ಚೀನಾ ಯೋಧರಿಗೆ "ನಮಸ್ತೆ" ಅರ್ಥವನ್ನು ಹೇಳಿಕೊಟ್ಟ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್

ಸಿಕ್ಕಿಂ ಗೆ ಭೇಟಿ ನೀಡಿದ್ದ ವೇಳೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಗಡಿ ಪ್ರದೇಶದಲ್ಲಿದ್ದ ಚೀನಾ ಯೋಧರೊಂದಿಗೆ ಮಾತನಾಡಿದ್ದಾರೆ.
ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್
ನವದೆಹಲಿ: ಸಿಕ್ಕಿಂ ಗೆ ಭೇಟಿ ನೀಡಿದ್ದ ವೇಳೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಗಡಿ ಪ್ರದೇಶದಲ್ಲಿದ್ದ ಚೀನಾ ಯೋಧರೊಂದಿಗೆ ಮಾತನಾಡಿದ್ದಾರೆ. 
ಭಾರತೀಯ ಸಂಪ್ರದಾಯದಲ್ಲಿ ವಂದನೆ ಸಲ್ಲಿಸುವ "ನಮಸ್ತೆ" ಅರ್ಥವನ್ನು ನಿರ್ಮಲಾ ಸೀತಾರಾಮನ್ ಚೀನಾ ಯೋಧರಿಗೆ ಹೇಳಿಕೊಡುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ನಿರ್ಮಲಾ ಸೀತಾರಾಮನ್ ಅವರ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ. 
ಚೀನಾ ಯೋಧರನ್ನು ಭೇಟಿ ಮಾಡಿದಾಗ ನಮಸ್ತೆ ಹೇಳಿದ ನಿರ್ಮಲಾ ಸೀತಾರಾಮನ್, ತಾನು ಹೇಳಿದ್ದರ ಅರ್ಥವೇನು ಗೊತ್ತಾ? ಎಂದು ಚೀನಾ ಯೋಧರನ್ನು ಪ್ರಶ್ನಿಸಿದ್ದಾರೆ. ನಿರ್ಮಲಾ ಸೀತಾರಾಮನ್ ಅವರ ಪ್ರಶ್ನೆಗೆ ಭಾರತೀಯ ಯೋಧರು ಚೀನಾ ಯೋಧರಿಗೆ ಉತ್ತರ ಹೇಳಿಕೊಡಲು ಹೋದಾಗ ಯೋಧರನ್ನು ತಡೆದಿದ್ದಾರೆ. ಆದರೆ ಚೀನಾ ಯೋಧರು ಸರಿಯಾದ ಉತ್ತರ ನೀಡಿದ್ದಾರೆ. ಇದೇ ವೇಳೆ ಚೀನಾ ಭಾಷೆಯಲ್ಲಿ ’ನಮಸ್ತೆ’ ಎನ್ನುವುದಕ್ಕೆ ಏನು ಹೇಳುತ್ತಾರೆ ಎಂದು ಸೀತಾರಮನ್ ಪ್ರಶ್ನಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com