ಎಲ್ಲಾ ಪ್ರೇಮ ವಿವಾಹ ಲವ್ ಜಿಹಾದ್ ಅಲ್ಲ; ಅನೀಸ್ - ಶೃತಿ ಮದುವೆ 'ಮಾನ್ಯ': ಕೇರಳ ಹೈಕೋರ್ಟ್

ಎಲ್ಲಾ ಅಂತರ್ ಧರ್ಮೀಯ ಪ್ರೇಮ ವಿವಾಹಗಳನ್ನು ಲವ್ ಜಿಹಾದ್ ಎನ್ನಲು ಸಾಧ್ಯವಿಲ್ಲ ಎಂದಿರುವ ಕೇರಳ ಹೈಕೋರ್ಟ್,....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಕೊಚ್ಚಿ: ಎಲ್ಲಾ ಅಂತರ್ ಧರ್ಮೀಯ ಪ್ರೇಮ ವಿವಾಹಗಳನ್ನು ಲವ್ ಜಿಹಾದ್ ಎನ್ನಲು ಸಾಧ್ಯವಿಲ್ಲ ಎಂದಿರುವ ಕೇರಳ ಹೈಕೋರ್ಟ್, ಕಣ್ಣೂರು ನಿವಾಸಿಗಳಾದ ಶೃತಿ ಮತ್ತು ಅನೀಸ್ ಹಮೀದ್ ಅವರ ಅಂತರ್ ಧರ್ಮೀಯ ವಿವಾಹ ಮಾನ್ಯ ಎಂದು ಪರಿಗಣಿಸಿ ಪತಿಯೊಂದಿಗೆ ತೆರಳಲು ಪತ್ನಿ ಶೃತಿಗೆ ಗುರುವಾರ ಅನುಮತಿ ನೀಡಿದೆ.
ಅನೀಸ್ - ಶೃತಿಯ ಅಂತರ್ ಧರ್ಮೀಯ ಮದುವೆ ಮಾನ್ಯತೆಯನ್ನು ಎತ್ತಿ ಹಿಡಿದ ವಿಭಾಗೀಯ ಪೀಠ, ಪ್ರೀತಿಗೆ ಯಾವುದೇ ಗಡಿರೇಖೆಗಳಿಲ್ಲದಿರುವುದರಿಂದ ಇಂತಹ ಮದುವೆಗಳನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದೆ.
ಅನೀಸ್ ಶೃತಿಯನ್ನು ಬಲವಂತವಾಗಿ ಅಪಹರಿಸಿ, ಆಕೆಯನ್ನು ಇಸ್ಲಾಂಗೆ ಮತಾಂತರ ಮಾಡಿದ್ದಾರೆ. ಹೀಗಾಗಿ ಅವರ ಮದುವೆ ಮಾನ್ಯತೆಯನ್ನು ರದ್ದುಗೊಳಿಸಬೇಕು ಎಂದು ಕೋರಿ ಹೈಕೋರ್ಟ್ ಅರ್ಜಿ ಸಲ್ಲಿಸಲಾಗಿತ್ತು.
ಅಕ್ಟೋಬರ್ 10ರಂದು ಹಾದಿಯಾ ಪ್ರಕರಣದ ವಿಚಾರಣೆಯ ವೇಳೆಯೂ ಎಲ್ಲಾ ಅಂತರ್ ಧರ್ಮೀಯ ವಿವಾಹಗಳನ್ನು ಲವ್ ಜಿಹಾದ್ ಎಂದು ಹೇಳಲು ಸಾಧ್ಯವಾಗುವುದಿಲ್ಲ ಎಂದು ಹೈಕೋರ್ಟ್ ಹೇಳಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com