ಕಾಂಗ್ರೆಸ್ ಗೆ ಚುನಾವಣಾ ಭೀತಿ: ಚಿದಂಬರಂ ವಿರುದ್ಧ ಗುಜರಾತ್ ಸಿಎಂ ವಾಗ್ದಾಳಿ

ಚುನಾವಣಾ ಆಯೋಗವನ್ನು ಟೀಕಿಸಿದ್ದ ಮಾಜಿ ಕೇಂದ್ರ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಅವರ ವಿರುದ್ಧ....
ವಿಜಯ್ ರುಪಾನಿ
ವಿಜಯ್ ರುಪಾನಿ
ಅಹಮದಾಬಾದ್: ಚುನಾವಣಾ ಆಯೋಗವನ್ನು ಟೀಕಿಸಿದ್ದ ಮಾಜಿ ಕೇಂದ್ರ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಗುಜರಾತ್ ಮುಖ್ಯಮಂತ್ರಿ ವಿಜಯ್ ರುಪಾನಿ ಅವರು, ಕಾಂಗ್ರೆಸ್ ಗೆ ಚುನಾವಣಾ ಭೀತಿ ಇದೆ ಎಂದು ಶುಕ್ರವಾರ ಹೇಳಿದ್ದಾರೆ.
ಇಂದು ಗಾಂಧಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರುಪಾನಿ ಅವರು, ಚಿದಂಬರಂ ಮತ್ತು ಕಾಂಗ್ರೆಸ್ ಗೆ ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಯ ಭೀತಿ ಕಾಡುತ್ತಿದೆ ಎಂದಿದ್ದಾರೆ.
ಗುಜರಾತ್ ವಿಧಾನಸಭೆ ಚುನಾವಣೆ ಸರಿಯಾದ ಸಮಯಕ್ಕೆ ನಡೆಯುತ್ತೆ ಅಂತ ನಾವು ನಂಬಿದ್ದೇವೆ ಮತ್ತು ನಡೆದೇ ನಡೆಯುತ್ತೆ. ಆದರೆ ಕಾಂಗ್ರೆಸ್ ಗೆ ಸೋಲಿನ ಭೀತಿಯಿಂದ ಚುನಾವಣಾ ಆಯೋಗವನ್ನು ಟೀಕಿಸುತ್ತಿದೆ ಎಂದು ಚಿದಂಬರಂ ಅವರಿಗೆ ರುಪಾನಿ ತಿರುಗೇಟು ನೀಡಿದ್ದಾರೆ.
ಚುನಾವಣಾ ಆಯೋಗ ಗುಜರಾತ್ ಚುನಾವಣೆಗೆ ದಿನಾಂಕ ನಿಗದಿಪಡಿಸುವ ಅಧಿಕಾರವನ್ನು ಪ್ರಧಾನಿ ನರೇಂದ್ರ ಮೋದಿಗೆ ನೀಡಿದೆ. ಗುಜರಾತ್ ಸರ್ಕಾರಕ್ಕೆ ಅನುಕೂಲವಾಗಲು ಅದು ಎಲ್ಲಾ ಯೋಜನೆ, ರಿಯಾಯಿತಿಗಳನ್ನು ಘೋಷಣೆ ಮಾಡಿದ ನಂತರ ದೀರ್ಘ ರಜೆಯ ಬಳಿಕ ಚುನಾವಣಾ ಆಯೋಗ ದಿನಾಂಕವನ್ನು ಘೋಷಣೆ ಮಾಡುತ್ತದೆ ಎಂದು ಚಿದಂಬರಂ ಟ್ವೀಟ್ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com