ರಂಗಕರ್ಮಿ ರಾಮ್ ಗೋಪಾಲ್ ಬಜಾಜ್ ಗೆ ಕಾಳಿದಾಸ ಸಮ್ಮಾನ್

ಹಿರಿಯ ರಂಗಭೂಮಿ ಕಲಾವಿದ, ನಿರ್ದೇಶಕ ರಾಮ್ ಗೋಪಾಲ್ ಬಜಾಜ್ ಅವರಿಗೆ ಕಾಳಿದಾಸ ಸಮ್ಮಾನ್ ಪುರಸ್ಕಾರ ಲಭಿಸಿದೆ.
ರಾಮ್ ಗೋಪಾಲ್ ಬಜಾಜ್
ರಾಮ್ ಗೋಪಾಲ್ ಬಜಾಜ್
ನವದೆಹಲಿ: ಹಿರಿಯ ರಂಗಭೂಮಿ ಕಲಾವಿದ, ನಿರ್ದೇಶಕ ರಾಮ್ ಗೋಪಾಲ್ ಬಜಾಜ್ ಅವರಿಗೆ ಕಾಳಿದಾಸ ಸಮ್ಮಾನ್ ಪುರಸ್ಕಾರ ಲಭಿಸಿದೆ.
ಮಧ್ಯ ಪ್ರದೇಶ ಸರ್ಕಾರ ನೀಡುವ ಈ ಪುರಸ್ಕಾರವನ್ನು ಅ.31 ರಂದು ಉಜ್ಜಯಿನಿಯಲ್ಲಿ ನಡೆಯುವ ಅಖಿಲ ಭಾರತ ಕಾಳಿದಾಸ ಉತ್ಸವದಲ್ಲಿ, ಗಣ್ಯರ ಉಪಸ್ಥಿತಿಯಲ್ಲಿ ಪ್ರಧಾನ ಮಾಡಲಾಗುವುದು.
ಬಜಾಜ್ ಅವರು ರಾಷ್ಟ್ರೀಯ ನಾಟಕ ಶಾಲೆಯ ಮಾಜಿ ನಿರ್ದೇಶಕರಾಗಿದ್ದಾರೆ.
"ನನಗೀಗ 77 ವರ್ಷ, ಆದ್ದರಿಂದ ಇನ್ನೂ ತುಂಬಾ ಸಮಯ ಉಳಿದಿಲ್ಲ ... ನಾನು ಉಜ್ಜಯಿಬಿಯಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದೇನೆ" ಬಜಾಜ್ ಅವರು ದೂರವಾಣಿಯ ಮೂಲಕ ಐಎ ಎನ್ ಎಸ್ ಗೆ ತಿಳಿಸಿದ್ದಾರೆ. 
"1975 ರಲ್ಲಿ, ಉಜ್ಜಯಿನಿಯಲ್ಲಿ, ನಾನು ಕಾಳಿದಾಸನ ಜೀವನಾಧಾರಿತ ನಾಟಕವನ್ನು ಮಾಡಿದ್ದೆ.. ವರ್ಷಗಳಿಂದಲೂ ನಮ್ಮ ಗುರುಗಳಿಗೆ ಕಾಳಿದಾಸನ ಹೆಸರಿನ ಪ್ರಶಸ್ತಿಯನ್ನು ನೀದಲಾಗುತ್ತಿದೆ. ಇಂತಹಾ ಪ್ರಶಸ್ತಿಯನ್ನು ಪಡೆಯುವುದು ಗೌರವಾನ್ವಿತ ಮತ್ತು ಹೆಮ್ಮೆಯ ವಿಚಾರವಾಗಿದೆ..ನನ್ನ ಜೀವನದ ನಾಲ್ಕನೇ ಹಂತದಲ್ಲಿ ನಾನು ಅದನ್ನು ಪಡೆದುಕೊಳ್ಳುತ್ತಿದ್ದೇನೆ, ಈಗ ನಾನು ಮತ್ತೊಮ್ಮೆ ನಾಟಕದ ಕುರಿತು ಯೋಚಿಸುತ್ತಿದ್ದೇನೆ ... ಬಹುಶಃ ನಾನು ನಾಟಕದ ಕುರಿತು ಮತ್ತೆ ಏನನ್ನಾದರೂ ಮಾದಬಹುದು, ಈ ವಯಸ್ಸಿನಲ್ಲಿ ರಂಗದ ಮೇಲೆ ನಟಿಸುವುದು ಅಷ್ಟು ಸುಲಬವಲ್ಲ" ಅವರು ಹೇಳಿದರು.
