ಸಣ್ಣ ವ್ಯಾಪಾರಿಗಳಿಗೆ ಹೆಚ್ಚಿನ ಜಿಎಸ್ಟಿ ರಿಯಾಯಿತಿ ಗಾಗಿ ಆರ್ ಎಸ್ ಎಸ್ ಲಾಬಿ

ಮುಂದಿನ ಜಿಎಸ್ಟಿ ಕೌನ್ಸಿಲ್ ಸಭೆಗೆ ಕೇವಲ ಮೂರು ವಾರಗಳಿವೆ ಎನ್ನುವಾಗ, ಆರ್ ಎಸ್ ಎಸ್ ಮತ್ತು ಸರ್ಕಾರದ ಮಧ್ಯೆ ತೀವ್ರವಾದ ಚರ್ಚೆ ನಡೆಯುತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಮುಂದಿನ ಜಿಎಸ್ಟಿ ಕೌನ್ಸಿಲ್ ಸಭೆಗೆ ಕೇವಲ ಮೂರು ವಾರಗಳಿವೆ ಎನ್ನುವಾಗ, ಆರ್ ಎಸ್ ಎಸ್ ಮತ್ತು ಸರ್ಕಾರದ ಮಧ್ಯೆ ತೀವ್ರವಾದ ಚರ್ಚೆ ನಡೆಯುತ್ತಿದೆ. ನಿರ್ಣಾಯಕ ಗುಜರಾತ್ ವಿಧಾನಸಭೆ  ಚುನಾವಣೆಯಲ್ಲಿ ಆಡಳಿತ ಪಕ್ಷಕ್ಕೆ ಬಲ ತುಂಬುವ ಸಣ್ಣ ವ್ಯಾಪಾರಿಗಳಿಗೆ ಜಿಎಸ್ಟಿ ಇಂದ ದೊಡ್ಡ ರಿಯಾಯಿತಿಗಳನ್ನು ಘೋಷಿಸಲು ಸರ್ಕಾರವು ಸಮ್ಮತಿಸಿದೆ.
ಮೂಲಗಳ ಪ್ರಕಾರ, ನವೆಂಬರ್ 9-10ರಂದು ಜಿಎಸ್ಟಿ ಕೌನ್ಸಿಲ್ ಗೌಹಾಟಿಯಲ್ಲಿ ಸಭೆ ಸೇರುವಾಗ ಸಣ್ಣ ವ್ಯಾಪಾರಿಗಳಿಗೆ ಅನುಕೂಲವಾಗುವಂತೆ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಅದರಂತೆ ಸಣ್ಣ ವ್ಯಾಪಾರಿಗಳಿಗೆ ತಮ್ಮ ಸಂಯೋಜನಾ ಮಿತಿಯನ್ನು ಈಗಿನ  1.5 ಕೋಟಿ ರೂ. ನಿಂದ  3 ಕೋಟಿ ರೂ. ಗೆ ಹೆಚ್ಚಳ ಮಾಡಲಿದೆ. ಈ ಪ್ರಕಾರ, ನಿಗದಿತ ಮಿತಿಗಿಂತ ಕಡಿಮೆ ವಾರ್ಷಿಕ ವಹಿವಾಟು ನಡೆಸುವ ವ್ಯಾಪಾರಿಗಳು ಕನಿಷ್ಠ ದರದಲ್ಲಿ ತೆರಿಗೆಗಳನ್ನು ಪಾವತಿಸಬಹುದು. ಈ ಯೋಜನೆಯಡಿಯಲ್ಲಿ ಹೆಚ್ಚು ಸಂಖ್ಯೆಯ ವ್ಯಾಪಾರಿಗಳನ್ನು ಇರಿಸಿಕೊಳ್ಳಲು ಅಂತರರಾಜ್ಯ ವಹಿವಾಟಿಗೂ ಅನುಮತಿ ನೀಡುವ ಸಾಧ್ಯತೆ ಇದೆ.
ಮಧ್ಯ ಪ್ರದೇಶದ ಮೊರೆನಾ ದ ವ್ಯಾಪಾರಿ ಅಥವಾ ಸಣ್ಣ ಉತ್ಪಾದಕ ರಾಜಾಸ್ಥಾನದ ಧೋಲ್ಪುರ್ ಗೆ ಸರಕನ್ನು ಮಾರಲು ಸಾಧ್ಯವಿಲ್ಲಕೆಲವೇ ಕಿಮೀ ಗಳಾಷ್ಟು ದೂರದಲ್ಲಿದ್ದರೂ ಸಹ  ಅವರು ಜಿಎಸ್ಟಿ ಮಿತಿ ವಿಭಿನ್ನವಾಗಿರುವ ಕಾರಣ ಈ ಪರಿಸ್ಥಿತಿ ಇದೆ "ಎಂದು ಸಣ್ಣ ಕೈಗಾರಿಕೆ ಫರ್ಮ್ ನಂತೆ ಕಾರ್ಯನಿರ್ವಹಿಸುತ್ತಿರ್ತುವ ಆರ್ ಎಸ್ ಎಸ್ ಅಂಗ ಸಂಸ್ಥೆ ಲಘು ಉದ್ಯೋಗ್ ಭಾರತಿಯ ಓಂ ಪ್ರಕಾಶ್ ಮಿತ್ತಲ್ ಹೇಳಿದರು.
