ಜಾಗತಿಕ ತೈಲ, ಅನಿಲ ಸಂಸ್ಥೆಗಳ ಸಿಇಓ ಗಳೊಡನೆ ಪ್ರಧಾನಿ ಮೋದಿ ಮಾತುಕತೆ, ಸಲಹೆ ಸ್ವೀಕಾರ

ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ತೈಲ ಮತ್ತು ಅನಿಲ ಸಂಸ್ಥೆಗಳ ಸಿಇಒಗಳೊಂದಿಗೆ, ಜಾಗತಿಕ ತಜ್ಞರ ಜೊತೆ ಸಂವಹನ ನಡೆಸಿದರು.
ಜಾಗತಿಕ ತೈಲ, ಅನಿಲ ಸಂಸ್ಥೆಗಳ ಸಿಇಓ ಗಳೊಡನೆ ಪ್ರಧಾನಿ ಮೋದಿ ಮಾತುಕತೆ
ಜಾಗತಿಕ ತೈಲ, ಅನಿಲ ಸಂಸ್ಥೆಗಳ ಸಿಇಓ ಗಳೊಡನೆ ಪ್ರಧಾನಿ ಮೋದಿ ಮಾತುಕತೆ
Updated on
ನವದೆಹಲಿ: ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ತೈಲ ಮತ್ತು ಅನಿಲ ಸಂಸ್ಥೆಗಳ  ಸಿಇಒಗಳೊಂದಿಗೆ, ಜಾಗತಿಕ ತಜ್ಞರ ಜೊತೆ ಸಂವಹನ ನಡೆಸಿದರು. 
2016 ರಲ್ಲಿ ನಡೆದಿದ್ದ ಕಡೆಯ ಸಭೆಯಲ್ಲಿ ನಾನು ಅನೇಕ ತಜ್ಞರ ಸಲಹೆಗಳನ್ನು ಸ್ವೀಕರಿಸಿದ್ದೇನೆ. ಇದು ನನಗೆ ಪ್ರಗತಿಪರ ಯೋಜನೆಗಳನ್ನು ರೂಪಿಸುವಲ್ಲಿ ನೆರವಾಗಿದೆ, ಹಾಗಿದ್ದರೂ ಇನ್ನೂ ಅನೇಕ ವಲಯಗಳಲ್ಲಿ ಸುಧಾರಣೆಗೆ ಕಾಣಬೇಕಿದೆ, ಪ್ರಧಾನಿ ಅಭಿಪ್ರಾಯ ಪಟ್ಟರು.
ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್ ಮತ್ತು ಆರ್.ಕೆ. ಸಿಂಗ್ ಮತ್ತು ನೀತಿ ಆಯೋಗ, ಪ್ರಧಾನ ಮಂತ್ರಿ ಕಚೇರಿ, ಪೆಟ್ರೋಲಿಯಂ ಸಚಿವಾಲಯ ಮತ್ತು ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ತೈಲ ಮತ್ತು ಅನಿಲ ವಲಯದಲ್ಲಿ ಭಾರತದ ವಿಶಿಷ್ಟ ಸಾಮರ್ಥ್ಯ ಮತ್ತು ಅವಶ್ಯಕತೆಗಳನ್ನು ಗಮನದಲ್ಲಿರಿಸಿಕೊಂಡು, ತಮ್ಮ ಸಂಸ್ಥೆಗಳ ಬಗೆಗೆ ಮಾತ್ರ ಕಾಳಜಿ ತೋರಿಸದೆ ದೇಶದ ಅಭಿವೃದ್ಧಿಗಾಗಿ ಸಲಹೆಗಳನ್ನು ನೀಡಿದ್ದಕ್ಕಾಗಿ ಪ್ರಧಾನಿ, ಸಭೆಯಲ್ಲಿ ಭಾಗವಹಿಸಿದ್ದ ಸಿಇಓ ಗಳಿಗೆ ಧನ್ಯವಾದ ಹೇಳಿದರು.
ಭಾರತದ ಶಕ್ತಿ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿ ರಷ್ಯಾ ತೋರಿದ್ದ ಬದ್ದತೆ ಹಾಗು ನೀಡಿದ ಬೆಂಬಲಕ್ಕಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ರಾಸ್ನೆಫ್ಟ್ ಅವರಿಗೆ ಪ್ರಧಾನಿ ಧನ್ಯವಾದ ಹೇಳಿದರು.  ಅವರು ಸೌದಿ ಅರೇಬಿಯಾದ ದ 2030 ವಿಷನ್ ದಾಖಲೆಯನ್ನು ಮೆಚ್ಚಿದರು.
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ರಾಜೀವ್ ಕುಮಾರ್ ನೀತಿ ಆಯೋಗದ ಉಪಾಧ್ಯಕ್ಷ ಈ ಕ್ಷೇತ್ರದಲ್ಲಿ ಮಾಡಿದ ಕೆಲಸದ ಅವಲೋಕನವನ್ನು ನೀಡಿದರು. ಭಾರತದಲ್ಲಿನ ಶಕ್ತಿ ಸಂಪನ್ಮೂಲ ಬೇಡಿಕೆಗಳ ಕುರಿತು ನಿರೀಕ್ಷಿತ ಬೆಳವಣಿಗೆಯನ್ನೂ ಸಹ ಅವರು ಒತ್ತಿಹೇಳಿದರು. ವಿದ್ಯುದೀಕರಣ ಮತ್ತು ಎಲ್ ಪಿಜಿ ವಲಯದಲ್ಲಿ ಗಮನಾರ್ಹ ಪ್ರಗತಿ ಸಾಧಿಸಿರುವುದಾಗಿ ಅವರು ನುಡಿದರು.
ನೀತಿ ಆಯೋಗದ ಉಪಾಧ್ಯಕ್ಷ, ಅಮಿತಾಭ್ ಕಾಂಟ್ ಭಾರತದಲ್ಲಿನ ತೈಲ ಮತ್ತು ಅನಿಲ ವಲಯದಲ್ಲಿ ಇತ್ತೀಚಿನ ಬೆಳವಣಿಗೆಗಳು ಮತ್ತು ಸವಾಲುಗಳನ್ನು ವಿವರಿಸಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com