ಜಮ್ಮು-ಕಾಶ್ಮೀರದ ಜನತೆ ಆಜಾದಿ ಕೇಳುತ್ತಿದ್ದಾರೆಂದರೆ ಸ್ವಾಯತ್ತತೆ ಬಯಸುತ್ತಿದ್ದಾರೆಂದು ಅರ್ಥ: ಚಿದಂಬರಂ

ಜಮ್ಮು-ಕಾಶ್ಮೀರದ ಜನತೆ ಆಜಾದಿ ಕೇಳುತ್ತಿದ್ದಾರೆ ಎಂದರೆ ಸ್ವಾಯತ್ತತೆ ಬಯಸುತ್ತಿದ್ದಾರೆಂದು ಅರ್ಥ ಎಂದು ಮಾಜಿ ಗೃಹ ಚಿದಂಬರಂ ಹೇಳಿದ್ದಾರೆ.
ಪಿ ಚಿದಂಬರಂ
ಪಿ ಚಿದಂಬರಂ
Updated on
ರಾಜ್ಕೋಟ್: ಜಮ್ಮು-ಕಾಶ್ಮೀರದ ಜನತೆ ಆಜಾದಿ ಕೇಳುತ್ತಿದ್ದಾರೆ ಎಂದರೆ ಸ್ವಾಯತ್ತತೆ ಬಯಸುತ್ತಿದ್ದಾರೆಂದು ಅರ್ಥ ಎಂದು ಮಾಜಿ ಗೃಹ ಚಿದಂಬರಂ ಹೇಳಿದ್ದಾರೆ. 
ರಾಜಕೋಟ್ ನಲ್ಲಿ ಮಾತನಾಡಿರುವ ಚಿದಂಬರಂ, ಜಮ್ಮು-ಕಾಶ್ಮಿರದ ಜನತೆ ಆಜಾದಿ ಬಯಸುತ್ತಿದ್ದಾರೆ ಎಂದರೆ ಅದರ ಅರ್ಥ ಹೆಚ್ಚಿನ ಸ್ವಾಯತ್ತತೆ ಬಯಸುತ್ತಿದ್ದಾರೆ ಎಂದು ನಾನು ಅಲ್ಲಿ ನಡೆಸಿದ ಸಂವಾದದಿಂದ ತಿಳಿಯಿತು. ಜಮ್ಮು-ಕಾಶ್ಮೀರದ ಜನತೆಗೆ ಮತ್ತಷ್ಟು ಹೆಚ್ಚಿನ ಅಧಿಕಾರ ನೀಡಬೇಕು ಹಾಗೂ ಕೆಲವು ಭಾಗಗಳಲ್ಲಿ ಸ್ವಾಯತ್ತತೆ ನೀಡಬೇಕಿದೆ ಎಂದು ಚಿದಂಬರಂ ಹೇಳಿದ್ದಾರೆ. 
ಜಮ್ಮು-ಕಾಶ್ಮೀರಕ್ಕೆ ಸ್ವಾಯತ್ತತೆ ನೀಡುವ ಅಂಶವನ್ನು ಪರಿಗಣಿಸಬೇಕಿದೆ, ಹೀಗೆ ಮಾಡಿದರೂ ಸಹ ಜಮ್ಮು-ಕಾಶ್ಮೀರ ಭಾರತದ ಭಾಗವಾಗಿಯೇ ಉಳಿಯಲಿದೆ. ಆದರೆ ಆರ್ಟಿಕಲ್ 370 ರ ಅಡಿಯಲ್ಲಿ ಹೆಚ್ಚಿನ ಅಧಿಕಾರ ಸಿಗಲಿದೆಯಷ್ಟೇ ಎಂದು ಚಿದಂಬರಂ ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com