ವಿವಾದಿತ ಪ್ರದೇಶಗಳೂ ಸೇರಿದಂತೆ ಚೀನಾದೊಂದಿಗಿನ ಗಡಿ ಭಾಗದಲ್ಲಿ ಮೂಲಸೌಕರ್ಯ ಹೆಚ್ಚಳ

ಡೋಕ್ಲಾಮ್ ವಿವಾದ ತಣ್ಣಗಾಗುತ್ತಿದ್ದಂತೆಯೇ ರಕ್ಷಣಾ ಸಚಿವಾಲಯ ವಿವಾದಿತ ಪ್ರದೇಶವೂ ಸೇರಿದಂತೆ ಚೀನಾದೊಂದಿಗೆ ಇರುವ 4,000 ಕಿಮೀ ಉದ್ದದ ಗಡಿ ಭಾಗದಲ್ಲಿ ಮೂಲಸೌಕರ್ಯ ಹೆಚ್ಚಳ ಮಾಡಲು....
ವಿವಾದಿತ ಪ್ರದೇಶಗಳೂ ಸೇರಿದಂತೆ ಚೀನಾದೊಂದಿಗಿನ ಗಡಿ ಭಾಗದಲ್ಲಿ ಮೂಲಸೌಕರ್ಯ ಹೆಚ್ಚಳ!
ವಿವಾದಿತ ಪ್ರದೇಶಗಳೂ ಸೇರಿದಂತೆ ಚೀನಾದೊಂದಿಗಿನ ಗಡಿ ಭಾಗದಲ್ಲಿ ಮೂಲಸೌಕರ್ಯ ಹೆಚ್ಚಳ!
ನವದೆಹಲಿ: ಡೋಕ್ಲಾಮ್ ವಿವಾದ ತಣ್ಣಗಾಗುತ್ತಿದ್ದಂತೆಯೇ ರಕ್ಷಣಾ ಸಚಿವಾಲಯ ವಿವಾದಿತ ಪ್ರದೇಶವೂ ಸೇರಿದಂತೆ ಚೀನಾದೊಂದಿಗೆ ಇರುವ 4,000 ಕಿಮೀ ಉದ್ದದ ಗಡಿ ಭಾಗದಲ್ಲಿ ಮೂಲಸೌಕರ್ಯ ಹೆಚ್ಚಳ ಮಾಡಲು ತೀರ್ಮಾನಿಸಿದೆ. 
ಸೇನಾ ಕಮಾಂಡರ್ ಗಳ ಕಾನ್ಫರೆನ್ಸ್ ನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಕಾನ್ಫರೆನ್ಸ್ ನಡೆದ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಸಿಬ್ಬಂದಿ ಕರ್ತವ್ಯ ವಿಭಾಗದ ಡೈರೆಕ್ಟರ್ ಜನರಲ್ ಲೆಫ್ಟಿನೆಂಟ್ ಜನರಲ್ ವಿಜಯ್ ಸಿಂಗ್  ಉತ್ತರ ವಲಯದಲ್ಲಿ ರಸ್ತೆ ನಿರ್ಮಾಣ ಸೇರಿದಂತೆ ಮೂಲಸೌಕರ್ಯ ಯೋಜನೆಗಳನ್ನು ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ. 
ಇದೇ ವೇಳೆ ಈಗಿರುವ ಸಾಮರ್ಥ್ಯವನ್ನು ಹೆಚ್ಚಿಸಲು ಕಮಾಂಡರ್ ಗಳು ಕೆಲವು ಸಾಂಸ್ಥಿಕ ಬದಲಾವಣೆಗಳನ್ನೂ ಸೂಚಿಸಿದ್ದು, ಯಾವುದೇ ಅನಿಶ್ಚಿತ ಸಂದರ್ಭಗಳಲ್ಲೂ ಕಾರ್ಯಾಚರಣೆಗೆ ಸನ್ನದ್ಧವಾಗಿರುವಂತೆ ತಯಾರಾಗಿರುವಂತಾಗಬೇಕೆಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂದು ಹೇಳಿದ್ದಾರೆ. ವಾರ ಪೂರ್ತಿ ನಡೆದ ಕಾನ್ಫರೆನ್ಸ್ ನಲ್ಲಿ ಸೇನಾ ಮುಖ್ಯಸ್ಥರಾದ ಜನರಲ್ ಬಿಪಿನ್ ರಾವತ್ ಕಮಾಂಡರ್ ಗಳಿಗೆ ಸನ್ನದ್ಧರಾಗಿರುವಂತೆ ಹೇಳಿದ್ದಾರೆ. 
ಲಿಪುಲೇಕ್, ನಿತಿ ಥಾಂಗ್ಲಾ 1, ತ್ಸಾಂಗ್ಕೊಕ್ಲಾ ಗೆ ಸಂಪರ್ಕ ಕಲ್ಪಿಸುವ ನಾಲ್ಕು ಮಾರ್ಗಗಳ ಮೂಲಸೌಕರ್ಯವ್ವನ್ನು 2020 ರ ವೇಳೆಗೆ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ. ಈ ನಾಲ್ಕೂ ಮಾರ್ಗಗಳು ಉತ್ತಾರಾಖಂಡ್ ನಲ್ಲಿದ್ದು,  ಬಾರ್ಡರ್ ರೋಡ್ಸ್ ಆರ್ಗನೈಜೇಷನ್ ಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುವುದಕ್ಕೆ ನಿರ್ಧರಿಸಲಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com