ಡಾರ್ಜಿಲಿಂಗ್ ನಿಂದ ಕೇಂದ್ರೀಯ ಪಡೆಗಳ ತೆರವಿಗೆ ಕೋಲ್ಕತಾ ಹೈಕೋರ್ಟ್ ತಡೆ

ಹಿಂಸಾಚಾರ ಪೀಡಿತ ಡಾರ್ಜಿಲಿಂಗ್ ನಿಂದ ಕೇಂದ್ರೀಯ ಭದ್ರತಾ ಪಡೆಗಳನ್ನು ತೆರವುಗೊಳಿಸದಂತೆ ಮಂಗಳವಾರ ಕೋಲ್ಕತಾ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಕೋಲ್ಕತಾ: ಹಿಂಸಾಚಾರ ಪೀಡಿತ ಡಾರ್ಜಿಲಿಂಗ್ ನಿಂದ ಕೇಂದ್ರೀಯ ಭದ್ರತಾ ಪಡೆಗಳನ್ನು ತೆರವುಗೊಳಿಸದಂತೆ ಮಂಗಳವಾರ ಕೋಲ್ಕತಾ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಡಾರ್ಜಿಲಿಂಗ್ ನಿಂದ ಕೇಂದ್ರೀಯ ಭದ್ರತಾ ಪಡೆಗಳನ್ನು ಹಿಂಪಡೆಯುವ ಕೇಂದ್ರ ಸರ್ಕಾರದ ಆದೇಶಕ್ಕೆ ತಡೆ ಕೋರಿ ಪಶ್ಚಿಮ ಬಂಗಾಳ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ವಿಭಾಗೀಯ ಪೀಠ, ಭದ್ರತಾ ಪಡೆಗಳ ತೆರವಿಗೆ ತಡೆ ನೀಡಿದೆ. ಅಲ್ಲದೆ ಈ ಸಂಬಂಧ ಅಕ್ಟೋಬರ್ 23ರೊಳಗೆ ಅಫಿಡವಿಟ್ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿ ವಿಚಾರಣೆಯನ್ನು ಅಕ್ಟೋಬರ್ 27ಕ್ಕೆ ಮುಂದೂಡಿದೆ.
ಈ ಸಂಬಂಧ ರಾಜ್ಯ ಸರ್ಕಾರ ಸಹ ಅಕ್ಟೋಬರ್ 26ರಂದು ಅಫಿಡವಿಟ್ ಸಲ್ಲಿಸಲಿದೆ.
ಕೇಂದ್ರೀಯ ಪಡೆಯ 10 ತುಕಡಿಗಳನ್ನು ಅಕ್ಟೋಬರ್ 16ರಿಂದ ಹಿಂಪಡೆಯುತ್ತಿರುವುದಾಗಿ ಹಾಗೂ ಉಳಿದ ಐದು ತುಕಡಿಗಳನ್ನು ಅಕ್ಟೋಬರ್ 20ರ ನಂತರ ಹಿಂಪಡೆಯುವುದಾಗಿ ಕಳೆದ ಭಾನುವಾರ ಕೇಂದ್ರ ಗೃಹ ಸಚಿವಾಲಯ ತಿಳಿಸಿದ್ದು. ಆದರೆ ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ತೀವ್ರ ಅಸಮಾಧಾನಗೊಂಡ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದಿದ್ದರು. ಅಲ್ಲದೆ ಡಾರ್ಜಿಲಿಂಗ್ ನಿಂದ ಕೇಂದ್ರೀಯ ಪಡೆಗಳನ್ನು ಹಿಂಪಡೆಯುತ್ತಿರುವುದು ರಾಜಕೀಯವಾಗಿ ಮತ್ತು ಆಡಳಿತಾತ್ಮಕವಾಗಿಯೂ ಕೆಟ್ಟ ನಿರ್ಧಾರ ಎಂದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com