ಜಮ್ಮು-ಕಾಶ್ಮೀರದಲ್ಲಿ ಪೆಲೆಟ್ ಗನ್ ಬಳಕೆ ಬಗ್ಗೆ ಜನವರಿ ತಿಂಗಳಲ್ಲಿ ಆದೇಶ: ಸುಪ್ರೀಂ ಕೋರ್ಟ್

ಜಮ್ಮು-ಕಾಶ್ಮೀರದಲ್ಲಿ ಕಲ್ಲುತೂರಾಟಗಾರರಿಂದ ರಕ್ಷಣೆ ಪಡೆಯಲು ಪೆಲೆಟ್ ಗನ್ ಬಳಕೆ ಮಾಡುವುದರ ಬಗ್ಗೆ 2018 ರ ಜನವರಿಯಲ್ಲಿ ನಿರ್ದೇಶನ ನೀಡುವುದಾಗಿ ಸುಪ್ರೀಂ ಕೋರ್ಟ್ ಅ.04 ರಂದು ಹೇಳಿದೆ.
ಪೆಲೆಟ್ ಗನ್
ಪೆಲೆಟ್ ಗನ್
ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ಕಲ್ಲುತೂರಾಟಗಾರರಿಂದ ರಕ್ಷಣೆ ಪಡೆಯಲು ಪೆಲೆಟ್ ಗನ್ ಬಳಕೆ ಮಾಡುವುದರ ಬಗ್ಗೆ 2018 ರ ಜನವರಿಯಲ್ಲಿ ನಿರ್ದೇಶನ ನೀಡುವುದಾಗಿ ಸುಪ್ರೀಂ ಕೋರ್ಟ್ ಅ.04 ರಂದು ಹೇಳಿದೆ. 
ಪೆಲೆಟ್ ಗನ್ ಗಳನ್ನು ಬಳಕೆ ಮಾಡುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಿ ಕೋರ್ಟ್ ಮೆಟ್ಟಿಲೇರಿದ್ದ ಜಮ್ಮು-ಕಾಶ್ಮೀರ ಹೈಕೋರ್ಟ್ ಬಾರ್ ಅಸೋಸಿಯೇಷನ್(ಜೆಕೆಹೆಚ್ ಸಿಬಿಎ) ಗೆ "ಪೆಲೆಟ್ ಗನ್ ವಿರುದ್ಧ ನಿಮ್ಮ ನಿಲುವನ್ನು ಪರಿಗಣಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸಿ" ಎಂದು ಸುಪ್ರೀಂ ಕೋರ್ಟ್ ಹೇಳಿ ಕಾಶ್ಮೀರದಲ್ಲಿ ಈಗ ಉಂಟಾಗಿರುವ ಸ್ಥಿತಿಯನ್ನು ಪರಿಹರಿಸಲು ಯಾರು ಕೇಂದ್ರ ಸರ್ಕಾರದೊಂದಿಗೆ ಮಾತನಾಡಬೇಕು ಎಂಬುದರ ಪಟ್ಟಿಯನ್ನು ನೀಡಲು ಸೂಚಿಸಿತ್ತು. 
ಅಷ್ಟೇ ಅಲ್ಲದೇ ಪೆಲೆಟ್ ಗನ್ ಗಳ ಬಳಕೆಯನ್ನು ನಿಷೆಧಿಸುವುದಾದರೆ ಕಲ್ಲುತೂರಾಟವನ್ನೂ ನಿಲ್ಲಿಸುವುದರ ಬಗ್ಗೆ ಜೆಕೆಹೆಚ್ ಸಿಬಿಎ ಭರವಸೆ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಏ.28 ರ ವಿಚಾರಣೆಯಲ್ಲಿ ಹೇಳಿತ್ತು. ಈಗ ಮತ್ತೊಮ್ಮೆ ವಿಚಾರಣೆ ನಡೆದಿದ್ದು ಪೆಲೆಟ್ ಗನ್ ಬಳಕೆ ಬಗ್ಗೆ ಜನವರಿ ತಿಂಗಳಲ್ಲಿ ಆದೇಶ ನೀಡುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.   

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com