ಬಿಜೆಪಿ ನೈತಿಕತೆ ಕಳೆದುಕೊಂಡಿದೆ: ದಿ ವೈರ್ ವಿರುದ್ಧ ಪ್ರಕರಣದ ಬಗ್ಗೆ ಯಶ್ವಂತ್ ಸಿನ್ಹಾ ಪ್ರತಿಕ್ರಿಯೆ

ದಿ ವೈರ್ ವಿರುದ್ಧ ದಾಖಲಾಗಿರುವ ಮಾನನಷ್ಟ ಮೊಕದ್ದಮೆ ಬಗ್ಗೆ ಮಾಜಿ ಕೇಂದ್ರ ಸಚಿವ ಬಿಜೆಪಿ ನಾಯಕ ಯಶ್ವಂತ್ ಸಿನ್ಹಾ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿ ನೈತಿಕತೆ ಕಳೆದುಕೊಂಡಿದೆ ಎಂದು ಹೇಳಿದ್ದಾರೆ.
ಬಿಜೆಪಿ ನೈತಿಕತೆ ಕಳೆದುಕೊಂಡಿದೆ: ದಿ ವೈರ್ ವಿರುದ್ಧ ಪ್ರಕರಣದ ಬಗ್ಗೆ ಯಶ್ವಂತ್ ಸಿನ್ಹಾ ಪ್ರತಿಕ್ರಿಯೆ
ಪಾಟ್ನಾ: ಅಮಿತ್ ಷಾ ಅವರ ಪುತ್ರ ಜಯ್ ಷಾ ಅವರ ಆಸ್ತಿ ಅತ್ಯಲ್ಪ ಅವಧಿಯಲ್ಲಿ ಅತಿ ಹೆಚ್ಚು ಏರಿಕೆಯಾಗಿರುವುದರ ಬಗ್ಗೆ ವರದಿ ಪ್ರಕಟಿಸಿದ್ದ ದಿ ವೈರ್ ವಿರುದ್ಧ ದಾಖಲಾಗಿರುವ ಮಾನನಷ್ಟ ಮೊಕದ್ದಮೆ ಬಗ್ಗೆ ಮಾಜಿ ಕೇಂದ್ರ ಸಚಿವ ಬಿಜೆಪಿ ನಾಯಕ ಯಶ್ವಂತ್ ಸಿನ್ಹಾ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿ ನೈತಿಕತೆ ಕಳೆದುಕೊಂಡಿದೆ ಎಂದು ಹೇಳಿದ್ದಾರೆ.
ಇತ್ತೀಚೆಗಷ್ಟೇ ಮೋದಿ ನೇತೃತ್ವದ ಸರ್ಕಾರದ ಆರ್ಥಿಕ ನೀತಿಗಳನ್ನು ಟಿಕಿಸಿದ್ದ ಯಶ್ವಂತ್ ಸಿನ್ಹಾ, ಜಯ್ ಷಾ ನಡೆಸುತ್ತಿರುವ ಉದ್ಯಮದ ಆದಾಯದ ಬಗ್ಗೆ ವರದಿ ಪ್ರಕಟಿಸಿದ್ದ ದಿ ವೈರ್ ಸುದ್ದಿ ಜಾಲತಾಣದ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿರುವುದಕ್ಕೂ ಆಕ್ಷೇಪ ವ್ಯಕ್ತಪಡಿಸಿದ್ದು, ಕೇಂದ್ರ ಸಚಿವರೊಬ್ಬರು ಅಮಿತ್ ಷಾ ಮಗನನ್ನು ಸಮರ್ಥಿಸಿಕೊಳ್ಳಲು ನಿಂತಿದ್ದು ಸರಿಯಲ್ಲ, ಅವರು ಕೇಂದ್ರ ಸಚಿವರೇ ಹೊರತು ಜಯ್ ಷಾ ಅವರ ಚಾರ್ಟೆಡ್ ಅಕೌಂಟೆಂಟ್ ಅಲ್ಲ ಎಂದು ಹೇಳುವ ಮೂಲಕ ಕೇಂದ್ರ ಸಚಿವ ಪಿಯೂಷ್ ಗೋಯಲ್ ನೀಡಿದ್ದ ಸಮರ್ಥನೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 
ಇದೇ ವೇಳೆ ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಜಯ್ ಷಾ ಪರ ದಿ ವೈರ್ ವಿರುದ್ಧ ವಾದ ಮಾಡಲು ಅನುಮತಿ ನೀಡಿರುವುದಕ್ಕೂ ಸಹ ಯಶ್ವಂತ್ ಸಿನ್ಹಾ ಅಸಮಾಧಾನ ವ್ಯಕ್ತಪಡಿಸಿದ್ದು ಬಿಜೆಪಿ ನೈತಿಕತೆಯನ್ನು ಕಳೆದುಕೊಂಡಿದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com