ಭಾರತದಲ್ಲಿನ ನೇಪಾಳ ರಾಯಭಾರಿ ದೀಪ್ ಕುಮಾರ್ ರಾಜೀನಾಮೆ

ಭಾರತದಲ್ಲಿನ ನೇಪಾಳದ ರಾಯಭಾರಿ ದೀಪ್ ಕುಮಾರ್ ಉಪಾಧ್ಯಾಯ ರಾಜೀನಾಮೆ ನೀಡಿದ್ದಾರೆ.
ದೀಪ್ ಕುಮಾರ್ ಉಪಾಧ್ಯಾಯ
ದೀಪ್ ಕುಮಾರ್ ಉಪಾಧ್ಯಾಯ
ಕಠ್ಮಂಡು: ಭಾರತದಲ್ಲಿನ ನೇಪಾಳದ ರಾಯಭಾರಿ ದೀಪ್ ಕುಮಾರ್ ಉಪಾಧ್ಯಾಯ ರಾಜೀನಾಮೆ ನೀಡಿದ್ದಾರೆ. ಅವರು ಮುಂದಿನ ತಿಂಗಳು ನೇಪಾಳದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ.
ನೇಪಾಳದ ವಿದೇಶಾಂಗ ಸಚಿವ ಕೃಷ್ಣ ಬಹದ್ದೂರ್ ಮಹಾರ ರಿಗೆ ಉಪಾದ್ಯಾಯ ತನ್ನ ರಾಜೀನಾಮೆ ಪತ್ರವನ್ನು ನೀಡಿದ್ದು ತಾನು ಸಾಮಾನ್ಯ ಜೀವನಕ್ಕೆ ಹಿಂದಿರುಗಲು ಬಯಸಿದ್ದೇನೆ ಎಂದು ತಿಳಿಸಿದರು. ಜತೆಗೆ ಕಪಿಲವಸ್ತು ವಿನಿಂದ ನೇಪಾಳಿ ಕಾಂಗ್ರೆಸ್ ಪಕ್ಷದ ಪರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ಯೋಚಿಸುತ್ತಿರುವುದಾಗಿ ಹೇಳಿದರು..
ಉಪಾದ್ಯಾಯ ಭಾರತ ರಾಯಭಾರಿಯಾಗಿ ಅಧಿಕಾರ ವಹಿಸಿಕೊಂಡ ಹನ್ನೊಂದು ತಿಂಗಳ ತರುವಾಯ ರಾಜೀನಾಮೆ ಪತ್ರ ಸಲ್ಲಿಸಿದ್ದು ನೇಪಾಳ ಸರ್ಕಾರ ಅವರ ರಾಜೀನಾಮೆಯನ್ನು ಇನ್ನೂ ಅಂಗೀಕರಿಸಲಿಲ್ಲ. ಸರ್ಕಾರ ರಾಜೀನಾಮೆಯನ್ನು ಅಂಗೀಕರಿಸಿದ ತಕ್ಷಣಕ್ಕೆ ತಾನು ಚುನಾವಣಾ ಅಭ್ಯರ್ಥಿ ಎಂದು ಘೋಷಿಸಿಕೊಳ್ಳಲು ಅವರು ಯೋಜಿಸಿದ್ದಾರೆ ಎನ್ನಲಾಗಿದೆ.
ನೇಪಾಳಿ ಕಾಂಗ್ರೆಸ್ ನ ಸಚಿವ ಮತ್ತು ಕೇಂದ್ರ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ ಉಪಾಧ್ಯಾಯ ಅವರನ್ನು 2015 ರಲ್ಲಿ ಮೊದಲ ಬಾರಿಗೆ ರಾಯಭಾರಿಯಾಗಿ ನೇಮಿಸಲಾಯಿತು ಮತ್ತು 2016 ರಲ್ಲಿ ಕೆ.ಪಿ. ಶರ್ಮಾ ಒಲಿ ನೇತೃತ್ವದ ಸರ್ಕಾರ ಮತ್ತೆ ಅವರನ್ನು ಹಿಂದಕ್ಕೆ ಕರೆಸಿಕೊಂಡಿತ್ತು.
ಆ ಸಮಯದಲ್ಲಿ ಕೆ.ಪಿ. ಶರ್ಮಾ ಒಲಿ ಸರ್ಕಾರವು ಉಪಾದ್ಯಾಯ,  ಸರ್ಕಾರವನ್ನು ಉರುಳಿಸಲು ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂದು ದೂಷಿಸಿತ್ತು. ಆದರೆ ಪುಷ್ಪಾ ಕಮಲ್ ದಹಲ್'ಪ್ರಚಂಡ'-ನೇತೃತ್ವದ ಸರ್ಕಾರ ಅವರನ್ನು ಪುನಃ ಭಾರತದಲ್ಲಿ ರಾಯಭಾರಿಯಾಗಿ ನೇಮಕ ಮಾಡಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com