ಗುರ್ಮೀತ್ ರಾಮ್ ರಹೀಂ ಮತ್ತು ಹನಿಪ್ರೀತ್
ಗುರ್ಮೀತ್ ರಾಮ್ ರಹೀಂ ಮತ್ತು ಹನಿಪ್ರೀತ್

ಪಂಚಕುಲ ಹಿಂಸಾಚಾರದ ಮಾಸ್ಟರ್ ಮೈಂಡ್ ನಾನೇ: ಹನಿಪ್ರೀತ್ ತಪ್ಪೊಪ್ಪಿಗೆ

ಆಗಸ್ಟ್ 25 ರಂದು ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಸಿಂಗ್ ದೋಷಿ ಎಂದು ಪಂಚಕುಲ ಸಿಬಿಐ ವಿಶೇಷ ಕೋರ್ಟ್ ತೀರ್ಪು ನೀಡಿದ ಬಳಿಕ ನಡೆದ ...
ಚಂಡಿಗಡ: ಆಗಸ್ಟ್ 25 ರಂದು ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಸಿಂಗ್ ದೋಷಿ ಎಂದು ಪಂಚಕುಲ ಸಿಬಿಐ ವಿಶೇಷ ಕೋರ್ಟ್ ತೀರ್ಪು ನೀಡಿದ ಬಳಿಕ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹರಿಯಾಣ ಪೊಲೀಸರು ಬಾಬಾನ ದತ್ತು ಪುತ್ರಿ ಹನಿಪ್ರೀತ್  ಇನ್ಸಾನ್ ಳನ್ನು ವಿಚಾರಣೆಗೊಳಪಡಿಸಿದ್ದಾರೆ.
ಪಂಚಕುಲ ಹಿಂಸಾಚಾರದ ಮಾಸ್ಟರ್ ಮೈಂಡ್ ನಾನೇ ಎಂದು ಹರಿಯಾಣದ ವಿಶೇಷ ಪೊಲೀಸ್ ಅಧಿಕಾರಿಗಳ ತಂಡದ ಮುಂದೆ ಹನಿಪ್ರೀತ್ ತಪ್ಪೊಪ್ಪಿಕೊಂಡಿದ್ದಾಳೆ.  ಗುರ್ಮಿತ್ ರಾಮ್ ರಹೀಂ ಗೆ ಶಿಕ್ಷೆ ಪ್ರಮಾಣ ಪ್ರಕಟವಾದ ನಂತರ ನಡೆದ ಹಿಂಸಾಚಾರದಲ್ಲಿ 38 ಮಂದಿ ತಮ್ಮ ಜೀವ ಕಳೆದು ಕೊಂಡಿದ್ದರು.
ಹಿಂಸಾಚಾರ ನಡೆಸಲು ಅದಕ್ಕಾಗಿ ಹಣ ನೀಡಲು ಡೇರಾ ಕಾರ್ಯಕರ್ತರಿಗೆ ಜವಾಬ್ದಾರಿ ನೀಡಲಾಗಿತ್ತು ಎಂದು ಹೇಳಿಕೆ ನೀಡಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಗಳು ಲ್ಯಾಪ್ ಟಾಪ್ ನಲ್ಲಿ ಸೇವ್ ಆಗಿದ್ದು, ಶೀಘ್ರವೇ ಅದನ್ನು ವಶ ಪಡಿಸಿಕೊಳ್ಳುವುದಾಗಿ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಆಗಸ್ಟ್ 25 ರಂದು ನಡೆದ ಹಿಂಸಾಚಾರದ ನೀಲಿನಕ್ಷೆ ಆಗಸ್ಟ್ 17 ರಂದು ನಡೆದ ಸಭೆಯಲ್ಲಿ ತಯಾರಾಗಿತ್ತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಹಿಂಸಾಚಾರದ ಪ್ರಕರಣ ಹೊರತು ಪಡಿಸಿ ಡೇರಾದ ಎಲ್ಲಾ ಹಣಕಾಸು ವ್ಯವಹಾರಗಳ ಮಾಹಿತಿ ಹನಿ ಪ್ರೀತ್ ಲ್ಯಾಪ್ ಟ್ಯಾಪ್ ನಲ್ಲಿ ಇದೆ ಎಂದು ಪೊಲೀಸರು ನಂಬಿದ್ದಾರೆ. ರಾಮ್ ರಹೀಂ ಬಹಿರಂಗ ಪಡಿಸದ ಸ್ಥಳ ಹಾಗೂ ಗುಪ್ತ ಖಾತೆಗಳ ಬಗ್ಗೆ ಹನಿಪ್ರೀತ್ ಗೆ ಮಾಹಿತಿ ಯಿದೆ ಎಂದು ಪೊಲೀಸರು ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com