ಮುಘಲ್ ಸರಾಯಿ ರೈಲ್ವೆ ನಿಲ್ದಾಣ ದೀನ್ ದಯಾಳ್ ಉಪಾಧ್ಯಾಯ ನಿಲ್ದಾಣ ಎಂದು ಮರುನಾಮಕರಣ

ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ರಾಜ್ಯದ ಅತಿ ದೊಡ್ಡ ಜಕ್ಷನ್ ಎಂದೇ ಖ್ಯಾತಿ ಪಡೆದಿರುವ ಮುಘಲ್ ಸರಾಯಿ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮುಘಲ್ ಸರಾಯಿ: ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ರಾಜ್ಯದ ಅತಿ ದೊಡ್ಡ ಜಕ್ಷನ್ ಎಂದೇ ಖ್ಯಾತಿ ಪಡೆದಿರುವ ಮುಘಲ್ ಸರಾಯಿ ರೈಲ್ವೆ ನಿಲ್ದಾಣಕ್ಕೆ ಆರ್ ಎಸ್ ಎಸ್ ಚಿಂತಕ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ರೈಲ್ವೆ ನಿಲ್ದಾಣ ಎಂದು ಮರುನಾಮಕರಣ ಮಾಡಿದೆ.
ಕಳೆದ ಆಗಸ್ಟ್ ನಲ್ಲಿ ಐತಿಹಾಸಿಕ ಮತ್ತು ಅತ್ಯಂತ ಹಳೆಯದಾದ ಮುಘಲ್ ಸರಾಯಿ ರೈಲ್ವೆ ನಿಲ್ದಾಣದ ಹೆಸರು ಬದಲಾವಣೆಗೆ ಉತ್ತರ ಪ್ರದೇಶ ಸರ್ಕಾರ ಸಲ್ಲಿಸಿದ್ದ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಇಂದು ಒಪ್ಪಿಗೆ ನೀಡಿದೆ.
ಫೆಬ್ರವರಿ 11, 1968ರಲ್ಲಿ ಜನ ಸಂಘ ನಾಯಕ ದೀನ್ ದಯಾಳ್ ಉಪಾಧ್ಯಾಯ ಅವರು ಮುಘಲ್ ಸರಾಯಿ ರೈಲ್ವೆ ನಿಲ್ದಾಣದ ಸಮೀಪ ನಿಗೂಢವಾಗಿ ಮೃತಪಟ್ಟಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com