ಅರ್ಹತೆ ಹಾಗೂ ಸಾಮರ್ಥ್ಯದ ಆಧಾರದಲ್ಲಿ ಕಾಂಗ್ರೆಸ್ ನಾಯಕರನ್ನು ಆಯ್ಕೆ ಮಾಡಲಿ: ಜೇಟ್ಲಿ

ಕಾಂಗ್ರೆಸ್ ಪಕ್ಷ ಅರ್ಹತೆ ಹಾಗೂ ಸಾಮರ್ಥ್ಯದ ಆಧಾರದಲ್ಲಿ ನಾಯಕರನ್ನು ಆಯ್ಕೆ ಮಾಡಬೇಕಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಅಭಿಪ್ರಾಯಪಟ್ಟಿದ್ದಾರೆ.
ಅರುಣ್ ಜೇಟ್ಲಿ
ಅರುಣ್ ಜೇಟ್ಲಿ
ವಾಷಿಂಗ್ ಟನ್: ಕಾಂಗ್ರೆಸ್ ಪಕ್ಷ ಅರ್ಹತೆ ಹಾಗೂ ಸಾಮರ್ಥ್ಯದ ಆಧಾರದಲ್ಲಿ ನಾಯಕರನ್ನು ಆಯ್ಕೆ ಮಾಡಬೇಕಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಅಭಿಪ್ರಾಯಪಟ್ಟಿದ್ದಾರೆ. 
ಅರ್ಹತೆ, ಸಾಮರ್ಥ್ಯವುಳ್ಳ ನಾಯಕರನ್ನು ಆಯ್ಕೆ ಮಾಡುವವರೆಗೆ ಕಾಂಗ್ರೆಸ್ ಬೆಳವಣಿಗೆ ಸಾಧ್ಯವಿಲ್ಲ ಎಂದು ಜೇಟ್ಲಿ ಹೇಳಿದ್ದಾರೆ. ರಾಹುಲ್ ಗಾಂಧಿ ಅಮೆರಿಕಾದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಒಂದು ತಿಂಗಳ ಅವಧಿಯಲ್ಲಿ ಬರ್ಕ್ಲಿ ಇಂಡಿಯಾ  ಕಾನ್ಫರೆನ್ಸ್ ನಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿರುವ ಅರುಣ್ ಜೇಟ್ಲಿ, ರಾಹುಲ್ ಗಾಂಧಿ ಅವರ ವಂಶಪಾರಂಪರ್ಯ ರಾಜಕಾರಣದ ಹೇಳಿಕೆಯ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದು, ಕಾಂಗ್ರೆಸ್ ಅರ್ಹತೆ ಹಾಗೂ ಸಾಮರ್ಥ್ಯದ ಆಧಾರದಲ್ಲಿ ನಾಯಕತ್ವವನ್ನು ಆಯ್ಕೆ ಮಾಡಬೇಕಿದೆ. ತಮ್ಮ ಪಕ್ಷದಲ್ಲಿ ವಂಶಪಾರಂಪರ್ಯ ಹಿನ್ನೆಲೆಯುಳ್ಳವರು ಇಲ್ಲ ಎಂದು ಹೇಳಿದ್ದಾರೆ. 
ಅರುಣ್ ಜೇಟ್ಲಿ ಅಮೆರಿಕಾಗೆ ಭೇಟಿ ನೀಡಲಿರುವ ಕಾರ್ಯಕ್ರಮ ನಿಗದಿಯಾಗಿದ್ದು, ಅಮೆರಿಕ ಉದ್ಯಮಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com