ಮುಂಬೈ: ಮಿತ್ರ ಪಕ್ಷ ಬಿಜೆಪಿ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿರುವ ಶಿವಸೇನೆ, ಮಹಾ ಸರ್ಕಾರ 34,022 ಕೋಟಿ ರೈತರ ಸಾಲ ಮನ್ನಾ ಯೋಜನೆಯನ್ನು ಭಾರಿ ಆತುರದಿಂದ ಜಾರಿಗೊಳಿಸಿದೆ ಎಂದು ಶನಿವಾರ ಆರೋಪಿಸಿದೆ.
ಮಹಾರಾಷ್ಟ್ರ ಸರ್ಕಾರ ಸಾಲ ಮನ್ನಾ ಯೋಜನೆಯನ್ನು ಆತರದಿಂದ ಜಾರಿಗೊಳಿಸಿ, ರೈತರಿಗೆ ಪರಿಹಾರ ನೀಡುವ ಬದಲು ಅವರ ದುಃಖಗಳನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ದೂರಿದೆ.
ಬಿಜೆಪಿ ರೈತರ ಸಾಲ ಮನ್ನಾ ಯೋಜನೆಯ ಲಾಭ ಪಡೆಯುವುದಕ್ಕಾಗಿ ಆತುದಿಂದ ಜಾರಿಗೊಳಿಸಿದೆ. ಆದರೆ ಈಗ ಅದು ಅವರಿಗೆ ಉಲ್ಟಾ ಹೊಡೆದಿದೆ. ಸರ್ಕಾರದ ಆತುರದಿಂದ ನಿರ್ಧಾರದಿಂದಾಗಿ ಜನಸಾಮಾನ್ಯರು ಹೇಗೆ ಬಲಿಪಶುವಾಗುತ್ತಾರೆ ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆ ಎಂದು ಸಾಮ್ನಾ ಸಂಪಾದಕೀಯದಲ್ಲಿ ತಿಳಿಸಿದೆ.
ಇತ್ತೀಚಿಗಷ್ಟೇ ಮಹಾರಾಷ್ಟ್ರ ಸರ್ಕಾರ ರೈತರ ಸಾಲ ಮನ್ನಾ ಯೋಜನೆಯ ಮೊದಲ ಹಂತವಾಗಿ ನಾಲ್ಕು ಸಾವಿರ ಕೋಟಿ ರುಪಾಯಿ ಬಿಡುಗಡೆ ಮಾಡಿತ್ತು.
ಶಿವಸೇನೆ ಸಹ ಮಹಾರಾಷ್ಟ್ರ ಸರ್ಕಾರದ ಭಾಗವಾಗಿದ್ದರೂ, ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಸದಾ ಟೀಕಿಸುತ್ತಲೇ ಬಂದಿದೆ.