ಮಧ್ಯಪ್ರದೇಶ: 10 ರು. ನಾಣ್ಯ ಸ್ವೀಕರಿಸದ ಅಂಗಡಿ ಮಾಲೀಕನ ವಿರುದ್ಧ ಕೇಸ್

10 ರುಪಾಯಿ ಮೌಲ್ಯದ ನಾಣ್ಯವನ್ನು ಸ್ವೀಕರಿಸದ ಅಂಗಡಿ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ನಾಣ್ಯ
ನಾಣ್ಯ
Updated on
ಮೊರೆನಾ: 10 ರುಪಾಯಿ ಮೌಲ್ಯದ ನಾಣ್ಯವನ್ನು ಸ್ವೀಕರಿಸದ ಅಂಗಡಿ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 
ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಜುರಾ ಪಟ್ಟಣದಲ್ಲಿ ಕರವಸ್ತ್ರವನ್ನು ಪಡೆದ ಗಿರಾಕಿ ಅಂಗಡಿ ಮಾಲೀಕನಿಗೆ 10 ರುಪಾಯಿಯ ಎರಡು ನಾಣ್ಯಗಳನ್ನು ನೀಡಿದ್ದಾನೆ. ಈ ವೇಳೆ ಅಂಗಡಿಯವನು ನಾಣ್ಯವನ್ನು ಸ್ವೀಕರಿಸಲು ನಿರಾಕರಿಸಿದ್ದರಿಂದ ಮಾಲೀಕನ ವಿರುದ್ಧ ಕೇಸ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 
ಐಸಿಪಿ ಸೆಕ್ಷನ್ 188ರ ಅಡಿಯಲ್ಲಿ ಅಂಗಡಿ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಸೆಕ್ಷನ್ ಅಡಿಯಲ್ಲಿ ಮಾಲೀಕನಿಗೆ 6 ತಿಂಗಳ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆ ಇದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com