ನಾನು ವಿಶ್ವ ಪರಿತ್ಯಾಗಿ, 30 ಲಕ್ಷ ರು. ದಂಡ ಪಾವತಿಸಲು ಸಾಧ್ಯವಿಲ್ಲ: ಅತ್ಯಾಚಾರಿ ಬಾಬಾ

ಅತ್ಯಾಚಾರ ಪ್ರಕರಣದಲ್ಲಿ ಜೈಲು ಪಾಲಾಗಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಸಿಂಗ್ ಅವರು....
ಗುರ್ಮೀತ್ ರಾಮ್ ರಹೀಂ ಸಿಂಗ್
ಗುರ್ಮೀತ್ ರಾಮ್ ರಹೀಂ ಸಿಂಗ್
ಚಂಡೀಗಢ: ಅತ್ಯಾಚಾರ ಪ್ರಕರಣದಲ್ಲಿ ಜೈಲು ಪಾಲಾಗಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಸಿಂಗ್ ಅವರು ''ವಿಶ್ವ ಪರಿತ್ಯಾಗಿ''ಯಾಗಿರುವುದರಿಂದ, ಆತನ ಬಳಿ ಹಣ ಇಲ್ಲ, ಹೀಗಾಗಿ ಅವರಿಗೆ ವಿಧಿಸಿರುವ 30 ಲಕ್ಷ ರುಪಾಯಿ ದಂಡ ಪಾವತಿಸಲು ಸಾಧ್ಯವಿಲ್ಲ ಎಂದು ಅತ್ಯಾಚಾರ ಬಾಬ ಪರ ವಕೀಲರು ಸೋಮವಾರ ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟಿಗೆ ತಿಳಿಸಿದ್ದಾರೆ.
ರಾಮ್ ರಹೀಂ ಸಿಂಗ್ ಅವರು ತಮ್ಮ 20 ವರ್ಷ ಜೈಲು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಹಾಗೂ ಸಂತ್ರಸ್ಥ ಇಬ್ಬರು ಮಹಿಳೆಯರು ಬಾಬಾಗೆ ಜೀವಾವಧಿ ಶಿಕ್ಷೆ ವಿಧಿಸಬೇಕು ಎಂದು ಕೋರಿ ಸಲ್ಲಿಸಿದ್ದ ಎರಡು ಪ್ರತ್ಯೇಕ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಈ ಸಂಬಂಧ ಸಿಬಿಐಗೆ ನೋಟಿಸ್ ನೀಡಿದೆ.
ಇದೇ ವೇಳೆ ಸಿಬಿಐ ವಿಶೇಷ ನ್ಯಾಯಾಲ ವಿಧಿಸಿರುವ 30 ಲಕ್ಷ ರುಪಾಯಿ ದಂಡವನ್ನು ಪಾವತಿಸುವಂತೆ ರಾಮ್ ರಹೀಂ ಸಿಂಗ್ ಪರ ವಕೀಲರಿಗೆ ವಿಭಾಗೀಯ ಪೀಠ ಸೂಚಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಬಾಬಾ ಪರ ವಕೀಲರು, ರಾಮ್ ರಹೀಂ ಸಿಂಗ್ ಅವರು ವಿಶ್ವ ಪರಿತ್ಯಾಗಿಯಾಗಿದ್ದು, ಅವರಿಗೆ 30 ಲಕ್ಷ ರು. ದಂಡವನ್ನು ಪಾವತಿಸಲು ಅಸಾಧ್ಯ  ಎಂದು ಹೇಳಿದ್ದಾರೆ.
ಡೇರಾ ಮುಖ್ಯಸ್ಥನ ಎಲ್ಲ ಆಸ್ತಿ ಪಾಸ್ತಿಗಳನ್ನು ನ್ಯಾಯಾಲಯ ಮುಟ್ಟುಗೋಲು ಹಾಕಿರುವುದರಿಂದ ಮತ್ತು ಆತನು ಸರ್ವ ಪರಿತ್ಯಾಗಿಯಾಗಿರುವುದರಿಂದ ಆತನ ಬಳಿ ದಂಡ ಪಾವತಿಸಲು ಯಾವುದೇ ಹಣವಿಲ್ಲ ಎಂದು ಬಾಬಾ ಪರ ವಕೀಲ ಗರ್ಗ್‌ ನರ್ವಾನಾ ಕೋರ್ಟಿಗೆ ತಿಳಿಸಿದ್ದಾರೆ.
ಸಿಬಿಐ ವಿಶೇಷ ನ್ಯಾಯಾಲಯ ರಾಮ್ ರಹೀಂ ಸಿಂಗ್ ಗೆ ಎರಡು ತಿಂಗಳ ಒಳಗಾಗಿ ದಂಡ ಮೊತ್ತವಾಗಿರುವ 30 ಲಕ್ಷ ರೂ.ಗಳನ್ನು ಬ್ಯಾಂಕಿನಲ್ಲಿ ಇರಿಸುವಂತೆ ತೀರ್ಪಿನಲ್ಲಿ ಆದೇಶಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com