ರಾಜ್ಯಗಳಲ್ಲಿ ಬಡತನ ಹೆಚ್ಚಿರುವೆಡೆ ಮನ್ರೇಗಾ ಯೋಜನೆಯಡಿಯಲ್ಲಿ ನೀಡಲಾಗುತ್ತಿರುವ ಕೆಲಸ ಹಂಚಿಕೆ ಕಡಿಮೆ ಇದೆ. ಉತ್ತಮ ಆಡಳಿತ ಇರುವ ರಾಜ್ಯಗಳಲ್ಲಿ ಮನ್ರೇಗಾ ಅಡಿಯಲ್ಲಿ ಉದ್ಯೋಗಗಳು ಹೆಚ್ಚಿದ್ದು, ಬಡತನವೂ ಕಡಿಮೆ ಇದೆ ಎಂದು ಮೋದಿ ಹೇಳಿದ್ದು, ಕೇವಲ ಒಳ್ಳೆಯ ಆಡಳಿತದ ಇಚ್ಛೆ ಇದ್ದರೆ ಸಾಲದು, ಅದಕ್ಕೆ ತಕ್ಕಂತೆ ನಿಗದಿತ ಸಮಯದಲ್ಲಿ ಕ್ರಮಗಳನ್ನೂ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.