ರಾಮ್ ಗೋಪಾಲ್ ಬಜಾಜ್ ಒಬ್ಬ ಪ್ರಸಿದ್ಧ ಭಾರತೀಯ ರಂಗ ನಟ, ನಿರ್ದೇಶಕ, ಶಿಕ್ಷಣತಜ್ಞ. 
ರಂಗಭೂಮಿಗೆ ನೀಡಿದ ಕೊಡುಗೆಗಾಗಿ  ಅವರಿಗೆ 2003 ರಲ್ಲಿ ಪದ್ಮಶ್ರೀ ಮತ್ತು 1996 ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಲಭಿಸಿತ್ತು.
ನತನೆಯಲ್ಲಿ ಇಂದಿಗೂ ಸಕ್ರಿಯರಾಗಿರುವ ಬಜಾಜ್ ಪ್ರಸ್ತುತ  "ರಿಷ್ತೋಂ ಕಾ ಚಕ್ರವ್ಯೂಹ್" ಟಿವಿ ಶೋ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ಅವರು ಕಂಗನಾ ರನಾವತ್ ನಟನೆಯ "ಮಣಿಕರ್ಣಿಕಾ ದಿ ಕ್ವೀನ್ ಆಫ್ ಝಾನ್ಸಿ' ನಲ್ಲಿ ಕಾಣಿಸಿಕೊಳ್ಳುತ್ತಾರೆ.
ಪ್ರತಿಷ್ಠಿತ ರಂಗಭೂಮಿ ಚಟುವಟಿಕೆಗಳನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬಜಾಜ್ ಎನ್ ಎಸ್ ಡಿ ಯ ಬಾರತ್ ರಂಗ್ ಮಹೋತ್ಸವ್ ನಡೆಸಿಕೊಟ್ಟಿದ್ದಾರೆ. ಇದರೊಡನೆ 'ಸೂರ್ಯ ಕಿ ಅಂತಿಮ್ ಕಿರಣ್ ಸೆ ಸೂರ್ಯ ಕಿ ಪೆಹ್ಲಿ ಕಿರಣ್ ತಕ್', 'ಸ್ಕಂದಗುಪ್ತ', 'ಕೈದ್-ಎ-ಹಯಾತ್', 'ಏಕ್ ದಿನ್ ಆಷಾಡ್ ಕಾ' ನಂತಹಾ ನಾಟಕದಲ್ಲಿ ಅಭಿನಯಿಸಿದ್ದಾರೆ.
ಅವರು ಹಿಂದಿ ಭಾಷೆಯಲ್ಲಿ ಗಿರೀಶ್ ಕಾರ್ನಾಡ್ ನಾಟಕ "ರಕ್ತ್ ಕಲ್ಯಾಣ್"ನ್ನು ರಂಗಕ್ಕೆ ಅಳವಡಿಸಿದ್ದಾರೆ  "ಉತ್ಸವ್", "ಪರ್ಜಾನಿಯಾ", "ಚಾಂದನಿ" ಮತ್ತು "ಮ್ಯಾಂಗೋ ಡ್ರೀಮ್ಸ್". ನಂತಹಾ ಚಿತ್ರಗಳಲ್ಲಿ ಅವರ ಅಭಿನಯವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com