ಪಂಚಕುಲ ಹಿಂಸಾಚಾರ: ಐಪಿಎಸ್ ಅಧಿಕಾರಿಯ ಅಮಾನತು ಹಿಂಪಡೆದ ಹರಿಯಾಣ ಸರ್ಕಾರ

ಅತ್ಯಾಚಾರ ಪ್ರಕರಣದಲ್ಲಿ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಸಿಂಗ್ ದೋಷಿ ಎಂದು ಸಿಬಿಐ ಕೋರ್ಟ್ ತೀರ್ಪು....
ಹಿಂಸಾಚಾರದ ವೇಳೆ ಕಾಣಿಸಿಕೊಂಡ ಹೊಗೆ
ಹಿಂಸಾಚಾರದ ವೇಳೆ ಕಾಣಿಸಿಕೊಂಡ ಹೊಗೆ
ಚಂಡೀಗಢ: ಅತ್ಯಾಚಾರ ಪ್ರಕರಣದಲ್ಲಿ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಸಿಂಗ್ ದೋಷಿ ಎಂದು ಸಿಬಿಐ ಕೋರ್ಟ್ ತೀರ್ಪು ನೀಡಿದ ನಂತರ ಪಂಚಕುಲದಲ್ಲಿ ನಡೆದ ಭಾರಿ ಹಿಂಸಾಚಾರ ಪ್ರಕರಣ ಸಂಬಂಧ ಸೇವೆಯಿಂದ ಅಮಾನತುಗೊಂಡಿದ್ದ ಐಪಿಎಸ್ ಅಧಿಕಾರಿ ಅಶೋಕ್ ಕುಮಾರ್ ಅವರನ್ನು ಹರಿಯಾಣ ಸರ್ಕಾರ ಶನಿವಾರ ಮತ್ತೆ ಕರ್ತವ್ಯಕ್ಕೆ ನಿಯೋಜಿಸಿದೆ.
ಅಶೋಕ್ ಕುಮಾರ್ ಅಮಾನತು ಆದೇಶವನ್ನು ಹಿಂಪಡೆದಿರುವ ಹರಿಯಾಣ ಸರ್ಕಾರ ಇಂದು ಅವರನ್ನು ಹರಿಯಾಣ ಶಶಸ್ತ್ರ ಪಡೆಯ 1ನೇ ಬಟಾಲಿಯನ್ ಕಮಾಂಡೆಂಟ್ ಹುದ್ದೆಗೆ ನೇಮಕ ಮಾಡಿದೆ ಎಂದು ಸರ್ಕಾರದ ವಕ್ತಾರರು ತಿಳಿಸಿದ್ದಾರೆ.
ಹಿಂಸಾಚಾರ ನಡೆದ ವೇಳೆ ಪಂಚಕುಲ ಉಪ ಪೊಲೀಸ್ ಆಯುಕ್ತರಾಗಿದ್ದ ಅಶೋಕ್ ಕುಮಾರ್ ಅವರನ್ನು ಹರಿಯಾಣ ಸರ್ಕಾರ ಆಗಸ್ಟ್ 26ರಂದು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿತ್ತು.
38 ಮಂದಿಯನ್ನು ಬಲಿ ಪಡೆದ ಹಿಂಸಾಚಾರಕ್ಕೆ ಪೊಲೀಸರ ಬೇಜವ್ದಾರಿಯೇ ಕಾರಣ. ನಿಷೇಧಾಜ್ಞೆಯನ್ನು ಸಮರ್ಪಕವಾಗಿ ಜಾರಿಗೊಳಿಸಿದ್ದರೆ ಹಿಂಸಾಚಾರ ತಡೆಯಬಹುದಿತ್ತು ಎಂಬ ಮಾತುಗಳು ಕೇಳಿಬಂದಿದ್ದವು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com