ತೇಜಸ್ ಎಕ್ಸ್ ಪ್ರೆಸ್ ನಲ್ಲಿ ಆಹಾರ ಸೇವಿಸಿದ 24 ಮಂದಿ ಅಸ್ವಸ್ಥ

ಗೋವಾ-ಮುಂಬೈ ಮಾರ್ಗವಾಗಿ ಸಂಚರಿಸುತ್ತಿದ್ದ ತೇಜಸ್ ಎಕ್ಸ್ ಪ್ರೆಸ್ ನಲ್ಲಿ ಆಹಾರ ಸೇವಿಸಿದ್ದ 24 ಮಂದಿ ಅಸ್ವಸ್ಥರಾಗಿದ್ದಾರೆ.
ತೇಜಸ್ ಎಕ್ಸ್ ಪ್ರೆಸ್
ತೇಜಸ್ ಎಕ್ಸ್ ಪ್ರೆಸ್
ಮುಂಬೈ: ಗೋವಾ-ಮುಂಬೈ ಮಾರ್ಗವಾಗಿ ಸಂಚರಿಸುತ್ತಿದ್ದ ತೇಜಸ್ ಎಕ್ಸ್ ಪ್ರೆಸ್ ನಲ್ಲಿ ಆಹಾರ ಸೇವಿಸಿದ್ದ 24 ಮಂದಿ ಅಸ್ವಸ್ಥರಾಗಿದ್ದಾರೆ. 
ಪ್ಯಾಂಟ್ರಿ ಕಾರ್ ಆಪರೇಟರ್ ತಯಾರಿಸುವ ಆಹಾರ ಸೇವಿಸಿರುವವರ ಪೈಕಿ ಅಸ್ವಸ್ಥಗೊಂಡಿರುವ 24 ಮಂದಿಯನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಘಟನೆ ಬಗ್ಗೆ ಐಆರ್ ಸಿಟಿಸಿ ತನಿಖೆ ಪ್ರಾರಂಭಿಸಿದೆ ಎಂದು ಹೇಳಿದೆ. ಆಹಾರ ಸೇವಿಸಿದ ನಂತರ ಸುಮಾರು ಮಧ್ಯಾಹ್ನ 12.10ರ ವೇಳೆಗೆ ಆರೋಗ್ಯದಲ್ಲಿ ವ್ಯತ್ಯಯ ಆಗಿರುವ ಬಗ್ಗೆ ಪ್ರಯಾಣಿಕರು ದೂರು ನೀಡಿದ್ದಾರೆ. 
ಮಧ್ಯಾಹ್ನ 3.15 ರ ವೇಳೆಗೆ ಚಿಪ್ಲುನ್ ರೈಲು ನಿಲ್ದಾಣದಲ್ಲಿ ರೈಲು ನಿಲುಗಡೆಯಾದಾಗ ಅವರನ್ನು ರೈಲಿನಿಂದ ಕೆಳಗಿಳಿಸಿ, ಆಸ್ಪತ್ರೆಗೆ ದಾಖಲಿಸಲಾಗಿದೆ. ತೇಜಸ್ ಎಕ್ಸ್ ಪ್ರೆಸ್ ನಲ್ಲಿ ಆಹಾರದ ವ್ಯವಸ್ಥೆಯನ್ನು ಐಆರ್ ಸಿಟಿಸಿ ನಿರ್ವಹಿಸುತ್ತಿದ್ದು, ಆಹಾರದ ಮಾದರಿಗಳನ್ನು ತಪಾಸಣೆಗೆ ಕಳಿಸಿಕೊಡಲಾಗಿದೆ, ಒಟ್ಟು 230 ಜನರು ಆಹಾರ ಸೇವಿಸಿದ್ದರು ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com