ಭ್ರಷ್ಟಾಚಾರಿಗಳ ಬಗ್ಗೆ ವರದಿ ಮಾಡದಂತೆ ರಾಜಸ್ತಾನ ಸರ್ಕಾರದಿಂದ ಸುಗ್ರೀವಾಜ್ಞೆ

ಭ್ರಷ್ಟಾಚಾರಿಗಳ ರಕ್ಷಣೆಗೆ ಮುಂದಾಗಿರುವ ರಾಜಸ್ತಾನದ ವಸುಂಧರಾ ರಾಜೇ ನೇತೃತ್ವದ ಬಿಜೆಪಿ ಸರ್ಕಾರ, ನಿವೃತ್ತ ಹಾಗೂ ಹಾಲಿ....
ವಸುಂಧರಾ ರಾಜೇ
ವಸುಂಧರಾ ರಾಜೇ
ಜೈಪುರ: ಭ್ರಷ್ಟಾಚಾರಿಗಳ ರಕ್ಷಣೆಗೆ ಮುಂದಾಗಿರುವ ರಾಜಸ್ತಾನದ ವಸುಂಧರಾ ರಾಜೇ ನೇತೃತ್ವದ ಬಿಜೆಪಿ ಸರ್ಕಾರ, ನಿವೃತ್ತ ಹಾಗೂ ಹಾಲಿ ನ್ಯಾಯಾಧೀಶರ ಮತ್ತು ಸರ್ಕಾರಿ ಅಧಿಕಾರಿಗಳ ವಿರುದ್ಧದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ಅನುಮತಿ ಪಡೆಯದೇ ಮಾಧ್ಯಮಗಳು ಯಾವುದೇ ವರದಿ ಪ್ರಕಟಿಸದಂತೆ ಸುಗ್ರೀವಾಜ್ಞೆ ಹೊರಡಿಸಿದೆ.
ಸರ್ಕಾರಿ ಅಧಿಕಾರಿಗಳಿಗೆ ನೆರವು ನೀಡುವಂತಹ ಸುಗ್ರೀವಾಜ್ಞೆ ಇದಾಗಿದ್ದು, ಭ್ರಷ್ಟಾಚಾರದ ವಿರುದ್ದ ತನಿಖೆ ನಡೆಸುವ ಮೊದಲು ಮತ್ತು ಅದರ ಬಗ್ಗೆ ವರದಿ ಮಾಡುವ ಮೊದಲು ರಾಜ್ಯ ಸರ್ಕಾರದ ಅನುಮತಿ ಪಡೆಯುವಂತೆ ಆದೇಶಿಸಲಾಗಿದೆ. ನಿರ್ಬಂಧ ವಿಧಿಸಲಾಗಿದೆ.
ಈ ಸುಗ್ರೀವಾಜ್ಞೆಯ ಅನ್ವಯ ನಿವೃತ್ತ ಅಥವಾ ಹಾಲಿ ನ್ಯಾಯಾಧೀಶರು, ಮ್ಯಾಜಿಸ್ಟ್ರೇಟ್‌ ಅಥವಾ ಸರ್ಕಾರಿ ಅಧಿಕಾರಿಗಳ ಭ್ರಷ್ಟಾಚಾರದ ತನಿಖೆಗೆ ರಾಜ್ಯ ಸರ್ಕಾರದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಕರ್ತವ್ಯದ ಅವಧಿಯಲ್ಲಿ ತೆಗೆದುಕೊಂಡ ಯಾವುದೇ ನಿರ್ಧಾರಕ್ಕೆ ಇದು ಅನ್ವಯವಾಗಲಿದೆ.
ಒಂದು ವೇಳೆ ತನಿಖೆ ಕೋರಿ ರಾಜ್ಯ ಸರ್ಕಾರಕ್ಕೆ ಅರ್ಜಿ ಬಂದರೆ ಅದರ ಬಗ್ಗೆ ಪರಿಶೀಲನ ೆಮಾಡಲು ಸರ್ಕಾರಕ್ಕೆ ಆರು ತಿಂಗಳ ಕಾಲಾವಕಾಶವಿರುತ್ತದೆ. ಈ ಕುರಿತು ರಾಜ್ಯ ಸರ್ಕಾರ ನಿರಾಕರಿಸಿದರೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತಿಲ್ಲ ಮತ್ತು ಅವರ ಹೆಸರು, ವಿಳಾಸ, ಫೋಟೋ ಹಾಗೂ ಕುಟುಂಬದ ಬಗ್ಗೆ ಯಾವುದೇ ಮಾಹಿತಿ ಪ್ರಸಾರ ಮಾಡದಂತೆ ಮತ್ತು ಪ್ರಕಟಿಸದಂತೆ ನಿರ್ಬಂಧ ವಿಧಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com