ಉದ್ಯೋಗಕ್ಕೆ ಕತ್ತರಿ ಆರ್ಥಿಕತೆಗೆ ಉತ್ತಮ ಸಂಕೇತ: ರೇಲ್ವೆ ಸಚಿವ

ಉದ್ಯೋಗಕ್ಕೆ ಕತ್ತರಿ ಹಾಕುವುದು ಆರ್ಥಿಕತೆ ಬೆಳವಣಿಗೆಗೆ ಉತ್ತಮ ಸಂಕೇತ ಎಂದು ರೈಲ್ವೆ ಸಚಿವ ಪಿಯೂಷ್ ಗೋಯೆಲ್ ಹೇಳಿದ್ದಾರೆ...
ಪಿಯೂಶ್ ಗೋಯಲ್
ಪಿಯೂಶ್ ಗೋಯಲ್
Updated on
ನವದೆಹಲಿ: ಉದ್ಯೋಗಕ್ಕೆ ಕತ್ತರಿ ಹಾಕುವುದು ಆರ್ಥಿಕತೆ ಬೆಳವಣಿಗೆಗೆ ಉತ್ತಮ ಸಂಕೇತ ಎಂದು ರೈಲ್ವೆ ಸಚಿವ ಪಿಯೂಷ್ ಗೋಯೆಲ್ ಹೇಳಿದ್ದಾರೆ. 
ದೇಶದಲ್ಲಿ ಉದ್ಯೋಗಾವಕಾಶಗಳು ಕಡಿಮೆಯಾಗುತ್ತಿರುವ ಬಗ್ಗೆ ಯುವಕರು, ವಿದ್ಯಾವಂತರು ಆತಂಕದಲ್ಲಿದ್ದರೆ ಇತ್ತ ಕೇಂದ್ರ ಸಚಿವರು ಇಂತಹ ಹೇಳಿಕೆ ನೀಡಿದ್ದಾರೆ. 
ಇಷ್ಟು ದಿನ ವಿದ್ಯಾವಂತರು ಬೇರೆಯವರ ಕೈಕೆಳಗೆ ಉದ್ಯೋಗ ಬಯಸುತ್ತಿದ್ದರು. ಉದ್ಯೋಗ ಕಡಿಮೆಯಾದರೆ ಅವರೇ ಸ್ವತಃ ಉದ್ಯೋಗಗಳನ್ನು ನೀಡುವ ಮಟ್ಟಕ್ಕೆ ಬೆಳೆಯಲು ಇದು ಅವಕಾಶ ನೀಡಲಿದೆ ಎಂಬರ್ಥದಲ್ಲಿ ಹೇಳಿದ್ದಾರೆ. 
ಜಾಗತಿಕ ಆರ್ಥಿಕ ವೇದಿಕೆಯ ಭಾರತೀಯ ಆರ್ಥಿಕ ಸಮ್ಮೇಳನದಲ್ಲಿ ದೇಶದ ಉದ್ಯೋಗಾವಕಾಶ ಸ್ಥಿತಿಯ ಬಗ್ಗೆ ಉದ್ಯಮ ಸಂಸ್ಥೆಗಳು ಕಳವಳ ವ್ಯಕ್ತಪಡಿಸಿದ್ದವು. ಕಳೆದ ಕೆಲವು ವರ್ಷಗಳಲ್ಲಿ 200ಕ್ಕೂ ಅಧಿಕ ಸಂಸ್ಥೆಗಳು ತಮ್ಮ ಉದ್ಯೋಗಾವಕಾಶಗಳಲ್ಲಿ ಮಹತ್ವದ ಕಡಿತ ಮಾಡಿವೆ ಎಂದು ಭಾರ್ತಿ ಏರ್ ಟೆಲ್ ಅಧ್ಯಕ್ಷ ಸುನೀಲ್ ಮಿತ್ತಲ್ ಆತಂಕ ವ್ಯಕ್ತಪಡಿಸಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com