ರಟ್ಟಿನಲ್ಲಿ ಹುತಾತ್ಮ ಯೋಧರ ಶವ: 2001 ರಿಂದಲೂ ಶವಪೆಟ್ಟಿಗೆಗಾಗಿ ಕಾಯುತ್ತಿರುವ ಸೇನೆ

ಎಂಐ 17 V5 ವಿಮಾನ ಪತನವಾಗಿದ್ದರ ಪರಿಣಾಮ ಮೃತಪಟ್ಟಿದ್ದ ಯೋಧರ ಶವಗಳನ್ನು ರಟ್ಟಿನಲ್ಲಿ ಸುತ್ತಿದ್ದು ಕಳೆದ ಕೆಲವು ದಿನಗಳ ಹಿಂದೆ ತೀವ್ರ ಚರ್ಚೆಯಾಗಿತ್ತು. ಈ ಬೆನ್ನಲ್ಲೇ ಮತ್ತೊಂದು ಮಾಹಿತಿ ಲಭ್ಯವಾಗಿದ್ದು...
ರಟ್ಟಿನಲ್ಲಿ ಹುತಾತ್ಮ ಯೋಧರ ಶವ
ರಟ್ಟಿನಲ್ಲಿ ಹುತಾತ್ಮ ಯೋಧರ ಶವ
ನವದೆಹಲಿ: ಎಂಐ 17 V5 ವಿಮಾನ ಪತನವಾಗಿದ್ದರ ಪರಿಣಾಮ ಮೃತಪಟ್ಟಿದ್ದ ಯೋಧರ ಶವಗಳನ್ನು ರಟ್ಟಿನಲ್ಲಿ ಸುತ್ತಿದ್ದು ಕಳೆದ ಕೆಲವು ದಿನಗಳ ಹಿಂದೆ ತೀವ್ರ ಚರ್ಚೆಯಾಗಿತ್ತು. ಈ ಬೆನ್ನಲ್ಲೇ ಮತ್ತೊಂದು ಮಾಹಿತಿ ಲಭ್ಯವಾಗಿದ್ದು, 2001 ರಿಂದಲೂ ಸೇನೆಯ ಬಳಿ ಶವಪೆಟ್ಟಿಗೆಗಳಿಲ್ಲ ಎಂದು ತಿಳಿದುಬಂದಿದೆ.  
ಕಾರ್ಗಿಲ್ ಯುದ್ಧದ ವೇಳೆಯಲ್ಲಿ ಶವಪೆಟ್ಟಿಗೆಗಳ ಅಗತ್ಯತೆ ಉಂಟಾಗಿತ್ತು. 1999 ರಲ್ಲಿ ಶವಪೆಟ್ಟಿಗೆಗಳನ್ನು ತರಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗಿತ್ತು. ಇದರ ಭಾಗವಾಗಿ ಒಪ್ಪಂದಕ್ಕೆ ಸಹಿ ಹಾಕಿ 3,000 ಬಾಡಿ ಬ್ಯಾಗ್ ಹಾಗೂ 400 ಶವಪೆಟ್ಟಿಗೆಗಳನ್ನು ತರಿಸಲಾಗಿತ್ತು. 2001 ರ ಆಗಸ್ಟ್ ತಿಂಗಳಲ್ಲಿ ಒಪ್ಪಂದವನ್ನು ರದ್ದುಗೊಳಿಸಲಾಯಿತು. 
ಶವಪೆಟ್ಟಿಗೆ ಖರೀದಿ ಒಪ್ಪಂದದಲ್ಲಿ ಹಗರಣ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅಂದಿನ ರಕ್ಷಣಾ ಸಚಿವರಾಗಿದ್ದ ಜಾರ್ಜ್ ಫರ್ನಾಂಡೀಸ್ ರಾಜೀನಾಮೆ ನೀಡಿದ್ದರು. ನಂತರ ಅವರ ಕ್ಲೀನ್ ಚಿಟ್ ನೀಡಲಾಗಿತ್ತು. ಹಗರಣ ನಡೆದಿರುವ ಆರೋಪ ಕೇಳಿಬಂದಿದ್ದ ಹಿನ್ನೆಲೆಯಲ್ಲಿ ಒಪ್ಪಂದದ ಪ್ರಕಾರ ಇನ್ನೂ ಬರಬೇಕಿದ್ದ 150 ಶವಪೆಟ್ಟಿಗೆಗಳು 16 ವರ್ಷಗಳಿಂದ ಹಾಗೆಯೇ ಉಳಿದಿದ್ದು, 2001 ರಿಂದಲೂ ಸೇನೆ ಬಾಕಿ ಬರಬೇಕಿರುವ ಬಾಡಿ ಬ್ಯಾಗ್ ಹಾಗೂ ಶವಪೆಟ್ಟಿಗೆಗಳಿಗಾಗಿ ಕಾಯುತ್ತಿದೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com