ರಾಜಸ್ಥಾನದ ಚುರುದಲ್ಲಿರುವ ವ್ಯಾಪಾರಿಗಳು ಮತ್ತು ಸಣ್ಣ ಉತ್ಪಾದಕರು ನೆರೆರಾಜ್ಯ ಹರ್ಯಾಣದ ಸಿರ್ಸಾಗೆ ಈ ಹಿಂದಿನ ರೂಢಿಯಂತೆ ವ್ಯಾಪಾರದ ವಿನಾಯಿತಿಗಳನ್ನು ಪಡೆದುಕೊಳ್ಳಲು ಸಾಧ್ಯವಾಗದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು ಮಿತ್ತಲ್ ವಿವರಿಸಿದರು. "ಯೋಜನೆಯಡಿಯಲ್ಲಿ ಅಂತರರಾಜ್ಯ ಮಾರಾಟವನ್ನು ಅನುಮತಿಸುವ ಕುರಿತು ಸರ್ಕಾರ ಪರಿಹರಿಸಲಿದೆ ಎಂದು ನಾನು ಭರವಸೆ ಹೊಂದಿದ್ದೇನೆ" ಎಂದು ಅವರು ತಿಳಿಸಿದರು.
ಹಿರಿಯ ಆರ್ ಎಸ್ ಎಸ್ ಕಾರ್ಯಕರ್ತರು ಸಣ್ಣ ಉದ್ಯಮಗಳನ್ನು ದೊಡ್ಡ ಸಂಸ್ಥೆಗಳೊಂದಿಗೆ ಸಮಾನವಾಗಿ ನಿಲ್ಲಿಸುವ ಕುರಿತು ಫ್ಲ್ಯಾಗ್ ಮಾಡಿದ್ದಾರೆ. ಗೋದ್ರೇಜ್ ಸಂಸ್ಥೆ ಬೀಗಗಳನ್ನು ತಯಾರಿಸುತ್ತದೆ, ಅದರಂತೆಯೇ ಅಲಿಗಢ್ ನ ನೂರಾರು ಸಣ್ಣ ಉದ್ದಿಮೆದಾರರು ಸಹ ಬೀಗಗಳನ್ನು ತಯಾರು ಮಾಡುತ್ತಾರೆ. ಆದರೆ ಗೋದ್ರೇಜ್ ಉತ್ತಮ ದರ್ಜೆಯ ಕಬ್ಬಿಣ ಬಳಾಸಿ ಬೀಗ ತಯಾರಿಸಿದರೆ ಉಳಿದ ಸಣ್ಣ ಉದ್ದಿಮೆದಾರರು ಅಂತಹಾ ಸ್ಟಾಂಡರ್ಡ್ ಕಬ್ಬಿಣ ಬಳಾಸಲಾರರು. ಆದರೆ ಇಬ್ಬರೂ ಸಹ ಶೇ. 28 ರ ಜಿಎಸ್ಟಿ ತೆರಿಗೆ ಪಾವತಿಸುತ್ತಾರೆ. ಹಾಗಾಗಿ, ಸಣ್ಣ ವ್ಯಾಪಾರಿಗಳು ಮತ್ತು ಉತ್ಪಾದಕರನ್ನು ಉತ್ಪಾದಿಸುವ ಸರಕಿಗೆ ಶೇ. 25 ರಿಯಾಯಿತಿಗಳನ್ನು ನೀಡಲು ನಾವು ಸರ್ಕಾರವನ್ನು ಕೇಳಿದ್ದೇವೆ, ಮಿತ್ತಲ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.
ಆರ್ ಎಸ್ ಎಸ್ ಕಾರ್ಯಕರ್ತರು ಬಿಜೆಪಿ ಉಪಾಧ್ಯಕ್ಷ ವಿನಯ್ ಸಹಸ್ರಬುದ್ಧೆ ಮತ್ತು ಕೇಂದ್ರ ಸಚಿವ ಅರುಣ್ ಜೇಟ್ಲಿ, ಪಿಯೂಷ್ ಗೋಯಲ್ ಅವರನ್ನು ಸ್ಥಳೀಯ ಸಣ್ಣ ವ್ಯಾಪಾರಿಗಳು ಮತ್ತು ಉತ್ಪಾದಕರಿಗೆ ತೆರಿಗೆ ಇಳಿಸಿ ಅನುಕೂಲ ಮಾಡಿಕೊಡುವಂತೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com