2015 ರ ಬಿಜೆಪಿ ಕಚೇರಿ ಧ್ವಂಸ ಪ್ರಕರಣ: ಹಾರ್ದಿಕ್ ಪಟೇಲ್ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ!

ಮೆಹ್‌ಸಾನ ಜಿಲ್ಲೆಯ ನ್ಯಾಯಾಲಯ ಹಾರ್ದಿಕ್ ಪಟೇಲ್ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ.
ಹಾರ್ದಿಕ್ ಪಟೇಲ್
ಹಾರ್ದಿಕ್ ಪಟೇಲ್
ಅಹಮದಾಬಾದ್: ಮೆಹ್‌ಸಾನ ಜಿಲ್ಲೆಯ ನ್ಯಾಯಾಲಯ ಹಾರ್ದಿಕ್ ಪಟೇಲ್ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ. 
2015 ರಲ್ಲಿ ಬಿಜೆಪಿ ಶಾಸಕರ ಕಚೇರಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಗೆ ಹಾಜರಾಗಲು ಸೂಚಿಸಲಾಗಿತ್ತಾದರೂ ಹಾರ್ದಿಕ್ ಪಟೇಲ್ ಎರಡು ಬಾರಿ ಕೋರ್ಟ್ ಗೆ ಹಾಜರಾಗುವಲ್ಲಿ ವಿಫಲರಾಗಿದ್ದರು. ಈ ಹಿನ್ನೆಲೆಯಲ್ಲಿ 
ಕೋರ್ಟ್ ಹಾರ್ದಿಕ್ ಪಟೇಲ್ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ. 
ಮೀಸಲಾತಿಗೆ ಆಗ್ರಹಿಸಿ 2015 ರಲ್ಲಿ ಪ್ರತಿಭಟನೆ ನಡೆಸುತ್ತಿದ್ದಾಗ ವಿಸ್ನಗರ್ ನ ಬಿಜೆಪಿ ಶಾಸಕ ರಿಷೀಕೇಶ್ ಪಟೇಲ್ ಅವರ ಕಚೇರಿಯನ್ನು ಧ್ವಂಸಗೊಳಿಸುವ ಆರೋಪ ಎದುರಿಸುತ್ತಿರುವ ಹಾರ್ದಿಕ್ ಪಟೆಲ್ ಹಾಗೂ ಇತರರಿಗೆ ಈ ಹಿಂದೆ ಜಾಮೀನು ನೀಡಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com