ಪ್ರಧಾನಿ ನರೇಂದ್ರ ಮೋದಿ ಕೇದಾರನಾಥ ದೇವಸ್ಥಾನದಲ್ಲಿ
ದೇಶ
ಕೇದಾರನಾಥ ದೇವಸ್ಥಾನಕ್ಕೆ ಪ್ರಧಾನಿ ಭೇಟಿ: ಪ್ರಾರ್ಥನೆ ಸಲ್ಲಿಕೆ
ಉತ್ತರಾಖಂಡದ ರುದ್ರಪ್ರಯಾಗ್ ಜಿಲ್ಲೆಯ ಕೇದಾರನಾಥ ದೇವಾಲಯಕ್ಕೆ ಇಂದು ಬೆಳಗ್ಗೆ ಭೇಟಿ ನೀಡಿದ ಪ್ರಧಾನ...
ಕೇದಾರನಾಥ(ಉತ್ತರಾಖಂಡ): ಉತ್ತರಾಖಂಡದ ರುದ್ರಪ್ರಯಾಗ್ ಜಿಲ್ಲೆಯ ಕೇದಾರನಾಥ ದೇವಾಲಯಕ್ಕೆ ಇಂದು ಬೆಳಗ್ಗೆ ಭೇಟಿ ನೀಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಾರ್ಥನೆ ಸಲ್ಲಿಸಿದರು. ಪ್ರಧಾನಿಯವರು ದೇವಳದ ಗರ್ಭಗುಡಿಯ ಹತ್ತಿರ ಕುಳಿತು ಪ್ರಾರ್ಥನೆ ಸಲ್ಲಿಸಿದರು. ಶಿವನಿಗೆ ರುದ್ರಾಭಿಷೇಕ ಸಲ್ಲಿಸಿದರು.
ಪ್ರಧಾನಿಗಳ ಜೊತೆ ಉತ್ತರಾಖಂಡ ರಾಜ್ಯಪಾಲ ಕೆ.ಕೆ.ಪೌಲ್ ಮತ್ತು ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಕೂಡ ಇದ್ದರು. ದೇವಸ್ಥಾನದ ಅರ್ಚಕರು ಮತ್ತು ಸ್ಥಳೀಯರು ಪ್ರಧಾನಿಯನ್ನು ಸ್ವಾಗತಿಸಿದರು. ದೇವಸ್ಥಾನವನ್ನು ಹಳದಿ ಹೂವುಗಳಿಂದ ಅಲಂಕರಿಸಲಾಗಿತ್ತು.
ಹಿಮಾಲಯ ಬೆಟ್ಟದಲ್ಲಿರುವ ಶಿವನ ದೇವಸ್ಥಾನ ಚಳಿಗಾಲದಲ್ಲಿ ನಾಳೆಯಿಂದ ಆರು ತಿಂಗಳ ಕಾಲ ಮುಚ್ಚಲಿದೆ.
ಪೂಜಾ ಸಲ್ಲಿಕೆ ಬಳಿಕ ಪ್ರಧಾನಿ ದೇವಳದ ಪುನರ್ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಮಳೆಗಾಲದಲ್ಲಿ ಕೇದಾರನಾಥಕ್ಕೆ ಪ್ರಧಾನಿ ಭೇಟಿ ನೀಡುತ್ತಿರುವುದು ಇದು ಎರಡನೇ ಬಾರಿ. ಚಳಿಗಾಲದ ಬಳಿಕ ದೇವಸ್ಥಾನದ ಬಾಗಿಲು ಮತ್ತೆ ತೆರೆದ ನಂತರ ಕಳೆದ ಮೇ 3ರಂದು ಪ್ರಧಾನಿ ಭೇಟಿ ನೀಡಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