ಲೈಂಗಿಕ ಸಿಡಿ ಪ್ರಕರಣ: ಕಾಂಗ್ರೆಸ್ ನಾಯಕ ಭೂಪೇಶ್ ಬಾಗೇಲ್, ಪತ್ರಕರ್ತ ವಿನೋದ್ ವರ್ಮಾ ವಿರುದ್ಧ ಎಫ್ಐಆರ್ ದಾಖಲು

ರಾಜ್ಯ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಭೂಪೇಶ್ ಬಾಗೇಲ್ ಮತ್ತು ಪತ್ರಕರ್ತ ವಿನೋದ್ ವರ್ಮಾ ವಿರುದ್ಧ ಛತ್ತೀಸ್ ಘಡ ಪೊಲೀಸರು ಇಂದು ಎಫ್ಐಆರ್ ದಾಖಲಿಸಿದ್ದಾರೆ.
ವಿನೋದ್ ವರ್ಮಾ
ವಿನೋದ್ ವರ್ಮಾ
ರಾಯ್ ಪುರ: ರಾಜ್ಯ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಭೂಪೇಶ್ ಬಾಗೇಲ್ ಮತ್ತು ಪತ್ರಕರ್ತ ವಿನೋದ್ ವರ್ಮಾ ವಿರುದ್ಧ ಛತ್ತೀಸ್ ಘಡ ಪೊಲೀಸರು ಇಂದು ಎಫ್ಐಆರ್ ದಾಖಲಿಸಿದ್ದಾರೆ. ರಾಜ್ಯ ಮಂತ್ರಿ ಒಬ್ಬರ ಲೈಂಗಿಕ ಹಗರಣದ  ಸಿಡಿ ಪ್ರಕರಣದಡಿಯಲ್ಲಿ ಈ ಎಫ್ಐಆರ್ ದಾಖಲಾಗಿದೆ. ಐಐಟಿ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ. 
ಹಣ ಕೀಳುವ ಮತ್ತು ಬ್ಲ್ಯಾಕ್ ಮೇಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ ವರ್ಮಾ, ಛತ್ತೀಸ್ ಘಡ ಸಚಿವರ ಲೈಂಗಿಕ ಹಗರಣದ ಸಿಡಿ ನನ್ನ ಬಳಿ ಇದೆ ಎಂದು ಒಪ್ಪಿಕೊಂಡಿದ್ದಾರೆ.
ನನ್ನ ಬಳಿ ಛತ್ತೀಸ್ ಘಡ ಸಚಿವ ರಾಜೇಶ್ ಮುನಾಟ್ ಅವರ ಲೈಂಗಿಕ ಹಗರಣದ ಸಿಡಿ ಇದೆ ಅದಕ್ಕಾಗಿಯೇ ರಾಜ್ಯ ಸರ್ಕಾರಕ್ಕೆ ನನ್ನ ಬಗ್ಗೆ ಅಸಹನೆ ಇದೆ"ಎಂದು ಅವರು ಹೇಳಿದರು.
ಪ್ರಕಾಶ್ ಬಜಾಜ್ ಎಂಬ ವ್ಯಕ್ತಿ ವರ್ಮಾ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. "ನನ್ನ ಬಾಸ್ ನ ಲೈಂಗಿಕ ಹಗರಣದ ರಹಸ್ಯ ವೀಡಿಯೋ ಇರುವುದಾಗಿ ಹೇಳಿ ವರ್ಮಾ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರೆಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ವರ್ಮಾ ಹೊಂದಿದ ಲೈಂಗಿಕ ಹಗರಣದ ಸಿಡಿ ನಕಲಿಯಾಗಿದ್ದು  ಮುಖ್ಯಮಂತ್ರಿ ರಮಣ್ ಸಿಂಗ್ ಇದೇ ಕೂದಲೇ ತನಿಖೆ ನಡೆಸಬೇಕೆಂದು ಮುನಾಟ್ ಆಗ್ರಹಿಸಿದ್ದರು. ವರ್ಮಾ ಅವರನ್ನು ಪೋಲೀಸರು ಬಂಧಿಸಿದ ತರುವಾಯ ಮುನಾಟ್ ಈ ಹೇಳಿಕೆ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com