ನೀಲವೆಂಬು ಕದಿನೀರ್ ವಿರುದ್ಧ ಹೇಳಿಕೆ, ನಟ ಕಮಲ್ ಹಾಸನ್ ವಿರುದ್ಧ ಕೇಸ್ ದಾಖಲು

ಡೆಂಗಿ ಜ್ವರವನ್ನು ತಡೆಗಟ್ಟಲು ‘ನೀಲವೆಂಬು ಕದಿನೀರ್’(ಕಹಿಬೇವಿನಿಂದ ತಯಾರಿಸಿದ ಸಾಂಪ್ರದಾಯಿಕ ಔಷಧಿ)....
ಕಮಲ್ ಹಾಸನ್
ಕಮಲ್ ಹಾಸನ್
ಚೆನ್ನೈ: ಡೆಂಗಿ ಜ್ವರವನ್ನು ತಡೆಗಟ್ಟಲು ‘ನೀಲವೆಂಬು ಕದಿನೀರ್’(ಕಹಿಬೇವಿನಿಂದ ತಯಾರಿಸಿದ ಸಾಂಪ್ರದಾಯಿಕ ಔಷಧಿ) ವಿತರಿಸುವುದಕ್ಕಿ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಖ್ಯಾತ ತಮಿಳು ನಟ ಕಮಲ್ ಹಾಸನ್ ಅವರ ವಿರುದ್ಧ ಗುರುವಾರ ಚೆನ್ನೈ ಪೊಲೀಸರು ಕೇಸ್ ದಾಖಲಿಸಿದ್ದಾರೆ.
ರಾಜ್ಯ ಸರ್ಕಾರ ‘ನೀಲವೆಂಬು ಕದಿನೀರ್’ವಿತರಿಸುತ್ತಿರುವುದನ್ನು ವಿರೋಧಿಸಿ ಇತ್ತೀಚಿಗೆ ಟ್ವೀಟ್ ಮಾಡಿದ್ದ ಕಮಲ್ ಹಾಸನ್ ಅವರು, ‘ನೀಲವೆಂಬು ಕದಿನೀರ್’ಬಗ್ಗೆ ಸೂಕ್ತ ಸಂಶೋಧನ ನಡೆಯುವವರೆಗೆ ಆ ಸಿದ್ಧ ಔಷಧಿಯನ್ನು ವಿತರಿಸದಂತೆ ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿದ್ದರು.
‘ನೀಲವೆಂಬು ಕದಿನೀರ್’ಅಲೋಪಥಿಕ್ ನಿಂದಲೇ ಸಂಶೋಧನೆ ಮಾಡಬೇಕು ಎಂದೇನಿಲ್ಲ. ಆದರೆ ಸಂಪ್ರದಾಯವಾದಿಗಳೂ ಅದನ್ನು ಮಾಡಲೇಬೇಕು. ಇಲ್ಲದಿದ್ದರೆ ಅದರಿಂದ ಅಡ್ಡ ಪರಿಣಾಮಗಳು ಉಂಟಾಗಬಹುದು ಎಂದು ಕಮಲ್ ಹಾಸನ್ ಅವರು ಎಚ್ಚರಿಕೆ ನೀಡಿದ್ದರು.
ಕಮಲ್ ಹಾಸನ್ ಅವರ ಹೇಳಿಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ತಮಿಳುನಾಡು ಆರೋಗ್ಯ ಸಚಿವ ಸಿ ವಿಜಯಬಾಸ್ಕರ್ ಅವರು, ಡೆಂಗಿ ತಡೆಗೆ ಸಾಂಪ್ರದಾಯಿಕ ಔಷಧಿ ಬಳಕೆಯನ್ನು ಸಮರ್ಥಿಸಿಕೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com