ರ‍್ಯಾನ್ ಶಾಲೆಯಲ್ಲಿ ಹತ್ಯೆ ಪ್ರಕರಣ: ಸುಪ್ರೀಂ ಕೋರ್ಟ್ ಗೆ ಸಿಬಿಎಸ್ಇಯಿಂದ ಪ್ರಮಾಣ ಪತ್ರ

ಗುರ್ಗಾಂವ್ ನಲ್ಲಿರುವ ರ‍್ಯಾನ್ ಶಾಲೆಯಲ್ಲಿ 7 ವರ್ಷದ ವಿದ್ಯಾರ್ಥಿಯ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಎಸ್ಇ ಸುಪ್ರೀಂ ಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿದೆ.
ರ‍್ಯಾನ್ ಶಾಲೆ
ರ‍್ಯಾನ್ ಶಾಲೆ
ನವದೆಹಲಿ: ಗುರ್ಗಾಂವ್ ನಲ್ಲಿರುವ ರ‍್ಯಾನ್ ಶಾಲೆಯಲ್ಲಿ 7 ವರ್ಷದ ವಿದ್ಯಾರ್ಥಿಯ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಎಸ್ಇ ಸುಪ್ರೀಂ ಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿದೆ. 
"ಘಟನೆ ನಡೆದ ಶಾಲೆಯಲ್ಲಿ ಸಾಕಷ್ಟು ಸಿಸಿಟಿವಿಗಳಿರಲಿಲ್ಲ, ಇದ್ದ ಸಿಸಿಟಿವಿಗಳೂ ಸಹ ಸರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ ಎಂದು ಸಿಬಿಎಸ್ಇ ಅಫಿಡವಿಟ್ ನಲ್ಲಿ ಹೇಳಿದೆ. ಅಷ್ಟೇ ಅಲ್ಲದೇ ಶಾಲಾ ಸಿಬ್ಬಂದಿಗಳಿಗೆ ಪ್ರತ್ಯೇಕವಾದ ಶೌಚಾಲಯ ಇರಲಿಲ್ಲ. ತೆರೆದೇ ಇದ್ದ ಎಲೆಕ್ಟ್ರಿಕ್ ಪ್ಯಾನಲ್ ಗಳು ಮಕ್ಕಳ ಜೀವಕ್ಕೆ ಕುತ್ತಾಗಿದ್ದವು ಎಂದು ಅಫಿಡವಿಟ್ ನಲ್ಲಿ ಹೇಳಲಾಗಿದೆ. 
ಶಾಲೆಯಲ್ಲಿ ವಿದ್ಯಾರ್ಥಿ ನಿಗೂಢವಾಗಿ ಸಾವನ್ನಪ್ಪಿರುವುದರಿಂದ ಶಾಲೆಯ ಮಾನ್ಯತೆಯನ್ನೇಕೆ ರದ್ದುಗೊಳಿಸಬಾರದು ಎಂದು ಸೆ.16 ರಂದು ಸಿಬಿಎಸ್ಇ ರ‍್ಯಾನ್ ಶಾಲೆಯನ್ನು ಪ್ರಶ್ನಿಸಿತ್ತು. ಶಾಲಾ ಸಿಬ್ಬಂದಿಗಳು ಕರ್ತವ್ಯ ಲೋಪ ಎಸಗಿದ್ದಾರೆ, ಇಲ್ಲದೇ ಇದ್ದಿದ್ದರೆ ವಿದ್ಯಾರ್ಥಿಯ ಹತ್ಯೆಯನ್ನು ತಪ್ಪಿಸಬಹುದಿತ್ತು ಎಂದು ಸಿಬಿಎಸ್ ಸಿ ಹೇಳಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com