ನೂತನ ಕರಡು ನೀತಿ ಶಿಫಾರಸು, 2018 ರಿಂದ ಹಜ್ ಸಬ್ಸಿಡಿ ರದ್ದು

ವಾರ್ಷಿಕ ಹಜ್‌ ಯಾತ್ರೆಗೆ ತೆರಳುವ ಮುಸ್ಲಿಮರಿಗೆ ಕೇಂದ್ರ ಸರ್ಕಾರ ನೀಡುತ್ತಿದ್ದ ಸಹಾಯಧನ ಶೀಘ್ರವೇ ರದ್ದಾಗಲಿದೆ!
ಹಜ್ ಯಾತ್ರೆ ಸಾಂದರ್ಭಿಕ ಚಿತ್ರ
ಹಜ್ ಯಾತ್ರೆ ಸಾಂದರ್ಭಿಕ ಚಿತ್ರ
Updated on
ಮುಂಬೈ: ವಾರ್ಷಿಕ ಹಜ್‌ ಯಾತ್ರೆಗೆ ತೆರಳುವ ಮುಸ್ಲಿಮರಿಗೆ ಕೇಂದ್ರ ಸರ್ಕಾರ ನೀಡುತ್ತಿದ್ದ ಸಹಾಯಧನ ಶೀಘ್ರವೇ ರದ್ದಾಗಲಿದೆ! ಹಜ್‌ ಯಾತ್ರೆಗೆ ಸಂಬಂಧಿಸಿದ ಕರಡು ನೀತಿ ಸಿದ್ಧವಾಗಿದ್ದು, ಯಾತ್ರಿಕರಿಗೆ ನೀಡುವ ಸಹಾಯಧವನ್ನು ನಿಲ್ಲಿಸುವ ಪ್ರಸ್ತಾಪವನ್ನುಿದು ಒಳಗೊಂಡಿದೆ.
ಕೇಂದ್ರದ ಮಾಜಿ ಕಾರ್ಯದರ್ಶಿ ಅಫ್ಜಲ್‌ ಅಮಾನುಲ್ಲಾ ನೇತೃತ್ವದ ಸಮಿತಿ ಈ ಕರಡು ನೀತಿಯನ್ನು ರಚಿಸಿದ್ದು 2018 -22ರಲ್ಲಿ ಕರಡನ್ನು ಕೇಂದ್ರ ಸಚಿವ ಮುಖಾ¤ರ್‌ ಅಬ್ಟಾಸ್‌ ನಖ್ವೀ ಅವರಿಗೆ ಸಲ್ಲಿಸಲಾಗಿದೆ. ಹಜ್‌ ಸಬ್ಸಿಡಿ ರದ್ದು, 45 ವರ್ಷ ಮೇಲ್ಪಟ್ಟ ಮಹಿಳೆಯರು ಕನಿಷ್ಠ 4 ಮಂದಿಯಿರುವ ತಂಡದೊಂದಿಗೆ ಯಾತ್ರೆ ಕೈಗೊಳ್ಳುವ ಅವಕಾಶ ದಂತಹಾ ಶಿಫಾರಸ್ ಗಳನ್ನು  ಈ ನೂತನ ಕರಡು ಒಳಗೊಂಡಿದೆ. ಮುಂದಿನ ವರ್ಷದ ಹಜ್‌ ಯಾತ್ರೆಗೆ ಈ ಹೊಸ ಕರಡು ನೀತಿ ಅನ್ವಯವಾಗಲಿದೆ.
"ಇದೊಂದು ಪಾರದರ್ಶಕ, ಜನಸ್ನೇಹಿ ನೀತಿಯಾಗಿದೆ. ಇದು ಯಾತ್ರಿಕರ ಸುರಕ್ಷತೆ ಮತ್ತು ಭದ್ರತೆಯ ದೃಷ್ಟಿಯಿಂದ ರೂಪಿಸಿದ ನೀತಿಯಾಗಿದೆ" ಎಂದು ಕೇಂದ್ರ ಸಚಿವ ನಖ್ವಿ  ತಿಳಿಸಿದ್ದಾರೆ.  ಸುಪ್ರೀಂ ಕೋರ್ಟ್ ನ ಆದೃಶದಂತೆ ಈ ಸಮಿತಿ ರಚನೆಯಾಗಿದೆ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ತಿಳಿಸಿದೆ 
2012ರಲ್ಲಿ  ಸುಪ್ರೀಂ ಕೋರ್ಟ್ ಹಜ್ ಯಾತ್ರಿಗಳ ಸಬ್ಸಿಡಿಯನ್ನು ಸ್ವಲ್ಪ ಪ್ರಮಾಣದಲ್ಲೇ ಳಿಸುತ್ತಾ, 2022ರೊಳಗೆ ಸಂಪೂರ್ಣವಾಗಿ ರದ್ದು ಮಾಡುವಂತೆ ಕೇಂದ್ರ ಸರ್ಕಾರಕ್ಕೆ  ಸೂಚಿಸಿತ್ತು
ಕರಡು ನೀತಿಯಲ್ಲಿನ ಮುಖ್ಯ ಶಿಪಾರಸ್ಸುಗಳು ಹೀಗಿವೆ-
  • ಹಜ್ ಸಬ್ಸಿಡಿ ರದ್ದು.
  • 45 ವರ್ಷ ಮೇಲ್ಪಟ್ಟ ಮಹಿಳೆಯರು ಕನಿಷ್ಠ ನಾಲ್ವರ ತಂಡದೊಂದಿಗೆ ಯಾತ್ರೆ ಕೈಗೊಳ್ಳಬಹುದು.
  • 45 ವರ್ಷ ಕ್ಕೆ ಕಡಿಮೆ ವಯಸ್ಸಿನವರು ತಮ್ಮ ಕುಟುಂಬ ವರ್ಗದೊಡನೆ ಯಾತ್ರೆ ಮಾಡಬೇಕು.
  • ನಿಗದಿತ ವಿಮಾನ ನಿಲ್ದಾಣಗಳನ್ನು 21ರಿಂದ 9ಕ್ಕೆ ಇಳಿಸುವುದು.
  • ಸಬ್ಸಿಡಿ ರದ್ದಿನಿಂದ ಉಳಿದ ಹಣವನ್ನು ಮುಸ್ಲಿಮರ ಶೈಕ್ಷಣಿಕ ಸಬಲೀಕರಣಕ್ಕೆ ಬಳಸಿಕೊಳ್ಳುಉವುದು.
  • ಮುಂದಿನ 5 ವರ್ಷಗಳ ಕಾಲ ಹಜ್‌ ಕಮಿಟಿ ಮತ್ತು ಖಾಸಗಿ ಸಂಸ್ಥೆಗಳ ಹಜ್‌ ಕೋಟಾ 70:30ರ ಅನುಪಾತದಲ್ಲಿ ಹಂಚಿಕೆ.
  • ಪ್ರಯಣದ ವೆಚ್ಚ ತಗ್ಗಿಸುವ ಸಲುವಾಗಿ ಯಾತ್ರಿಗಳನ್ನು ಹಡಗಿನಲ್ಲಿ ಕಳಿಸುವ ಕುರಿತು ಸೌದಿ ಸರ್ಕಾರದೊಡನೆ ಮಾತುಕತೆ 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com