ಗುಜರಾತ್ ಚುನಾವಣೆಯ ದಿನಾಂಕ ನಿಗದಿಪಡಿಸುವ ಅಧಿಕಾರವನ್ನು ಪ್ರಧಾನಿಗಳಿಗೆ ನೀಡಲಾಗಿದೆ: ಪಿ. ಚಿದಂಬರಂ ಟೀಕೆ

ಗುಜರಾತ್ ವಿಧಾನಸಭೆ ಚುನಾವಣೆ ದಿನಾಂಕ ಘೋಷಿಸದಿರುವುದಕ್ಕೆ ಕೇಂದ್ರ ಮಾಜಿ ಸಚಿವ ಹಾಗೂ ಕಾಂಗ್ರೆಸ್ ...
ಪಿ.ಚಿದಂಬರಂ
ಪಿ.ಚಿದಂಬರಂ
ಚೆನ್ನೈ: ಗುಜರಾತ್ ವಿಧಾನಸಭೆ ಚುನಾವಣೆ ದಿನಾಂಕ ಘೋಷಿಸದಿರುವುದಕ್ಕೆ ಕೇಂದ್ರ ಮಾಜಿ ಸಚಿವ ಹಾಗೂ ಕಾಂಗ್ರೆಸ್ ನ ಹಿರಿಯ ಮುಖಂಡ ಪಿ. ಚಿದಂಬರಂ ಚುನಾವಣಾ ಆಯೋಗವನ್ನು ಪ್ರಶ್ನಿಸಿದ್ದಾರೆ. 
ಈ ಬಗ್ಗೆ ಟ್ವಿಟ್ಟರ್ ನಲ್ಲಿ ಕಟುವಾಗಿ ಟೀಕಿಸಿರುವ ಚಿದಂಬರಂ, ಗುಜರಾತ್ ಚುನಾವಣೆಗೆ ದಿನಾಂಕ ನಿಗದಿಪಡಿಸಿ ಘೋಷಿಸಲು ಚುನಾವಣಾ ಆಯೋಗ ಪ್ರಧಾನ ಮಂತ್ರಿಗೆ ಅಧಿಕಾರ ನೀಡಿದೆ. ಗುಜರಾತ್ ಸರ್ಕಾರಕ್ಕೆ ಅನುಕೂಲವಾಗಲು ಅದು ಎಲ್ಲಾ ಯೋಜನೆ, ರಿಯಾಯಿತಿಗಳನ್ನು ಘೋಷಣೆ ಮಾಡಿದ ನಂತರ ದೀರ್ಘ ರಜೆಯ ಬಳಿಕ ಚುನಾವಣಾ ಆಯೋಗ ದಿನಾಂಕವನ್ನು ಘೋಷಣೆ ಮಾಡುತ್ತದೆ ಎಂದು ಟೀಕಿಸಿದ್ದಾರೆ.
ಚಿದಂಬರಂ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ, ಮುಂಬರುವ ಗುಜರಾತ್ ಚುನಾವಣೆ ಬಗ್ಗೆ ಇಡೀ ಕಾಂಗ್ರೆಸ್ ಗೆ ಭೀತಿಯುಂಟಾಗಿದೆ ಎಂದರು.
ಚುನಾವಣಾ ಆಯೋಗ ಇತ್ತೀಚೆಗೆ ಹಿಮಾಚಲ ಪ್ರದೇಶದ ಚುನಾವಣಾ ದಿನಾಂಕವನ್ನು ಘೋಷಿಸಿದ್ದು ಗುಜರಾತ್ ಗೆ ದಿನಾಂಕ ಘೋಷಣೆ ಮಾಡದಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಆಸ್ಪದ ಮಾಡಿದೆ. ಚುನಾವಣಾ ಆಯೋಗದ ಮೇಲೆ ಬಿಜೆಪಿ ಪ್ರಭಾವ ಬೀರಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com