ದೇಶೀ ನಿರ್ಮಿತ ಯುದ್ಧನೌಕೆ ಐಎನ್ಎಸ್ ಕಿಲ್ತಾನ್ ಲೋಕಾರ್ಪಣೆ, ನೌಕಾಪಡೆಗೆ ಸೇರ್ಪಡೆ

ದೇಶೀಯವಾಗಿ ನಿರ್ಮಿಸಲಾಗುತ್ತಿರುವ ನಾಲ್ಕು ಜಲಾಂತರ್ಗಾಮಿ ಯುದ್ಧ ನೌಕೆಗಳ ಪೈಕಿ 3ನೆಯ ಜಲಾಂತರ್ಗಾಮಿ ನೌಕೆ (ಎಎಸ್ ಡಬ್ಲ್ಯೂ) ಐಎನ್ಎಸ್ ಕಿಲ್ತಾನ್ ನ್ನು ಅ.16 ರಂದು ಭಾರತೀಯ ನೌಕಾಪಡೆಗೆ
ಐಎನ್ಎಸ್ ಕಿಲ್ತಾನ್
ಐಎನ್ಎಸ್ ಕಿಲ್ತಾನ್
ನವದೆಹಲಿ: ದೇಶೀಯವಾಗಿ ನಿರ್ಮಿಸಲಾಗುತ್ತಿರುವ ನಾಲ್ಕು ಜಲಾಂತರ್ಗಾಮಿ ಯುದ್ಧ ನೌಕೆಗಳ ಪೈಕಿ 3ನೆಯ ಜಲಾಂತರ್ಗಾಮಿ ನೌಕೆ (ಎಎಸ್ ಡಬ್ಲ್ಯೂ) ಐಎನ್ಎಸ್ ಕಿಲ್ತಾನ್ ನ್ನು ಅ.16 ರಂದು ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡಿದೆ.
ಪ್ರಾಜೆಟ್ 28 (ಕಾಮೋರ್ಟಾಶ್ರೇಣಿ)ಯಡಿಯಲ್ಲಿ ನಿರ್ಮಾಣವಾಗಿರುವ ಐಎನ್ಎಸ್ ಕಿಲ್ತಾನ್ ನ್ನು ವಿಶಾಖಪಟ್ಟಣದ ನೌಕಾ ಡಾಕ್ಯಾರ್ಡ್ ನಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಾರ್ಪಣೆಗೊಳಿಸಿದ್ದಾರೆ. ಲೋಕಾರ್ಪಣೆ ಸಮಾರಂಭದಲ್ಲಿ ಅಡ್ಮಿರಲ್ ಸುನಿಲ್ ಲಾನ್ಬಾ, ಪಿವಿಎಸ್ಎಂ, ಎವಿಎಸ್ಎಂ, ಎಡಿಸಿ, ನೌಕಾ ಸಿಬ್ಬಂದಿ ಮುಖ್ಯಸ್ಥ ಸೇರಿದಂತೆ ಇನ್ನಿತರ ಗಣ್ಯರು ಭಾಗವಹಿಸಿದ್ದರು. 
ಭಾರತೀಯ ನೌಕಾಪಡೆಯ ಸಂಸ್ಥೆ ನೌಕಾ ವಿನ್ಯಾಸದ ನಿರ್ದೇಶನಾಲಯದಿಂದ ವಿನ್ಯಾಸಗೊಂಡಿರುವ ಐಎನ್ಎಸ್ ಕಿಲ್ತಾನ್ ದೇಶೀ ನಿರ್ಮಿತ ಜಲಾಂತರ್ಗಾಮಿ ನೌಕೆಯಾಗಿದ್ದು, ಕೋಲ್ಕತ್ತಾದ ಗಾರ್ಡನ್ ರೀಚ್ ಶಿಪ್ಬಿಲ್ಡರ್ಗಳು ಮತ್ತು ಇಂಜಿನಿಯರ್ಸ್ (ಜಿಆರ್ ಎಸ್ಇ) ಯಿಂದ ನಿರ್ಮಿಸಲ್ಪಟ್ಟಿದೆ. ಶಿವಾಲಿಕ್ ಕ್ಲಾಸ್, ಕೋಲ್ಕತ್ತಾ ಕ್ಲಾಸ್, ಐಎನ್ ಎಸ್ ಕಮೋರ್ಟಾ ಕ್ಲಾಸ್ ನೌಕೆಗಳು ಸೇರ್ಪಡೆಯಾದ ನಂತರ ನೌಕಾದಳಕ್ಕೆ ಸೇರ್ಪಡೆಯಾಗುತ್ತಿರುವ ಇತ್ತೀಚಿನ ದೇಶಿ ನಿರ್ಮಿತ ನೌಕೆಯಾಗಿದೆ. 
ಐಎನ್ಎಸ್ ಕಿಲ್ತಾನ್ ಅತ್ಯಾಧುನಿಕ ರಕ್ಷಣಾ ವೈಶಿಷ್ಟ್ಯಗಳನ್ನು ಹೊಂದಿರುವ ಭಾರತದ ಮೊದಲ ಪ್ರಮುಖ ಜಲಾಂತರ್ಗಾಮಿ ಯುದ್ಧ ನೌಕೆಯಾಗಿದ್ದು, ಪರೀಕ್ಷಾರ್ಥ ಪ್ರಯೋಗದ ವೇಳೆಯಲ್ಲಿ ಯುದ್ಧ ನೌಕೆಯನ್ನು ಸಾಗರದ ಆಳಕ್ಕೆ ಕಳಿಸಿ ಎಲ್ಲಾ ಪ್ರಮುಖ ಅಸ್ತ್ರಗಳನ್ನೂ ಪ್ರಯೋಗಿಸಲಾಗಿದ್ದು ಯಶಸ್ವಿಯಾಗಿರುವ ನೌಕೆ ಎಂಬ ಹೆಗ್ಗಳಿಕೆಗೆ ಕಿಲ್ತಾನ್ ಪಾತ್ರವಾಗಿದೆ. ಕಡಿಮೆ ವ್ಯಾಪ್ತಿಯ ಎಸ್ಎಎಂ ವ್ಯವಸ್ಥೆಯನ್ನು ಐಎನ್ಎಸ್ ಕಿಲ್ತಾನ್ ನಲ್ಲಿ ಅಳವಡಿಸಬಹುದಾಗಿದ್ದು, ಎಎಸ್ ಡಬ್ಲ್ಯೂ ಹೆಲಿಕಾಫ್ಟರ್ ನ್ನೂ ಹೊತ್ತೊಯ್ಯುವ ಸಾಮಾರ್ಥ್ಯ ಹೊಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com