ಮಹಾ ಸರ್ಕಾರದಿಂದ ರೈತರ ಸಾಲ ಮನ್ನಾ ಯೋಜನೆಗೆ 4 ಸಾವಿರ ಕೋಟಿ ರು. ಬಿಡುಗಡೆ

ಮಹಾರಾಷ್ಟ್ರ ಸರ್ಕಾರ ರೈತರ ಸಾಲ ಮನ್ನಾ ಯೋಜನೆಯ ಮೊದಲ ಹಂತವಾಗಿ ಗುರುವಾರ ನಾಲ್ಕು ಸಾವಿರ ಕೋಟಿ ರುಪಾಯಿ....
ದೇವೇಂದ್ರ ಫಡ್ನವಿಸ್
ದೇವೇಂದ್ರ ಫಡ್ನವಿಸ್
ಮುಂಬೈ: ಮಹಾರಾಷ್ಟ್ರ ಸರ್ಕಾರ ರೈತರ ಸಾಲ ಮನ್ನಾ ಯೋಜನೆಯ ಮೊದಲ ಹಂತವಾಗಿ ಗುರುವಾರ ನಾಲ್ಕು ಸಾವಿರ ಕೋಟಿ ರುಪಾಯಿ ಬಿಡುಗಡೆ ಮಾಡಿದ್ದು, ಇದರಿಂದ ರಾಜ್ಯದ ಸುಮಾರು ಎಂಟು ಲಕ್ಷ ರೈತರಿಗೆ ಲಾಭವಾಗಲಿದೆ.
ಇನ್ನು ನಿಯಮಿತವಾಗಿ ಸಾಲ ಮರುಪಾವತಿ ಮಾಡುವ 3.78 ಲಕ್ಷ ರೈತರಿಗೆ ಪ್ರೋತ್ಸಾಹ ಧನವಾಗಿ 800 ಕೋಟಿ ರುಪಾಯಿ ಬಿಡುಗಡೆ ಮಾಡುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಘೋಷಿಸಿದ್ದಾರೆ.
ಸಾಲಮನ್ನಾ ವಿತರಣೆಗಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಿಎಂ, ಸಾಲ ಮನ್ನಾ ಯೋಜನೆಗೆ ಹಂತ ಹಂತವಾಗಿ ಹಣ ಬಿಡುಗಡೆ ಮಾಡಲಾಗುವುದು ಮತ್ತು ನವೆಂಬರ್ ನವೆಂಬರ್ 15ರ ವೇಳೆಗೆ ಶೇ.80ರಷ್ಟು ಹಣ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.
ದೇವೇಂದ್ರ ಫಡ್ನವಿಸ್ ನೇತೃತ್ವದ ಬಿಜೆಪಿ ಸರ್ಕಾರ ಕಳೆದ ಜೂನ್ ನಲ್ಲಿ ರೈತರ ಸಾಲ ಮನ್ನಾಕ್ಕಾಗಿ 34,000 ಕೋಟಿ ರು.ಗಳ ಪ್ಯಾಕೇಜ್ ಪ್ರಕಟಿಸಿತ್ತು. 1.5 ಲಕ್ಷ ರು. ವರೆಗಿನ ರೈತರ ಸಾಲಗಳನ್ನು ಸಂಪೂರ್ಣ ಮನ್ನಾ ಮಾಡುತ್ತೇವೆ. ನಿಯಮಿತವಾಗಿ ಸಾಲ ಮರುಪಾವತಿ ಮಾಡುವ ರೈತರಿಗೆ ಶೇ 25ರಷ್ಟು ಸಾಲವನ್ನು ಪ್ರತಿಫಲವಾಗಿ ನೀಡುತ್ತೇವೆ ಎಂದು ಫಡ್ನವಿಸ್ ತಿಳಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com