ಬಡತನದ ಸೂಚ್ಯಂಕ: 100ನೇ ಸ್ಥಾನಕ್ಕೆ ಕುಸಿದ ಭಾರತ

ಭಾರತ ಈಗ ಅಭಿವೃದ್ಧಿಯ ಪಥದಲ್ಲಿ ದಾಪುಗಾಲು ಇಡುತ್ತಿದೆ. ಏಷ್ಯಾ ಸೇರಿದಂತೆ ಜಗತ್ತಿನಾದ್ಯಂತ ನಾಯಕರು ಭಾರತದ ಪ್ರಗತಿಯನ್ನು ಕಂಡು ಮೆಚ್ಚುಗೆ ಸೂಚಿಸುತ್ತಿದ್ದಾರೆ.............
ಬಡತನದ ಸೂಚ್ಯಾಂಕ: 100ನೇ ಸ್ಥಾನಕ್ಕೆ ಕುಸಿದ ಭಾರತ
ಬಡತನದ ಸೂಚ್ಯಾಂಕ: 100ನೇ ಸ್ಥಾನಕ್ಕೆ ಕುಸಿದ ಭಾರತ
ನವದೆಹಲಿ: ಭಾರತ ಈಗ ಅಭಿವೃದ್ಧಿಯ ಪಥದಲ್ಲಿ ದಾಪುಗಾಲು ಇಡುತ್ತಿದೆ. ಏಷ್ಯಾ ಸೇರಿದಂತೆ ಜಗತ್ತಿನಾದ್ಯಂತ ನಾಯಕರು ಭಾರತದ ಪ್ರಗತಿಯನ್ನು ಕಂಡು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಆದರೆ ದೇಶದಲ್ಲಿ ಬಡವರ ಹಸಿವು ಮಾತ್ರ ಇನ್ನೂ ಇಂಗಿಲ್ಲ. ಅಂತಾರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆ (ಐಎಫ್‌ ಪಿಆರ್‌ ಐ) ನ ವರದಿಯಂತೆ  ರೂಪಿಸಿರುವ ಜಾಗತಿಕ ಹಸಿವು ಸೂಚ್ಯಂಕ ಪಟ್ಟಿಯಲ್ಲಿ ಭಾರತ 100ನೇ ಸ್ಥಾನದಲ್ಲಿದೆ.
ಒಟ್ಟು 119 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಕಳೆದ ಬಾರಿಗಿಂತ ಮೂರು ಸ್ಥಾನ ಕುಸಿದಿದೆ. ಕಳೆದ ಬಾರಿ ದೇಶವು 97ನೇ ಸ್ಥಾನ ಪಡೆದಿತ್ತು. 
ನೆರೆ ರಾಷ್ಟ್ರಗಳಾದ ಪಾಕಿಸ್ತಾನ (106), ಅಫ್ಘಾನಿಸ್ತಾನ(107) ಭಾರತಕ್ಕಿಂತಲೂ ಕೆಳಗಿರುವುದು ತುಸು ಸಮಾಧಾನಕರ ಸಂಗತಿಯಾದರೂ ಚೀನಾದ (29), ನೇಪಾಳ (72), ಮ್ಯಾನ್ಮಾರ್‌ (77), ಶ್ರೀಲಂಕಾ(84), ಉತ್ತರ ಕೊರಿಯಾ(93), ಬಾಂಗ್ಲಾದೇಶ (88),ಇರಾಕ್‌(78) ಗಳು ನಮಗಿಂತ ಉತ್ತಮ ಸ್ಥಿತಿಯಲ್ಲಿವೆ ಎನ್ನುವುದು ಗಮನಾರ್ಹ.
ಪೋಷಕಾಂಶದ ಕೊರತೆ, ಮಕ್ಕಳ ಸಾವು, ಮಕ್ಕಳ ತೂಕ ಮತ್ತು ಎತ್ತರ ಸೇರಿ ವಿವಿಧ ಮಾನದಂದಗಳನ್ನು ಬಳಸಿ ಈ ಸೂಚ್ಯಾಂಕ ತಯಾರಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com