ರಾಬ್ದಿ ದೇವಿ ಮತ್ತು ಹೇಮಾ ಯಾದವ್ ಗೆ ಸೇರಿದ ಮೂರು ಪ್ಲಾಟ್ ಗಳನ್ನು ಅಕ್ರಮ ಆಸ್ತಿಯಡಿ ಗುರುತಿಸಿದ ಐಟಿ ಇಲಾಖೆ
ಆದಾಯ ತೆರಿಗೆ ಇಲಾಖೆಯು ಪಾಟ್ನಾದಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ದಿ ದೇವಿ ಮತ್ತು ಆಕೆಯ ಮಗಳು ಹೇಮಾ ಯಾದವ್ ಗೆ ಸೇರಿದ ಮೂರು ಆಸ್ತಿಗಳನ್ನು ಅಕ್ರಮ ಆಸ್ತಿ ಪಟ್ಟಿಯಲ್ಲಿ ಸೇರಿಸಿದೆ.
ಪಾಟ್ನಾ: ಆದಾಯ ತೆರಿಗೆ ಇಲಾಖೆಯು ಪಾಟ್ನಾದಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ದಿ ದೇವಿ ಮತ್ತು ಆಕೆಯ ಮಗಳು ಹೇಮಾ ಯಾದವ್ ಗೆ ಸೇರಿದ ಮೂರು ಆಸ್ತಿಗಳನ್ನು ಅಕ್ರಮ ಆಸ್ತಿ ಪಟ್ಟಿಯಲ್ಲಿ ಸೇರಿಸಿದೆ.
ತನಿಖೆ ಪ್ರಾರಂಭವಾದ 90 ದಿನಗಳ ನಂತರ ಅಧಿಕಾರಿಗಳು ಈ ಆಸ್ತಿಗಳು ಅಕ್ರಮ ಎಂದು ಘೊಷಿಸಿದ್ದಾರೆ "ಈ ಕುರಿತ ಮಾಹಿತಿ ಇಬ್ಬರಿಗೂ ಕಳುಹಿಸಲಾಗಿದೆ, ಅವರು ಶೀಘ್ರದಲ್ಲೇ ವಿಚಾರಣೆಗೆ ಹಾಜರಾಗಲಿದ್ದಾರೆ" ಎಂದು ಆದಾಯ ತೆರಿಗೆ ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.
ಈ ಆಸ್ತಿಗಳನ್ನು ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಪತ್ನಿ ರಬ್ರಿ ದೇವಿ ಮತ್ತು ಹೇಮಾ ಯಾದವ್ ಅವರಿಗೆ ಕುಟುಂಬದ ಸ್ನೇಹಿತರು ಉಡುಗೊರೆಯಾಗಿ ನೀಡಿದ್ದರು.
ಪಾಟ್ನಾ ಹೊರವಲಯದಲ್ಲಿರುವ ಪುಲ್ವಾ ಶರಿಫ್ ನಲ್ಲಿನ 1090 ಚದರಡಿ ಪ್ಲಾಟ್ ಮತ್ತು ದಾನಪುರದ 3270 ಚದರಡಿ ಪ್ಲಾಟ್ ನ್ನು 2014 ರಲ್ಲಿ ಅವರ ಕುಟುಂಬದ ಸ್ನೇಹಿತರಾದ ಲಲ್ಲನ್ ಚೌಧರಿ ಕ್ರಮವಾಗಿ ರಾಬ್ದಿ ದೇವಿ ಮತ್ತು ಹೇಮಾ ಯಾದವ್ ಅವರಿಗೆ ಉಡುಗೊರೆಯಾಗಿ ನೀದಿದ್ದರು.
2014 ರಲ್ಲಿ 3270 ಚದರಡಿ ಮತ್ತೊಂದು ಪ್ಲಾಟ್ ನ್ನು ಹೃಯಾಯಾನಂದ ಚೌಧರಿಯವರಿಂದ ಹೇಮಾ ಯಾದವ್ ಉಡುಗೊರೆಯಾಗಿ ಪಡೆದಿದ್ದರು.
ಸಿಲುನ್ ಜಿಲ್ಲೆಯ ಬರ್ರಾರಿಯಾ ಪೊಲೀಸ್ ಠಾಣೆಯ ವ್ಯಾಪ್ತಿಯ ಸಿಯಾದಿಹ್ ಗ್ರಾಮದ ನಿವಾಸಿ ಲಲ್ಲನ್ ಚೌಧರಿ ಲಾಲೂ ಅವರಜಾನುವಾರುಗಳ ಶೆಡ್ ನಲ್ಲಿ ಕೆಲಸ ಮಾಡುತ್ತಿದ್ದಾರೆ.
ಇವರ ಹೆಸರು ಬಿಪಿಎಲ್ ಪಟ್ಟಿಯಲ್ಲಿದೆ ಎಂದು ತಿಳಿಸಿದ ಐಟಿ ಅಧಿಕಾರಿಗಳು ಲಲ್ಲನ್ ಚೌಧರಿ ರೈತರಿಂದ ಎರಡು ಪ್ಲಾಟ್ ಗಳನ್ನು ಖರೀದಿಸಿದ್ದು, 30 ಲಕ್ಷ ರೂ.ಮತ್ತು 62 ಲಕ್ಷ ರೂ. ಪಾವತಿಸಿದ್ದಾರೆ ಎಂದರು. ಹೃದಯಾನಂದ ಚೌಧರಿ ಸಹ 62 ಲಕ್ಷ ರೂ. ಪಾವತಿಸಿ ರೈತನಿಂದ ಪ್ಲಾಟ್ ಕರೀದಿಸಿರುವುದಾಗಿ ತಿಳಿಸಿದರು.
" ಈ ಇಬ್ಬರೂ ಕಡು ಬಡವರಾಗಿದ್ದು ಅವರು ಆದಾಯ ತೆರಿಗೆ ರಿಟರ್ನ್ಸ್ ಪಾವತಿಸುವುದಿಲ್ಲ. ಇವರಿಗೆ ಈ ದುಬಾರಿ ಪ್ಲಾಟ್ ಖರೀದಿಸಲು ಸಾಧ್ಯವೂ ಇಲ್ಲ. ಇವರಿಗೆ ಪ್ಲಾಟ್ ಖರೀದಿಸಲು ಹಣವು ಬೇರೆ ಮೂಲಗಳಿಂದ ದೊರಕಿರುವುಉದು ನಿಸ್ಸಂಶಯವಾಗಿ ಕಾಣುತ್ತಿದೆ" ಎಂದಿ ಐಟಿ ಅಧಿಕಾರಿಗಳು ವಿವರಿಸಿದರು.
ಈ ಮೂರು ಪ್ಲಾಟ್ ಗಳ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ರಾಬ್ದಿ ದೇವಿ ಮತ್ತು ಹೇಮಾ ಯಾದವ್ ಅವರನ್ನು ವಿಚಾರಣೆ ನಡೆಸಿದ ನಂತರ ಆದಾಯ ತೆರಿಗೆ ಇಲಾಖೆಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ಮೂಲಗಳು ತಿಳಿಸಿದೆ.