ಪಿಡಿಪಿ ತೊರೆದ ಜಮ್ಮು ಶಾಸಕ, ರಾಜವಂಶಸ್ಥ ವಿಕ್ರಮಾದಿತ್ಯ ಸಿಂಗ್

ಜಮ್ಮು ಪಿಡಿಪಿ ಶಾಸಕ, ಕಾಶ್ಮೀರದ ಮಹಾರಾಜರ ಹರಿಸಿಂಗ್ ಮೊಮ್ಮಗ ವಿಕ್ರಮಾದಿತ್ಯ ಸಿಂಗ್ ಪಿಡಿಪಿ ಪಕ್ಷ ತೊರೆದಿದ್ದಾರೆ.
ವಿಕ್ರಮಾದಿತ್ಯ ಸಿಂಗ್
ವಿಕ್ರಮಾದಿತ್ಯ ಸಿಂಗ್
ಜಮ್ಮು: ಜಮ್ಮು ಪಿಡಿಪಿ ಶಾಸಕ, ಕಾಶ್ಮೀರದ ಮಹಾರಾಜರ ಹರಿಸಿಂಗ್ ಮೊಮ್ಮಗ ವಿಕ್ರಮಾದಿತ್ಯ ಸಿಂಗ್ ಪಿಡಿಪಿ ಪಕ್ಷ ತೊರೆದಿದ್ದಾರೆ. 
ಪಕ್ಷ ತೊರೆದಿರುವ ಬಗ್ಗೆ ಮಾತನಾಡಿರುವ ವಿಕ್ರಮಾದಿತ್ಯ ಸಿಂಗ್, ಜಮ್ಮು ಪ್ರದೇಶದ ಜನತೆಯ ಆಶೋತ್ತರಗಳಿಗೆ ಪಕ್ಷ ಸ್ಪಂದಿಸುತ್ತಿಲ್ಲ, ಈ ಹಿನ್ನೆಲೆಯಲ್ಲಿ ಪಕ್ಷದಲ್ಲಿ ಇರುವುದಕ್ಕೆ ಕಷ್ಟವಾಗುತ್ತಿದ್ದು, ರಾಜೀನಾಮೆ ನೀಡಿದ್ದೇನೆ ಎಂದು ವಿಕ್ರಮಾದಿತ್ಯ ಸಿಂಗ್ ಹೇಳಿದ್ದಾರೆ. 
ವಿಕ್ರಮಾದಿತ್ಯ ಸಿಂಗ್ ಅವರ ತಂದೆ ಕರಣ್ ಸಿಂಗ್ ಕಾಂಗ್ರೆಸ್ ಮುಖಂಡರಾಗಿದ್ದಾರೆ. ವಿಕ್ರಮಾದಿತ್ಯ ಸಿಂಗ್ ಇದೇ ವೇಳೆ ವಿಧಾನ ಪರಿಷತ್ ನ್ನು ತೊರೆಯುವ ಘೋಷಣೆಯನ್ನೂ ಮಾಡಿದ್ದು ಪಿಡಿಪಿಯೊಂದಿಗಿನ ಭಿನ್ನಾಭಿಪ್ರಾಯಕ್ಕೆ ಸಂಬಂಧಿಸಿದಂತೆ ಸಿಎಂ ಮೆಹಬೂಬಾ ಮುಫ್ತಿಗೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ. 
ಸೆ.23 ರಂದು ಡೋಗ್ರಾ ಮಹಾರಾಜ ಹರಿ ಸಿಂಗ್ ಅವರ ಜನ್ಮದಿನದ ಅಂಗವಾಗಿ ಸರ್ಕಾರಿ ರಜೆ ಘೋಷಿಸುವುದು ಹಾಗೂ ಡೋಗ್ರಾಗಳ ಆಡಳಿತಾವಧಿಯ ಮಾಹಿತಿಯನ್ನು ಪಠ್ಯಕ್ರಮದಲ್ಲಿ ಸೇರಿಸಬೇಕು ಎಂಬುದು ವಿಕ್ರಮಾದಿತ್ಯ ಸಿಂಗ್ ಅವರ ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com