ಪಂಜಾಬ್: ಓಬಿಸಿ, ಕೆನೆಪದರದ ವಾರ್ಷಿಕ ಆದಾಯ ಮಿತಿ ಹೆಚ್ಚಳ

ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಇತರ ಹಿಂದುಳಿದ ವರ್ಗ (ಓಬಿಸಿ) ಮತ್ತು ಹಿಂದುಳಿದ ವರ್ಗಗಳ ಕೆನೆ ಪದರದ ಒಟ್ಟು ವಾರ್ಷಿಕ ಆದಾಯ ಮಿತಿಯನ್ನು
ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್
ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್
ಚಂಡೀಗಢ: ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಇತರ ಹಿಂದುಳಿದ ವರ್ಗ (ಓಬಿಸಿ) ಮತ್ತು ಹಿಂದುಳಿದ ವರ್ಗಗಳ ಕೆನೆ ಪದರದ ಒಟ್ಟು ವಾರ್ಷಿಕ ಆದಾಯ ಮಿತಿಯನ್ನು ಈಗಿರುವ  6 ಲಕ್ಷದಿಂದ 8 ಲಕ್ಷ ರೂ. ಗೆ ಹೆಚ್ಚಳ ಮಾಡಲು ಅನುಮೋದನೆ ನೀಡಿದ್ದಾರೆ.
ಓಬಿಸಿ ಮತ್ತು ಹಿಂದುಳಿದ ವರ್ಗಗಳ ವಿಷಯದಲ್ಲಿ ಹೆಚ್ಚಿನ ಸಾಮಾಜಿಕ ನ್ಯಾಯ ಸಿಗಬೇಕೆನ್ನುವ ಕೇಂದ್ರ ಸರ್ಕಾರದ ನಿರ್ದೇಶನಕ್ಕೆ ಅನುಗುಣವಾಗಿ ಅವರ ಆದಾಯ ಮಿತಿಯಲ್ಲಿ ಏರಿಕೆ ಮಾಡಲಾಗಿದೆ ಎಂದು ಅಧಿಕೃತ ವಕ್ತಾರರು ತಿಳಿಸಿದ್ದಾರೆ.
ಈ ಆಗಸ್ಟ್ ನಲ್ಲಿ ಕೇಂದ್ರ ಸರ್ಕಾರ ಓಬಿಸಿ ಮತ್ತು ಕೆನೆಪದರದವರ ವಾರ್ಷಿಕ ಒಟ್ಟು ಆದಾಯವನ್ನು 6 ರಿಂದ 8 ಲಕ್ಷ  ರೂ.ಗೆ ಏರಿಸಿ ಆದೇಶ ಹೊರಡಿಸಿತ್ತು..
1993ರಲ್ಲಿ ಒಬಿಸಿ ಕೆನೆಪದರ ವಾರ್ಷಿಕ ಆದಾಯ ಮಿತಿ 1 ಲಕ್ಷ ರೂ.ಆಗಿದ್ದಿದ್ದನ್ನು 2004ರಲ್ಲಿ 2.5 ಲಕ್ಷಕ್ಕೆ ಏರಿಸಲಾಗಿತ್ತು. ಮತ್ತೆ 2008ರಲ್ಲಿ 4.5 ಲಕ್ಷ ಕ್ಕೆ, 2013ರಲ್ಲಿ 6ಲಕ್ಕಕ್ಕೆ ಏರಿಕೆ ಮಾಡಲಾಗಿತ್ತು. 1993ರಿಂದ ಈ ತನಕ ಒಟ್ಟು 4 ಬಾರಿ ಓಬಿಸಿ ಮತ್ತು ಹಿಂದುಳಿದ ವರ್ಗದ ಕೆನೆಪದರದವರ  ವಾರ್ಷಿಕ ಆದಾಯ ಮಿತಿಯನ್ನು ಹೆಚ್ಚಳ ಮಾಡಲಾಗಿದೆ..

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com