ಉತ್ಪಾದನೆಯಲ್ಲಿನ ಹೆಚ್ಚಳ ಜಿಡಿಪಿ ಏರಿಕೆಗೆ ಮುಖ್ಯ: ವಿವೇಕ್ ಡೆಬ್ರಾಯ್

ದೇಶದ ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ಏರಿಕೆಯಾಗಬೇಕೆಂದರೆ ಉತ್ಪಾದನೆಯಲ್ಲಿ ಹೆಚ್ಚಳವಾಗಬೇಕು ಎಂದು ಖ್ಯಾತ ಅರ್ಥಶಾಸ್ತ್ರಜ್ಞ, ನೀತಿ ಆಯೋಗದ ಸದಸ್ಯ ವಿವೇಕ್ ಡೆಬ್ರಾಯ್ ಅಭಿಪ್ರಾಯಪಟ್ಟಿದ್ದಾರೆ.
ವಿವೇಕ್ ಡೆಬ್ರಾಯ್
ವಿವೇಕ್ ಡೆಬ್ರಾಯ್
ನವದೆಹಲಿ: ದೇಶದ ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ಏರಿಕೆಯಾಗಬೇಕೆಂದರೆ ಉತ್ಪಾದನೆಯಲ್ಲಿ ಹೆಚ್ಚಳವಾಗಬೇಕು ಎಂದು ಖ್ಯಾತ ಅರ್ಥಶಾಸ್ತ್ರಜ್ಞ, ನೀತಿ ಆಯೋಗದ ಸದಸ್ಯ ವಿವೇಕ್ ಡೆಬ್ರಾಯ್ ಅಭಿಪ್ರಾಯಪಟ್ಟಿದ್ದಾರೆ. 
ರಾಷ್ಟ್ರೀಯ ಆದಾಯಕ್ಕೆ ಹಲವು ಮೂಲಗಳಿವೆ. ಆದರೆ ಉತ್ಪಾದನಾ ವಲಯದಲ್ಲಿನ ಹೆಚ್ಚಳ ಒಟ್ಟು ರಾಷ್ಟ್ರೀಯ ಉತ್ಪನ್ನ ಏರಿಕೆಗೆ ಮುಖ್ಯವಾಗಲಿದೆ ಎಂದು ವಿವೇಕ್ ಡೆಬ್ರಾಯ್ ಸಿಐಐ ಆಯೋಜಿಸಲಾಗಿದ್ದ ಇಂಟರ್ ನೆಟ್ ಆಫ್ ಥಿಂಗ್ಸ್ 2017 ಶೃಂಗಸಭೆಯಲ್ಲಿ ಹೇಳಿದ್ದಾರೆ.  
ಭಾರತದ ಆರ್ಥಿಕತೆ ಕುಸಿದಿರುವ ಪರಿಣಾಮ ಪ್ರಧಾನಿ ನರೇಂದ್ರ ಮೋದಿ 5 ಸದಸ್ಯರ ಆರ್ಥಿಕ ಸಲಹಾ ಸಮಿತಿ ರಚಿಸಿ, ಆರ್ಥಿಕತೆಯ ಪುನಶ್ಚೇತನಕ್ಕೆ ಸಲಹೆ ನೀಡುವಂತೆ ಸೂಚಿಸಿದ್ದರು. ಈ ಸಮಿತಿಯಲ್ಲಿ ವಿವೇಕ್ ಡೆಬ್ರಾಯ್ ಸಹ ಇದ್ದು, ಇಎಸಿ ಕುರಿತು ಮಾಧ್ಯಮಗಳಿಗೆ ಅ.11 ರಂದು ಸ್ವತಃ ತಾವೇ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ. ಸರ್ಕಾರಿ ಮೂಲಗಳ ಪ್ರಕಾರ ಅ.11 ರಂದು ಇಎಸಿಯ ಮೊದಲ ಸಭೆ ನಡೆಯಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com