪ-ವರ್ಗೀಕರಣವನ್ನು ಶಿಫಾರಸು ಮಾಡಿತ್ತು. 2012-13ರಲ್ಲಿ ಸಂಸದೀಯ ಸ್ಥಾಯಿ ಸಮಿತಿಯಿಂದ ಸಹ ಇದೇ ಶಿಫಾರಸನ್ನು ನೀಡಿತ್ತೆಂದು ಸಂಸದ ಅರುಣ್ ಜೇಟ್ಲಿ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com