ಜಮ್ಮು ಕಾಶ್ಮೀರ: ಪಾಕ್ ಕದನ ವಿರಾಮ ಉಲ್ಲಂಘನೆ, ಓರ್ವ ಸೇನಾ ಸಹಾಯಕ ಸಾವು, ಹುಡುಗಿಗೆ ಗಾಯ

ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಕಮಾಲ್ಕೋಟ್ ವಲಯದಲ್ಲಿ ಪಾಕಿಸ್ತಾನದ ಸೈನಿಕರ ಗುಂಡಿನ ಚಕಮಕಿಯಲ್ಲಿ ಓರ್ವ ಸೈನ್ಯದ ಸಹಾಯಕ ಸತ್ತು ಇನ್ನೋರ್ವ ಹುಡುಗಿ ಗಾಯಗೊಂಡಿದ್ದಾರೆ.
ಜಮ್ಮು ಕಾಶ್ಮೀರ: ಪಾಕ್ ನಿಂದ ಕದನ ವಿರಾಮ ಉಲ್ಲಂಘನೆ, ಓರ್ವ ಸೇನಾ ಸಹಾಯಕ ಸಾವು, ಹುಡುಗಿಗೆ ಗಾಯ
ಜಮ್ಮು ಕಾಶ್ಮೀರ: ಪಾಕ್ ನಿಂದ ಕದನ ವಿರಾಮ ಉಲ್ಲಂಘನೆ, ಓರ್ವ ಸೇನಾ ಸಹಾಯಕ ಸಾವು, ಹುಡುಗಿಗೆ ಗಾಯ
ಶ್ರೀನಗರ, ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಕಮಾಲ್ಕೋಟ್ ವಲಯದಲ್ಲಿ ಪಾಕಿಸ್ತಾನದ ಸೈನಿಕರ ಗುಂಡಿನ ಚಕಮಕಿಯಲ್ಲಿ ಓರ್ವ ಸೈನ್ಯದ ಸಹಾಯಕ ಸತ್ತು ಇನ್ನೋರ್ವ ಹುಡುಗಿ ಗಾಯಗೊಂಡಿದ್ದಾರೆ.
"ಕಮಾಲ್ಕೋಟ್ ಪ್ರದೇಶದ ಗಡಿ ನಿಯಂತ್ರಣ ರೇಖೆ ಯ ಉದ್ದಕ್ಕೂ ಪಾಕಿಸ್ತಾನಿ ಪಡೆಗಳು ಕದನ ವಿರಾಮ ಉಲ್ಲಂಘನೆ ನಡೆಸಿವೆ " ಎಂದು ಸೈನ್ಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಾಕಿಸ್ತಾನದ ಪಡೆಗಳು ವಿವೇಚನಾರಹಿತವಾಗಿ  ಗುಂಡಿನ ದಾಳಿ ನಡೆಸಿದಾಗ, ಓರ್ವ ಸೇನಾ ಸಹಾಯಕ ಕೊಲ್ಲಲ್ಪಟ್ಟಿದ್ದಾನೆ ಎಂದು ಸೇನಾ ಅಧಿಕಾರಿ ಹೇಳಿದರು. 
ಪಾಕಿಸ್ತಾನದ ಕದನ ವಿರಾಮ ಉಲ್ಲಂಘನೆಗೆ ಭಾರತೀಯ ಸೇನಾ ಸಿಬ್ಬಂದಿ ತಕ್ಕ ಉತ್ತರ ನೀಡಿದ್ದಾರೆಂದು ಅವರು ಹೇಳಿದರು. ಘಟನೆಯಲ್ಲಿ ಗಾಯಗೊಂಡ ಹುಡುಗಿಯನ್ನು ಚಿಕಿತ್ಸೆಗಾಗಿ  ಉರಿ ಪಟ್ತಣದ ಆಸ್ಪತ್ರೆಗೆ ಸೇರಿಸಲಾಗಿದೆ. 
ಜಮ್ಮು ಮತ್ತು ಕಾಶ್ಮೀರದ ಗಡಿಯುದ್ದಕ್ಕೂಪಾಕಿಸ್ತಾನ ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುತ್ತಿದ್ದು ಈ ವರ್ಷ ಈ ಕದನ ವಿರಾಮ ಉಲ್ಲಂಘನೆ ಪ್ರಮಾಣದಲ್ಲಿ ತೀವ್ರ ಹೆಚ್ಚಳವಾಗಿದೆ.  ಭಾರತವು ಪಾಕಿಸ್ತಾನದೊಂದಿಗೆ 3,323 ಕಿ.ಮೀ ಉದ್ದದ ಗಡಿಯನ್ನು ಹಂಚಿಕೊಂಡಿದೆ. ಇದರಲ್ಲಿ 221 ಕಿ.ಮೀ. ಐಬಿ ಮತ್ತು 740 ಕಿ.ಮೀ.ಎಲ್ ಓಸಿ ಸೇರಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com