ತನ್ನದೇ ವಿದೇಶಾಂಗ ನೀತಿ ಹೊಂದಿರುವ ಐಎಸ್ಐ ಗೆ ಭಯೋತ್ಪಾದಕ ಸಂಘಟನೆಗಳೊಂದಿಗೆ ನಂಟು: ಅಮೆರಿಕ

ಅಮೆರಿಕ ಪಾಕಿಸ್ತಾನದ ಗುಪ್ತಚರ ಇಲಾಖೆ ವಿರುದ್ಧ ಕಿಡಿಕಾರಿದ್ದು, ಐಎಸ್ಐ ತನ್ನದೇ ಆದ ಪ್ರತ್ಯೇಕ ವಿದೇಶಾಂಗ ನೀತಿ ಹೊಂದಿದ್ದು, ಭಯೋತ್ಪಾದಕ ಸಂಘಟನೆಗಳೊಂದಿಗೆ ನಂಟು ಹೊಂದಿದೆ ಎಂದು ಅಮೆರಿಕದ ಜನರಲ್....
ತನ್ನದೇ ವಿದೇಶಾಂಗ ನೀತಿ ಹೊಂದಿರುವ ಐಎಸ್ಐ ಗೆ ಭಯೋತ್ಪಾದಕ ಸಂಘಟನೆಗಳೊಂದಿಗೆ ನಂಟು: ಅಮೆರಿಕ
ವಾಷಿಂಗ್ ಟನ್: ಅಮೆರಿಕ ಪಾಕಿಸ್ತಾನದ ಗುಪ್ತಚರ ಇಲಾಖೆ ವಿರುದ್ಧ ಕಿಡಿಕಾರಿದ್ದು, ಐಎಸ್ಐ ತನ್ನದೇ ಆದ ಪ್ರತ್ಯೇಕ ವಿದೇಶಾಂಗ ನೀತಿ ಹೊಂದಿದ್ದು, ಭಯೋತ್ಪಾದಕ ಸಂಘಟನೆಗಳೊಂದಿಗೆ ನಂಟು ಹೊಂದಿದೆ ಎಂದು ಅಮೆರಿಕದ ಜನರಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 
ಅಮೆರಿಕ ಕಾಂಗ್ರೆಸ್ ನಲ್ಲಿ ನಡೆದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿರುವ ಅಮೆರಿಕದ ಜನರಲ್ ಜೋಸೆಫ್ ಡನ್ಫೋರ್ಡ್, "ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಭಯೋತ್ಪಾದನೆಯೊಂದಿಗೆ ನಂಟು ಹೊಂದಿರುವುದು ನನ್ನ ಪ್ರಕಾರ ಸ್ಪಷ್ಟವಾಗಿದೆ ಎಂದು ವಿದೇಶಾಂಗ ಸಮಿತಿಗೆ ಹೇಳಿದ್ದಾರೆ. 
ಸೆನೆಟರ್ ಜೋ ಡೊನ್ನೆಲ್ಲಿ ಅವರು ಪಾಕಿಸ್ತಾನದ ಗುಪ್ತಚರ ಇಲಾಖೆ ತಾಲೀಬಾನ್ ಗೆ ಇನ್ನೂ ಸಹಕರಿಸುತ್ತಿದೆಯೇ ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದರು. ಪ್ರಶ್ನೆಗೆ ಉತ್ತರಿಸಿರುವ ಜೋಸೆಫ್ ಡನ್ಫೋರ್ಡ್, ಪಾಕಿಸ್ತಾನದ ನಡವಳಿಕೆಯನ್ನು ಬದಲಾವಣೆ ಮಾಡಲು ಅಮೆರಿಕ ಸಾಕಷ್ಟು ವರ್ಷಗಳಿಂದ ಪ್ರಯತ್ನಿಸುತ್ತಿದೆ. ಆದರೆ ಕೇವಲ ಒಂದು ಅಂಶದಿಂದ ಪಾಕಿಸ್ತಾನವನ್ನು ಬದಲಾವಣೆ ಸಾಧ್ಯ ಎಂದೆನಿಸುತ್ತಿಲ್ಲ. ವಿವಿಧ ರೀತಿಯ ವಿಧಾನಗಳಿಂದ ಪಾಕಿಸ್ತಾನವನ್ನು ಬದಲಾವಣೆ ಮಾಡಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. 
ಪಾಕಿಸ್ತಾನದ ಸರ್ಕಾರ ಭಯೋತ್ಪಾದಕರ ವಿರುದ್ಧ ಹೋರಾಡಲು ಸಿದ್ಧವಿದ್ದರೂ, ಅಲ್ಲಿನ ಗುಪ್ತಚರ ಇಲಾಖೆ ಐಎಸ್ಐ ತನ್ನದೇ ಪ್ರತ್ಯೇಕವಾದ ವಿದೇಶಾಂಗ ನೀತಿಯನ್ನು ಹೊಂದಿದ್ದು, ಭಯೋತ್ಪಾದಕರೊಂದಿಗೆ ನಂಟು ಹೊಂದಿದೆ ಎಂದು ಜೋಸೆಫ್ ಡನ್ಫೋರ್ಡ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com