ಸರ್ಕಾರಿ ನೌಕರರ ತನಿಖಾ ವಿನಾಯಿತಿ ಶಾಸನ: ರಾಜಸ್ಥಾನ ಹೈಕೋರ್ಟ್ ನಿಂದ ನೋಟೀಸ್ ಜಾರಿ

ಸರ್ಕಾರದ ಪೂರ್ವಾನುಮತಿ ಇಲ್ಲದೆ ಸರ್ಕಾರಿ ನೌಕರರ ವಿರುದ್ಧ ತನಿಖೆ ನಡೆಸದಂತೆ ರಾಜಾಸ್ಥಾನ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಸಂಬಂಧಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ರಾಜಸ್ಥಾನ ಹೈಕೋರ್ಟ್ ....
ಸರ್ಕಾರಿ ನೌಕರರ ತನಿಖಾ ವಿನಾಯಿತಿ ಶಾಸನ: ರಾಜಾಸ್ಥಾನ ಹೈಕೋರ್ಟ್ ನಿಂದ ನೋಟೀಸ್ ಜಾರಿ
ಸರ್ಕಾರಿ ನೌಕರರ ತನಿಖಾ ವಿನಾಯಿತಿ ಶಾಸನ: ರಾಜಾಸ್ಥಾನ ಹೈಕೋರ್ಟ್ ನಿಂದ ನೋಟೀಸ್ ಜಾರಿ
ಜೈಪುರ: ಸರ್ಕಾರದ ಪೂರ್ವಾನುಮತಿ ಇಲ್ಲದೆ ಸರ್ಕಾರಿ ನೌಕರರ ವಿರುದ್ಧ ತನಿಖೆ ನಡೆಸದಂತೆ ರಾಜಾಸ್ಥಾನ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ  ಸಂಬಂಧಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ರಾಜಸ್ಥಾನ ಹೈಕೋರ್ಟ್ ಇಂದು ನೋಟೀಸ್ ಜಾರಿ ಮಾಡಿದೆ.  
ಅಪರಾಧ ಕಾನೂನುಗಳು (ರಾಜಸ್ಥಾನ ತಿದ್ದುಪಡಿ) 2017ರ ಆದೇಶವನ್ನು ರಾಜಾಸ್ಥಾನದಲ್ಲಿ ಇತ್ತೀಚೆಗೆ  ಘೋಷಿಸಲಾಗಿತ್ತು. ಇದೀಗ ಸರ್ಕಾರಗಳು ತಮ್ಮ ಪ್ರತಿಕ್ರಿಯೆ ನೀಡಲು ಹೈಕೋರ್ಟ್ ಒಂದು ತಿಂಗಳ ಕಾಲಾವಕಾಶ ನೀಡಿದೆ. ಮುಂದಿನ ವಿಚಾರಣೆಯು ನವೆಂಬರ್ 27 ರಂದು ನಡೆಯಲಿದೆ.
ನ್ಯಾಯಾಲಯವು ಎಲ್ಲಾ ಏಳು ರಿಟ್ ಅರ್ಜಿಗಳು ಮತ್ತು ಪಿ ಐ ಎಲ್ ಗಳನ್ನು ಕೂಡಾ ಪರಿಶೀಲಿಸಿದ್ದು ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಸಚಿನ್ ಪೈಲಟ್ ಸಲ್ಲಿಸಿದ ಅರ್ಜಿ ಸಹ ಇದರಲ್ಲಿ ಸೇರಿದೆ. 
ಇದೇ ಸೋಮವಾರ ವಿವಿಧ ನಾಯಕರಿಂದ ಬಂದ ಟೀಕೆಗಳನ್ನು ಕಡೆಗಣಿಸಿ, ವಸುಂಧರಾ ರಾಜೇ ನೇತೃತ್ವದ ಭಾರತೀಯ ಜನತಾ ಪಾರ್ಟಿ ಸರ್ಕಾರವು ರಾಜಸ್ಥಾನ ವಿಧಾನಸಭೆಯಲ್ಲಿ ವಿವಾದಾತ್ಮಕ  ಮಸೂದೆಯನ್ನು ಮಂಡಿಸಿತ್ತು. ಈ ಮಸೂದೆಯು ಸರ್ಕಾರದ ಹಾಲಿ ಮತ್ತು ಮಾಜಿ ನ್ಯಾಯಾಧೀಶರು, ಸಾರ್ವಜನಿಕ ಸೇವೆಯಲ್ಲಿರುವವರನ್ನು ರಕ್ಷಿಸಲು ಯತ್ನಿಸುತ್ತಿದೆ. ಎನ್ನುವ ಆರೋಪವಿತ್ತು. ಜತೆಗೆ ತನಿಖೆ ನಡೆಸಲು ಸರ್ಕಾರ ಅನುಮತಿ ನೀಡುವವರೆಗೂ ಮಾಧ್ಯಮಗಳು ಇಂತಹ ಆರೋಪಗಳನ್ನು ವರದಿ ಮಾಡುವಂತಿಲ್ಲ ಎಂದು ಮಸೂದೆಯಲ್ಲಿ ಉಲ್ಲೇಖಿಸಲಾಗಿತ್ತು.
ಈ ಶಾಸನದ ಮೂಲಕ ರಾಜ್ಯ ಸರ್ಕಾರ, ಕ್ರಿಮಿನಲ್ ಪ್ರೊಸಿಜರ್ ಕೋಡ್ 1973 ಮತ್ತು ಭಾರತೀಯ ದಂಡ ಸಂಹಿತೆ 1980ರ ತಿದ್ದುಪಡಿಯನ್ನು ಜಾರಿಗೆ ತಂದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com