ಮಹಾರಾಜ್ ಪುರ ಪ್ರದೇಶದ ರಘುನಾಥ್ ಸಿಂಗ್ ಎಂಬುವವರ ಮನೆಯ ಬಳಿ ಘಟನೆ ನಡೆದಿದ್ದು, ಇಬ್ಬರ ಮೃತದೇಹಗಳನ್ನೂ ಸಹ ಹೊರತೆಗೆಯಲಾಗಿದೆ. ಈ ಘಟನೆಯಲ್ಲಿ ರಘುನಾಥ್ ಸಿಂಗ್ ಅವರ ಪುತ್ರ ಸಹ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಘಟನೆ ನಡೆದ ಪ್ರದೇಶದಲ್ಲಿ 7 ಮನೆಗಳು ಹಾನಿಗೊಳಗಾಗಿದ್ದು, ಘಟನಾ ಸ್ಥಳ ಕಿರಿದಾಗಿರುವುದರಿಂದ ಆಂಬುಲೆನ್ಸ್ ಹಾಗೂ ಇನ್ನಿತರ ರಕ್ಷಣಾ ಸಿಬ್ಬಂದಿಗಳು ತ್ವರಿತ ಕಾರ್ಯಾಚರಣೆ ನಡೆಸಲು ಕಷ್ಟವಾಗುತ್ತಿದೆ ಎಂದು ಸ್ಥಳೀಯರು ಹೇಳಿದ್ದಾರೆ.