ಸಿರಿಯಾದಲ್ಲಿ ಇಸಿಸ್ ಸೇರಲು ಹೋಗಿದ್ದ ಕಣ್ಣೂರಿನ ಐವರ ಹತ್ಯೆ: ಪೊಲೀಸರು

ಕಣ್ಣೂರಿನಿಂದ ಸಿರಿಯಾಕ್ಕೆ ಹೋಗಿದ್ದ ತಮ್ಮ ಸಿದ್ಧಾಂತಗಳನ್ನು ಅನುಸರಿಸದಿದ್ದ ಐವರನ್ನು ಕೊಂದುಹಾಕಿದ್ದಾರೆ ಎಂದು ಪೊಲೀಸರು ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಕಣ್ಣೂರು: ಸಿರಿಯಾಕ್ಕೆ ಕಣ್ಣೂರಿನಿಂದ ಹೋಗಿದ್ದ ತಮ್ಮ ಸಿದ್ಧಾಂತಗಳನ್ನು ಅನುಸರಿಸದಿದ್ದ ಐವರನ್ನು ಕೊಂದುಹಾಕಿದ್ದಾರೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ಪೊಲೀಸರು ಮಾಧ್ಯಮಗಳಿಗೆ ಸುದ್ದಿ ಪುಷ್ಟೀಕರಿಸಲು ಪೋಟೋಗಳನ್ನು ಕೂಡ ಬಿಡುಗಡೆ ಮಾಡಿದ್ದಾರೆ.
ಕಣ್ಣೂರಿನ ಶಹನಾದ್, ಮೂಪ್ಪನ್ಪರಾದ ರಿಶಾಲ್, ವಲಪಟ್ಟನಮ್, ಶಮೀರ್, ಸನ್ಮಾನ್ ಮತ್ತು ಮುಹಮ್ಮದ್ ಶಾಜಿಲ್ ಸಿರಿಯಾಕ್ಕೆ ಹೋಗಿ ಯುದ್ಧದಲ್ಲಿ ಮೃತಪಟ್ಟವರಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಕೇರಳದ ಕಣ್ಣೂರಿನಿಂದ ಸಿರಿಯಾದ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಸಂಘಟನೆ ಸೇರಲು ಇದುವರೆಗೆ 15 ಮಂದಿ ತೆರಳಿದ್ದರು. ಅವರ ಚಲನವಲನಗಳನ್ನು ಸಂಘಟನೆ ಮುಖ್ಯಸ್ಥರು ಕಳೆದ 6 ತಿಂಗಳುಗಳ ಕಾಲ ಗಮನಿಸುತ್ತಿದ್ದರು. ಕಳೆದ ಎರಡು ದಿನಗಳಲ್ಲಿ ಐವರನ್ನು ಕೊಂದುಹಾಕಿದ್ದು ಇನ್ನು ಐವರನ್ನು ಅಪಹರಿಸಲಾಗಿದೆ.
ಈ ಐವರ ಬಂಧನದಿಂದ ಕೇರಳದಲ್ಲಿ ಇಸ್ಲಾಮಿಕ್ ಸ್ಟೇಟ್ ನ ಸಂಪರ್ಕ ಮತ್ತು ಕಾರ್ಯಾಚರಣೆ ಬಗ್ಗೆ ಮುಂದಿನ ದಿನಗಳಲ್ಲಿ ಮತ್ತಷ್ಟು ಮಾಹಿತಿ ಸಿಗುವ ಸಾಧ್ಯತೆಯಿದೆ ಎಂದು ಪೊಲೀಸರು ಹೇಳಿದ್ದಾರೆ. ಕೇಸಿಗೆ ಸಂಬಂಧಪಟ್ಟಂತೆ ವಿಚಾರಣೆ ನಡೆಸಲು ಪೊಲೀಸ್ ಸೂಪರಿಂಟೆಂಡೆಂಟ್ ಜಿ.ಶಿವ ವಿಕ್ರಮ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com