ಪ್ರಧಾನಿ ಮೋದಿ ಇನ್‌ಸ್ಟಾಗ್ರಾಮ್‌‌ನಲ್ಲಿ 1 ಕೋಟಿ ಮೀರಿದ ಬೆಂಬಲಿಗರ ಸಂಖ್ಯೆ!

2014ರಲ್ಲಿ ಇನ್ಸ್ಟಾಗ್ರಾಮ್ ನಲ್ಲಿ ಖಾತೆ ತೆರದಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಬೆಂಬಲಿಗರ ಸಂಖ್ಯೆ 1 ಕೋಟಿ ಮೀರಿದೆ. ಆದರೆ ಮೋದಿ ಮಾತ್ರ ಇನ್‌ಸ್ಟಾಗ್ರಾಮ್‌‌ನಲ್ಲಿ...
ನರೇಂದ್ರ ಮೋದಿ
ನರೇಂದ್ರ ಮೋದಿ
ನವದೆಹಲಿ: 2014ರಲ್ಲಿ ಇನ್‌ಸ್ಟಾಗ್ರಾಮ್‌‌ನಲ್ಲಿ ಖಾತೆ ತೆರದಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆಂಬಲಿಗರ ಸಂಖ್ಯೆ 1 ಕೋಟಿ ಮೀರಿದೆ. ಆದರೆ ಮೋದಿ ಮಾತ್ರ ಇನ್‌ಸ್ಟಾಗ್ರಾಮ್‌‌ನಲ್ಲಿ ಯಾರನ್ನು ಫಾಲೋ ಮಾಡುತ್ತಿಲ್ಲ.
ಇನ್ನು ಮೊದಲ ಸ್ಥಾನ ಪಡೆದುಕೊಂಡ ನರೇಂದ್ರ ಮೋದಿ ಅವರು ಹೆಚ್ಚು ಬೆಂಬಲಿಗರನ್ನು ಹೊಂದಿರುವ ಜಾಗತಿಕ ನಾಯಕ ಎಂದೆನಿಸಿಕೊಂಡಿದ್ದಾರೆ. ಮೋದಿ ತಮ್ಮ ಖಾತೆಯಲ್ಲಿ ವಿದೇಶಿ ಪ್ರವಾಸ, ಸಭೆ, ರಾಜಕೀಯ ಮುಖಂಡರ ಭೇಟಿ ಹೀಗೆ 150ಕ್ಕೂ ಹೆಚ್ಚು ಚಿತ್ರ ಹಾಗೂ ವಿಡಿಯೋಗಳನ್ನು ಪೋಸ್ಟ್ ಮಾಡಿದ್ದಾರೆ. 
2014ರಲ್ಲಿ ಖಾತೆ ತೆರೆದಿದ್ದ ಮೋದಿ ಮ್ಯಾನ್ಮಾರ್ ನಲ್ಲಿ ನಡೆದ 25ನೇ ಏಷಿಯನ್ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದ ಚಿತ್ರವನ್ನು ಮೊದಲ ಬಾರಿಗೆ ಅಪ್ ಲೋಡ್ ಮಾಡಿದ್ದರು. ಇನ್ನು ಕಳೆದ ವಾರ ಕೇದರನಾಥ್ ಗೆ ಭೇಟಿ ನೀಡಿದ ಫೋಟೋವನ್ನು ಅಪ್ ಲೋಡ್ ಮಾಡಿದ್ದು 7 ಲಕ್ಷ 78 ಸಾವಿರಕ್ಕೂ ಹೆಚ್ಚು ಲೈಕ್ ಸಿಕ್ಕಿದ್ದು 4 ಸಾವಿಕ್ಕೂ ಹೆಚ್ಚು ಮಂದಿ ಕಮೆಂಟ್ ಮಾಡಿದ್ದಾರೆ.
ಪ್ರಧಾನಿ ಮೋದಿ ನಂತರದ ಸ್ಥಾನದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದ್ದಾರೆ. 78 ಲಕ್ಷಕ್ಕೂ ಹೆಚ್ಚು ಮಂದಿ ಫಾಲೋವರ್ಸ್ ಹೊಂದಿದ್ದಾರೆ. ಟ್ರಂಪ್ ಖಾತೆಯಿಂದ ಈವರೆಗೆ 2 ಸಾವಿರಕ್ಕೂ ಹೆಚ್ಚು ಚಿತ್ರ ಹಾಗೂ ವಿಡಿಯೋಗಳು ಪೋಸ್ಟ್ ಆಗಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com