ರಾಷ್ಟ್ರೀಯ ಭಾವೈಕ್ಯತೆಗಾಗಿ ಟಿಎಂ ಕೃಷ್ಣ ಗೆ ಇಂದಿರಾ ಗಾಂಧಿ ಪ್ರಶಸ್ತಿ

ಖ್ಯಾತ ಕರ್ನಾಟಕ ಸಂಗೀತಗಾರ ಟಿ.ಎಮ್.ಕೃಷ್ಣ ಅವರಿಗೆ ರಾಷ್ಟ್ರೀಯ ಭಾವೈಕ್ಯತೆಗೆ 2015-16ನೇ ಸಾಲಿನ ಇಂದಿರಾ ಗಾಂಧಿ ....
ಟಿ.ಎಂ.ಕೃಷ್ಣ
ಟಿ.ಎಂ.ಕೃಷ್ಣ
ನವದೆಹಲಿ: ಖ್ಯಾತ ಕರ್ನಾಟಕ ಸಂಗೀತಗಾರ ಟಿ.ಎಮ್.ಕೃಷ್ಣ ಅವರಿಗೆ ರಾಷ್ಟ್ರೀಯ ಭಾವೈಕ್ಯತೆಗೆ 2015-16ನೇ ಸಾಲಿನ ಇಂದಿರಾ ಗಾಂಧಿ ಪ್ರಶಸ್ತಿ ಲಭಿಸಿದೆ.
ಸಂಸ್ಕೃತಿಯಲ್ಲಿ ಸಾಮಾಜಿಕ ಅಂತರ್ಗತೆಗೆ ಕೆಲಸ ಮಾಡಿದ್ದಕ್ಕಾಗಿ ಟಿ.ಎಂ.ಕೃಷ್ಣ ಅವರು ಈ ಹಿಂದೆ ಮ್ಯಾಗ್ಸೆಸೆ ಪ್ರಶಸ್ತಿ ಗಳಿಸಿದ್ದರು.
ಸಂಗೀತದಲ್ಲಿ ಸೃಜನಾತ್ಮಕ ಕಲೆಗೆ ಹೆಸರಾಗಿರುವ ಕೃಷ್ಣ ಅವರು ಸಾಮಾಜಿಕ ವಿಷಯಗಳ ಕುರಿತ ಚರ್ಚೆ ಮತ್ತು ಬರವಣಿಗೆಯಲ್ಲಿ ತೊಡಗಿದ್ದಾರೆ.
 ಚೆನ್ನೈ ಪೊರೊಂಬೋಕ್ ಪಾಡಾಲ್ ಎಂಬ ಹಾಡನ್ನು ಈ ವರ್ಷದ ಆರಂಭದಲ್ಲಿ ಟಿ.ಎಂ.ಕೃಷ್ಣ ಬಿಡುಗಡೆ ಮಾಡಿದ್ದರು. ಚೆನ್ನೈನ ಎನ್ನೊರ್ ಕ್ರೀಕ್ ನಲ್ಲಿ ನಡೆದ ಭೂ ಒತ್ತುವರಿ ಕುರಿತು ಅರಿವು ಮೂಡಿಸಲು ಚೆನ್ನೈ ಉಪಭಾಷೆಯಲ್ಲಿ ಈ ಕರ್ನಾಟಕ ಸಂಗೀತವನ್ನು ಬರೆಯಲಾಗಿತ್ತು. ಕೃಷ್ಣ ಅವರು ಉರುರ್ -ಒಲ್ಕೊಟ್ಟು ಕುಪ್ಪಮ್ ಉತ್ಸವದ ಮುಖ್ಯ ಆಯೋಜಕರಾಗಿದ್ದಾರೆ. ಈ ಉತ್ಸವದಲ್ಲಿ ವಿವಿಧ ಕಲಾ ಪ್ರಕಾರಗಳನ್ನು ಒಂದೇ ವೇದಿಕೆಯಡಿ ತೋರಿಸಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com