ಗೋರಖ್ ಪುರ್: ಬಿಆರ್ ಡಿ ಮೆಡಿಕಲ್ ಕಾಲೇಜಿನಲ್ಲಿ ಕಳೆದ 24 ಗಂಟೆಗಳಲ್ಲಿ 16 ಕಂದಮ್ಮಗಳ ಸಾವು

ಗೋರಖ್ ಪುರದ ಬಿಆರ್ ಡಿ ಮೆಡಿಕಲ್ ಕಾಲೇಜಿನಲ್ಲಿ ಕಳೆದ 24 ಗಂಟೆಗಳಲ್ಲಿ 10 ನವಜಾತ ಶಿಶುಗಳು ಸೇರಿದಂತೆ ಒಟ್ಟು 16 ಮಕ್ಕಳು ಸಾವನ್ನಪ್ಪಿವೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಲಕ್ನೋ: ಗೋರಖ್ ಪುರದ ಬಿಆರ್ ಡಿ ಮೆಡಿಕಲ್ ಕಾಲೇಜಿನಲ್ಲಿ ಕಳೆದ 24 ಗಂಟೆಗಳಲ್ಲಿ 10 ನವಜಾತ ಶಿಶುಗಳು ಸೇರಿದಂತೆ ಒಟ್ಟು 16 ಮಕ್ಕಳು ಸಾವನ್ನಪ್ಪಿವೆ ಎಂದು ತಿಳಿದು ಬಂದಿದೆ.
ಹತ್ತು ಮಕ್ಕಳನ್ನು ನಿಯೋನಾಟಲ್ ಇಂಟೆನ್ಸಿವ್ ಕೇರ್ ಯುನಿಟ್ (ಎನ್ಐಸಿಯು) ಗೆ ದಾಖಲಿಸಲಾಗಿತ್ತು. ಉಳಿದ ಆರು ಮಕ್ಕಳನ್ನು ಐಸಿಯುನಲ್ಲಿರಿಸಲಾಗಿತ್ತು. ವರದಿಗಳ ಪ್ರಕಾರ, ಗೋರಕ್ ಪುರ, ದಿಯೋರಿಯಾ, ಖುಶಿನಗರ್, ಬಸ್ತಿ ಮತ್ತು ಬಲಾರಮ್ ಪುರಗಳಿಂದ ಒಟ್ಟು 20 ರೋಗಿಗಳು ದಾಖಲಾಗಿದ್ದರು.
ಮಿದುಳಿನ ಊರಿಯೂತ ಸಂಬಂಧ ಸಮಾರು 3 ಡಜನ್ ರೋಗಿಗಳು ಕಳೆದ 24 ಗಂಟೆಗಳಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಬಿಆರ್ ಡಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ, ಬಿಹಾರದಿಂದ ಕೂಡ ರೋಗಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ವರ್ಷದ ಜನವರಿಯಿಂದ ಬಿಆರ್ ಡಿ ಮೆಡಿಕಲ್ ಕಾಲೇಜಿನಲ್ಲಿ ಸುಮಾರು 1,70 ರೋಗಿಗಳು ದಾಖಲಾಗಿದ್ದಾರೆ, ಅದರಲ್ಲಿ 310 ಮಂದಿ ಸಾವನ್ನಪ್ಪಿದ್ದಾರೆ. ಈ ಮೊದಲು ಆಗಸ್ಟ್ ನಲ್ಲಿ ಸುಮಾರು 63 ಮಕ್ಕಳ ಸಾವಿಗೆ ಸಂಬಂಧಿಸಿದಂತೆ ಬಿಆರ್ ಡಿ ಮೆಡಿಕಲ್ ಕಾಲೇಜು ಸುದ್ದಿಯಲ್ಲಿತ್ತು.  ಆಕ್ಸಿಜನ್ ಕೊರತೆಯಿಂದಾಗಿ ಮಕ್ಕಳು ಸಾವನ್ನಪ್ಪಿದ್ದರು. ಈ ಸಂಬಂಧ 9 ಮಂದಿ ವಿರುದ್ಧ ಎಫ್ ಐಆರ್ ದಾಖಲಾಗಿತ್ತು. 
ಆದರೆ ಈ ಬಾರಿ ಸಂಭವಿಸಿದ ಸಾವು ಆಕ್ಸಿಜನ್ ಕೊರತೆಯಿಂದಲ್ಲ ಎಂದು ವೈದ್ಯರು ಸ್ಪಷ್ಟ ಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com