ಇಂದಿನಿಂದ ದೆಹಲಿ ಮೆಟ್ರೊ ರೈಲು ಪ್ರಯಾಣ 10 ರು.ದುಬಾರಿ

ದೆಹಲಿ ಮೆಟ್ರೊ ರೈಲು ನಿಗಮ ತನ್ನ ಗ್ರಾಹಕರಿಗೆ ಮತ್ತೊಮ್ಮೆ ಶಾಕ್ ನೀಡಿದ್ದು, ಐದು ಕಿ.ಮೀ.ಗಿಂತ ಹೆಚ್ಚು ದೂರ ಪ್ರಯಾಣಿಸುವ ಪ್ರಯಾಣಿಕರ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ದೆಹಲಿ ಮೆಟ್ರೊ ರೈಲು ನಿಗಮ ತನ್ನ ಗ್ರಾಹಕರಿಗೆ ಮತ್ತೊಮ್ಮೆ ಶಾಕ್ ನೀಡಿದ್ದು, ಐದು ಕಿ.ಮೀ.ಗಿಂತ ಹೆಚ್ಚು ದೂರ ಪ್ರಯಾಣಿಸುವ ಪ್ರಯಾಣಿಕರ ಜೇಬಿಗೆ 10 ರುಪಾಯಿ ಕತ್ತರಿ ಹಾಕಿದೆ.
ದೆಹಲಿ ಮೆಟ್ರೊ ನಿಗಮ ಕಳೆದ ಐದು ತಿಂಗಳಲ್ಲಿ ಎರಡನೇ ಬಾರಿ ದರ ಏರಿಕೆ ಮಾಡಿದ್ದು, 5 ಕಿ.ಮೀ.ಗಿಂತ ಹೆಚ್ಚು ದೂರು ಪ್ರಯಾಣಿಸುವ ಗ್ರಾಹಕರ ಟಿಕೆಟ್ ಮೇಲೆ 10 ರುಪಾಯಿ ಹಾಗೂ 2.5 ಕಿ.ಮೀ.ದೂರಕ್ಕೆ 5 ರುಪಾಯಿ ಹೆಚ್ಚಳ ಮಾಡಲಾಗಿದೆ.
ನೂತನ ದರ ಇಂದಿನಿಂದಲೇ ಜಾರಿಗೆ ಬರಲಿದ್ದು, 2 ಕಿ.ಮೀ.ವರೆಗೆ 10 ರುಪಾಯಿ, 2ರಿಂದ 5 ಕಿ.ಮೀ.ಗೆ 20 ರುಪಾಯಿ, 5ರಿಂದ 12 ಕಿ.ಮೀ.ವರೆಗೆ 30 ರುಪಾಯಿ. 12ರಿಂದ 21 ಕಿ.ಮೀ.ವರೆಗೆ 40 ರುಪಾಯಿ, 21ರಿಂದ 32 ಕಿ.ಮೀ.ವರೆಗೆ 50 ರುಪಾಯಿ 32ಕಿ.ಮೀ.ಗಿಂತ ಹೆಚ್ಚು ದೂರಕ್ಕೆ 60 ರುಪಾಯಿ ದರ ನಿಗದಿ ಮಾಡಲಾಗಿದೆ
ಇನ್ನು ಸ್ಮಾರ್ಟ್ ಕಾರ್ಡ್ ಬಳಕೆದಾರರಿಗೆ ಶೇ.10ರಷ್ಟು ರಿಯಾಯ್ತಿಯನ್ನು ಮುಂದುವರೆಸಲಾಗಿದೆ.
ಕಳೆದ ಮೇ ತಿಂಗಳ ದೆಹಲಿಯಲ್ಲಿ ಮೆಟ್ರೊ ಪ್ರಯಾಣ ದರ ಹೆಚ್ಚಳ ಮಾಡಲಾಗಿತ್ತು. ಈಗ ಮತ್ತೆ ಗರಿಷ್ಠ 10 ರುಪಾಯಿ ಹೆಚ್ಚಳ ಮಾಡಲಾಗಿದೆ.
ಇದೇ ವರ್ಷದಲ್ಲಿ ಎರಡನೇ ಬಾರಿ ಪ್ರಯಾಣ ದರ ಏರಿಕೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com