ಎಚ್-1ಬಿ ವೀಸಾ ವಿವಾದ ಶೀಘ್ರ ಇತ್ಯರ್ಥವಾಗಲಿ, ಅಮೆರಿಕ ಕಾಂಗ್ರೆಸ್ ಸಭೆಯಲ್ಲಿ ಸುಷ್ಮಾ ಸ್ವರಾಜ್ ಮನವಿ

ವಿದೇಶಾಂಗ ವ್ಯವಹಾರಗಳ ಸಚಿವ ಸುಷ್ಮಾ ಸ್ವರಾಜ್ ಅಮೆರಿಕದ ಕಾಂಗ್ರೆಸ್ ಪ್ರತಿನಿಧಿ ಸಭೆಯೊಂದರಲ್ಲಿ ಮಾತನಾಡಿ ಎಚ್-1ಬಿ ವೀಸಾ ವಿವಾದವನ್ನು ಶಿಘ್ರವಾಗಿ ಬಗೆಹರಿಸಬೇಕೆಂದು ಕೇಳಿದ್ದಲ್ಲದೆ.....
ಸುಷ್ಮಾ ಸ್ವರಾಜ್
ಸುಷ್ಮಾ ಸ್ವರಾಜ್
ನವದೆಹಲಿ: ವಿದೇಶಾಂಗ ವ್ಯವಹಾರಗಳ ಸಚಿವ ಸುಷ್ಮಾ ಸ್ವರಾಜ್ ಅಮೆರಿಕದ ಕಾಂಗ್ರೆಸ್ ಪ್ರತಿನಿಧಿ ಸಭೆಯೊಂದರಲ್ಲಿ  ಮಾತನಾಡಿ ಎಚ್-1ಬಿ ವೀಸಾ ವಿವಾದವನ್ನು ಶಿಘ್ರವಾಗಿ ಬಗೆಹರಿಸಬೇಕೆಂದು ಕೇಳಿದ್ದಲ್ಲದೆ ಅದಕ್ಕೆ ಉಭಯಪಕ್ಷದ ಬೆಂಬಲ ನೀಡುವಂತೆ ಮನವಿ ಮಾಡಿದರು.
ಲಾಮರ್ ಸ್ಮಿತ್ ನೇತೃತ್ವದ ವಿಜ್ಞಾನ, ಬಾಹ್ಯಾಕಾಶ ಮತ್ತು ತಂತ್ರಜ್ಞಾನ ಸಂಬಂಧಿ 9 ಸದಸ್ಯರ ಅಮೆರಿಕ ಕಾಂಗ್ರೆಸ್ ನಿಯೋಗವನ್ನು ಸ್ವಾಗತಿಸುವುದಾಗಿ ಸಚಿವಾಲಯ ವಕ್ತಾರ ರವೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.
"ಸುಷ್ಮಾ  ಸ್ವರಾಜ್ ಹೆಚ್ 1ಬಿ ವೀಸಾದ ವಿಚಾರದಲ್ಲಿ ಅತ್ಯಂತ ಮುತುವರ್ಜಿ ಹೊಂದಿದ್ದಾರೆ ಮತ್ತು ಇದಕ್ಕೆ ಉಭಯಪಕ್ಷೀಯ ಕಾಂಗ್ರೆಷನಲ್ ಬೆಂಬಲವನ್ನು ಅವರು ಕೋರಿದರು," ಎಂದು ರವೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ಅಮೆರಿಕಾದಲ್ಲಿ ಇತ್ತೀಚೆಗೆ ನಡೆದ ಭೇಟಿಯಲ್ಲಿ, ಹಣಕಾಸು ಸಚಿವ ಅರುಣ್ ಜೇಟ್ಲಿ ಈ ವಿಷಯವನ್ನು ಎತ್ತಿದ್ದರು ಮತ್ತು "ಎಚ್-1ಬಿ ವೀಸಾಗಳಲ್ಲಿ ಭಾರತದಿಂದ ಬರುವವರು ಅಮೆರಿಕದ ಆರ್ಥಿಕತೆಗೆ ಅಗಾಧವಾಗಿ ಕೊಡುಗೆ ನೀಡುವ ಉನ್ನತ ಮೌಲ್ಯದ ವೃತ್ತಿಪರರಾಗಿದ್ದಾರೆ. ಇವರಲ್ಲಿ ಯಾರೂ ಕಾನೂನು ಬಾಹಿರವಾಗಿ ದೇಶವನ್ನು ಪ್ರವೇಶಿಸುವುದಿಲ್ಲ. "ಎಂದಿದ್ದರು.
ವೀಸಾ ನೀತಿಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಾಗ ಅಮೆರಿಕಾ ಸೂಕ್ತವಾಗಿ ನಿರ್ಧರಿಸಬೇಕು, ಚ್-1ಬಿ ವೀಸಾ ಎನ್ನುವುದು ವಿದೇಶಿ ನೌಕರರನ್ನು ವಿಶೇಷ ಉದ್ಯೋಗಗಳಲ್ಲಿ ನೇಮಿಸಿಕೊಳ್ಳಲು ಅಮೆರಿಕನ್ ಸಂಸ್ಥೆಗಳಿಗೆ ಅನುಮತಿಸುವ ವಲಸೆ ರಹಿತ ವೀಸಾ ಆಗಿದೆ. ಭಾರತೀಯ ಐಟಿ ಉದ್ಯೋಗಿಗಳು ಇದನ್ನು ಹೆಚ್ಚು ಅವಲಂಬಿಸುತ್ತಾರೆ.
ಭಾರತ-ಯುಎಸ್ ಕಾರ್ಯತಂತ್ರದ ಸಂಬಂಧ ಅಮೆರಿಕ ಕಾಂಗ್ರೆಸ್ ನ ಧನಾತ್ಮಕ ಪಾತ್ರವನ್ನು ಅವರು ಬಯಸಿದ್ದಾರೆ ಎಂದು ಕುಮಾರ್ ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com